ಪ್ಲಾಟ್‌ಫಾರ್ಮ್‌ನಲ್ಲಿ ಇಟ್ಟಿದ್ದ ನೀರಿನ ಬಾಟಲ್‌ಗಳನ್ನೇ ಲೂಟಿ ಮಾಡಿದ್ರಾ ವಲಸೆ ಕಾರ್ಮಿಕರು..?

(ಉತ್ತರ ಪ್ರದೇಶ): ಶ್ರಮಿಕ್ ವಿಶೇಷ ರೈಲುಗಳಲ್ಲಿ ತಮ್ಮ ಹುಟ್ಟೂರು ಸೇರುತ್ತಿರುವ ವಲಸೆ ಕಾರ್ಮಿಕರು, ಕದಿಯುವ ದೃಶ್ಯ ಭಾರೀ ವೈರಲ್ ಆಗಿದೆ. ಲಖನೌನ ದೀನ್‌ದಯಾಳ್ ಉಪಾಧ್ಯಾಯ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ ಬಳಿ ಪೇರಿಸಿ ಇಟ್ಟಿದ್ದ ನೀರಿನ ಬಾಟಲ್‌ಗಳನ್ನು ರೈಲಿನಲ್ಲಿ ಬಂದ ಲೂಟಿ ಮಾಡುವ ದೃಶ್ಯ ಭಾರೀ ವೈರಲ್ ಆಗಿದೆ. ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ಅವರ ಹುಟ್ಟೂರು ತಲುಪಿಸಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಈ ರೈಲು ಲಖನೌನ ನಿಲ್ದಾಣ ತಲುಪುತ್ತಿದ್ದಂತೆಯೇ ರೈಲಿನಲ್ಲಿ ಇದ್ದ ಕಾರ್ಮಿಕರು ಪ್ಲಾಟ್‌ಫಾರ್ಮ್‌ನಲ್ಲಿ ಇದ್ದ ನೀರಿನ ಬಾಟಲ್‌ಗಳನ್ನು ನೋಡಿ ರೈಲಿನಿಂದ ಇಳಿದು ಬಾಟಲ್‌ಗಳನ್ನು ಹೊತ್ತುಕೊಂಡು ರೈಲಿಗೆ ಮರಳುತ್ತಾರೆ. ಈ ದೃಶ್ಯ ಚಿತ್ರೀಕರಣ ಆಗಿದ್ದು ಯಾವಾಗ ಎಂದು ತಿಳಿದುಬಂದಿಲ್ಲ. ಆದ್ರೆ, ಭಾರೀ ಸಂಖ್ಯೆಯ ವಲಸೆ ಕಾರ್ಮಿಕರು ಹಾಡಹಗಲೇ ಈ ಕೃತ್ಯ ಎಸಗೋದು ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೊಂದು ಪ್ಯಾಕ್‌ನಲ್ಲಿ 10 ಲೀಟರ್‌ ನೀರು ಇರಿಸಲಾಗಿತ್ತು. ಒಬ್ಬೊಬ್ಬ ಕಾರ್ಮಿಕನೂ ಒಂದೊಂದು ಪ್ಯಾಕೆಟ್ ನೀರು ಹೊತ್ತೊಯ್ಯುವ ದೃಶ್ಯ ದಾಖಲಾಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆಯೇ ಇಂಟರ್‌ನೆಟ್‌ನಲ್ಲಿ ಪರ-ವಿರೋಧ ವಾದ ವ್ಯಕ್ತವಾಗಿದೆ. ವಲಸೆ ಕಾರ್ಮಿಕರನ್ನು ಅವರ ಹುಟ್ಟೂರು ತಲುಪಿಸಲು ಸರ್ಕಾರ ವಹಿಸಿರುವ ನಿರ್ಲಕ್ಷ್ಯ ಎಂದು ಕೆಲವರು ವಾದಿಸಿದ್ದಾರೆ. ಕನಿಷ್ಟ ಮೂಲಸೌಲಭ್ಯವಾದ ನೀರನ್ನೂ ಸರ್ಕಾರ ನೀಡಿಲ್ಲ ಎಂದು ಬಹುತೇಕ ಮಂದಿ ಚಾಟಿ ಬೀಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವ ಅವರಿಗೆ ಊಟ, ನೀರು ಸಿಕ್ಕಿದ್ದರೆ ಏಕೆ ಕಳ್ಳತನ ಮಾಡುತ್ತಿದ್ದರು ಎಂಬ ವಾದವೂ ಕೇಳಿ ಬಂದಿದೆ.


from India & World News in Kannada | VK Polls https://ift.tt/3d0mlIb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...