ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ: 2 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಏರಿಕೆ!

ಬೆಂಗಳೂರು: ಅಸ್ಪೃಶ್ಯತೆ ನಿವಾರಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹ ಮಾಡಿಕೊಂಡರೆ ಹಾಲಿ ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು 2 ಲಕ್ಷ ರೂ.ಗಳಿಂದ 2.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಯ ಮಹಿಳೆಯರು ಬೇರೆ ಜಾತಿಯ ಪುರುಷರನ್ನು ವಿವಾಹವಾದರೆ ಹಾಲಿ ನೀಡುತ್ತಿರುವ 3 ಲಕ್ಷ ರೂ.ಗಳ ಪ್ರೋತ್ಸಾಹ ಧನದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರಿಸಿ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ. ಕೇಂದ್ರ ಸರಕಾರವು ಅಂತರ್ಜಾತಿ ವಿವಾಹ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪರಿಷ್ಕರಣೆ ಮಾಡಲಾಗಿದೆ. ದೇವದಾಸಿಯರ ಗಂಡು ಮಕ್ಕಳು ಇತರೆ ಜಾತಿ ಹುಡುಗಿಯನ್ನು ವಿವಾಹವಾದರೆ 3 ಲಕ್ಷ ಹಾಗೂ ದೇವದಾಸಿಯರ ಹೆಣ್ಣು ಮಕ್ಕಳು ಇತರೆ ಜಾತಿಯ ಹುಡುಗನನ್ನು ವಿವಾಹವಾದರೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ. ಷರತ್ತುಗಳು ಹೀಗಿವೆ
  • ಪತಿ/ಪತ್ನಿ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಸಕ್ಷಮ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರ ಪಡೆದಿರಬೇಕು.
  • ಇತರೆ ರಾಜ್ಯದ ಪುರುಷ/ಮಹಿಳೆಯನ್ನು ವಿವಾಹವಾದಲ್ಲಿ ಪತಿ/ಪತ್ನಿ ಇಬ್ಬರಲ್ಲಿ ಒಬ್ಬರು ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿರಬೇಕು ಮತ್ತು ಕಾಯಂ ನಿವಾಸಿಯಾಗಿರಬೇಕು.
  • ಗುರುತಿಸಲ್ಪಟ್ಟ ದೇವದಾಸಿಯವರ ಮಕ್ಕಳನ್ನು ಇನ್ನೊಬ್ಬ ದೇವದಾಸಿಯರ ಮಕ್ಕಳು ಮದುವೆಯಾದರೆ ಪ್ರೋತ್ಸಾಹ ಧನಕ್ಕೆ ಅರ್ಹರಲ್ಲ.
  • ಈ ಸೌಲಭ್ಯ ಪಡೆಯುವ ಯುವತಿಯರ ವಯೋಮಿತಿ ಕನಿಷ್ಠ 18 ರಿಂದ 42 ಇರಬೇಕು.
  • ಅಂತರ್ಜಾತಿ ವಿವಾಹ, ದೇವದಾಸಿಯರ ಮಕ್ಕಳ ವಿವಾಹ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಒಳ ಸಮುದಾಯಗಳ ವಿವಾಹ ಪ್ರಕರಣಗಳಲ್ಲಿ ಪ್ರೋತ್ಸಾಹ ಧನದಲ್ಲಿ ಶೇ.50 ರಷ್ಟು ಮೊತ್ತವನ್ನು ಆರ್‌ಟಿಜಿಎಸ್‌/ಎನ್‌ಇಎಫ್‌ಟಿ ಮೂಲಕ ಒಂದೇ ಕಂತಿನಲ್ಲಿ ದಂಪತಿಗಳ ಹೆಸರಿನ ಜಂಟಿ ಖಾತೆಗೆ ಜಮೆ ಮಾಡಬೇಕು. ಉಳಿದ ಶೇ.50 ರಷ್ಟು ಮೊತ್ತವನ್ನು ಪತ್ನಿ-ಪತಿ ಇಬ್ಬರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು 3 ವರ್ಷಗಳ ಮುಂಚೆ ಇದನ್ನು ನಗದೀಕರಿಸಿಕೊಳ್ಳಲು ಅವಕಾಶ ಇಲ್ಲ.


from India & World News in Kannada | VK Polls https://ift.tt/3nS650U

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...