ಗುವಾಹಟಿ: ಹೊಸ ವರ್ಷದಲ್ಲಿ ಗೆಲುವಿನ ಆರಂಭವನ್ನು ಎದುರು ನೋಡುತ್ತಿರುವ , ಪ್ರವಾಸಿ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿ ಸಲುವಾಗಿ ಇಲ್ಲಿನ ಬಾರಬತಿ ಕ್ರೀಡಾಂಗಣಕ್ಕೆ ಆಗಮಿಸಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಟಾಸ್ ನಂತರ ಮಳೆರಾಯನ ಆಟ ಶುರುವದ್ದರಿಂದ ಪಂದ್ಯ ಆರಂಭಕ್ಕೆ ಅಡಚಣೆ ಎದುರಾಯಿತು. ಕಳೆದ ವರ್ಷ ವಿಶ್ವಕಪ್ ವೈಫಲ್ಯ ಹೊರತಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಕೊಹ್ಲಿ ಸಾರಥ್ಯದ ಭಾರತ ತಂಡ ಅಧಿಕಾರಯುತ ಪ್ರದರ್ಶನ ನೀಡಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ದ್ವಿಪಕ್ಷೀಯ ಟಿ20 ಸರಣಿಗಳನ್ನಾಡಲು ಎದುರು ನೋಡುತ್ತಿದೆ. ಅಂತೆಯೇ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಬಳಿಕ ಭಾರತ ಆಸ್ಟ್ರೇಲಿಯಾ ಎದುರು ಅಷ್ಟೇ ಪಂದ್ಯಗಳ ಒಡಿಐ ಸರಣಿಯನ್ನಾಡಲಿದ್ದು, ನಂತರ ಕಿವೀಸ್ ಪ್ರವಾಸ ಕೈಗೊಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಇದರೊಂದಿಗೆ ಐಪಿಎಲ್‌ನ 13ನೇ ಆವೃತ್ತಿ ಆರಂಭದ ಹೊತ್ತಿಗೆ ಭಾರತ ತಂಡ ಒಟ್ಟು 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನೂ ಆಡಲಿದೆ. ಇನ್ನು ಶ್ರೀಲಂಕಾ ವಿರುದ್ಧದ ಚುಟಕು ಕ್ರಿಕೆಟ್ ಸರಣಿಗೆ ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಗಾಯದಿಂದ ಚೇತರಿಸಿರುವ ಆರಂಭಕಾರ ಶಿಖರ್ ಧವನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಪ್ರಮುಖವಾಗಿ ಬೆನ್ನು ನೋವಿನಿಂದ ಚೇತರಿಸಿರುವ ಬುಮ್ರಾ ತಮ್ಮ ಮ್ಯಾಜಿಕ್ ಮರುಕಳಿಸಬಲ್ಲರೇ ಎಂಬುದನ್ನು ಎಲ್ಲರೂ ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಶ್ರೀಲಂಕಾ ತಂಡ ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಶಲ್ ಪೆರೆರಾ (ವಿಕೆಟ್‌ಕೀಪರ್), ನಿರೋಶನ್ ಡಿಕ್ವೆಲ್ಲಾ , ಒಶಾದ ಫರ್ನಾಂಡೊ, ಭಾನುಕ ರಾಕಪಕ್ಷ, ದಸುನ್ ಶನಕ, ಇಸುರು ಉದನ, ಲಸಿತ್ ಮಾಲಿಂಗ (ನಾಯಕ), ಲಾಹಿರು ಕುಮಾರ, ಕಸುನ್ ರಜಿತ, ಲಕ್ಷಣ್ ಸಂದಕನ್, ವಾನಿಂದು ಹಸರಂಗ. ಭಾರತ ತಂಡ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೇ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZQB4jb