ವಿಜಯಪುರ: ನಾನು ಹೊರಗಡೆ ಓಡಾಡುತ್ತಿದ್ದೇನೆ. ವಿಚಾರವಾಗಿ ಪಕ್ಷದಲ್ಲಿ ಗೊಂದಲವಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾಗೂ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾನು ನಾಡಿದ್ದು ಬೆಂಗಳೂರಿಗೆ ಹೋದ ಮೇಲೆ ಮುಖ್ಯಮಂತ್ರಿಯನ್ನು ಭೇಟಿ ಆಗುತ್ತೇನೆ. ಆಗ ಏನೇನು ಬೆಳವಣಿಗೆ ಆಗುತ್ತೋ ಗೊತ್ತಾಗುತ್ತೆ ಎಂದು ಡಿಸಿಎಂ ಹೇಳಿದರು. ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಂದ ಅರ್ಹರಿಗೆ ಸಚಿವ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿಯ ಹಾಲಿ ಮಂತ್ರಿಗಳ ಪೈಕಿ ಕೆಲವರ ತ್ಯಾಗದ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೋವಿಂದ ಕಾರಜೋಳ, "ಡಿಸಿಎಂ ಸ್ಥಾನ, ಸಚಿವ ಸ್ಥಾನ ಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದರೆ ಇವತ್ತೇ ನಾನು ತ್ಯಾಗ ಮಾಡುತ್ತೇನೆ. ಪಕ್ಷ ಏನು ನಿರ್ಣಯ ಮಾಡುತ್ತೋ ನಾನು ಅದಕ್ಕೆ ಬದ್ಧವಾಗಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಹೇಗೆ ಹೇಳ್ತಾರೋ ಹಾಗೆ ನಾನು ಚಾಚು ತಪ್ಪದೆ ಪಾಲಿಸುತ್ತೇನೆ'' ಎಂದರು. ''ಪಕ್ಷದಲ್ಲಿ ನಾನೊಬ್ಬ ಶಿಸ್ತಿನಿ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ. ಪಕ್ಷ ಸೂಚಿಸಿದ್ರೆ ನಾನು ಖಂಡಿತವಾಗಿ ತ್ಯಾಗ ಮಾಡ್ತೆನೆ'' ಎಂದ ಗೋವಿಂದ ಕಾರಜೋಳ ಸೋತವರಿಗೆ ಸ್ಥಾನಮಾನದ ವಿಚಾರವಾಗಿ ಏನು ಗೊತ್ತಿಲ್ಲ. ಗೊತ್ತಿಲ್ಲದೆ ಏನೂ ಹೇಳುವುದು ಸರಿಯಲ್ಲ ಎಂದರು. ''ವಿಜಯಪುರ ಜಿಲ್ಲೆಗೆ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆ ಇದೆ, ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಖಂಡಿತವಾಗಿ ಸಿಗಬೇಕು ಎಂಬುದು ನನ್ನ ಅಪೇಕ್ಷೆ . ಅಖಂಡ ಜಿಲ್ಲೆ ಇದ್ದಾಗ ನಾನು ವಿಜಯಪುರದವನೇ ಆಗಿದ್ದೇನೆ. ಜಿಲ್ಲೆ ವಿಂಗಡಣೆ ಆದ ಬಳಿಕ ಬಾಗಲಕೋಟೆಗೆ ಹೋಗಿದ್ದೇನೆ. ಹಾಗಾಗಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ನನ್ನ ಆಸೆಯೂ ಕೂಡ ಆಗಿದೆ'' ಎಂದು ಡಿಸಿಎಂ ಕಾರಜೋಳ ತಿಳಿಸಿದರು. ''ಡಿಸಿಎಂ ಸ್ಥಾನಗಳ ವಿಚಾರವಾಗಿ ನನಗೆ ಗೊತ್ತಿಲ್ಲ, ನಾನು ಹೆಚ್ಚಿನ ಸೌಲಭ್ಯ ಪಡೆದಿಲ್ಲ. ಡಿಸಿಎಂ ಎಂದು ಹೆಚ್ವಿನ ಭದ್ರತೆ ನನಗೆ ಬೇಡ ಎಂದು ನಾನು ಮೊದಲೇ ತಿಳಿಸಿದ್ದೇನೆ'' ಎಂದು ಕಾರಜೋಳ ಸ್ಪಷ್ಟನೆ ನೀಡಿದರು.
from India & World News in Kannada | VK Polls https://ift.tt/30UMq62