'ಬೂಮ್‌ ಬೂಮ್‌' ಬುಮ್ರಾ ಲಯ ಕಳೆದುಕೊಂಡರೆ ಸಾಕಪ್ಪ ಎಂದ ಕಿವೀಸ್‌ ಬ್ಯಾಟ್ಸ್‌ಮನ್‌!

ಆಕ್ಲೆಂಡ್‌: ಮುಂದಿನ ಮೂರು ಟಿ20 ಪಂದ್ಯಗಳಲ್ಲಿ ತಮ್ಮ ಲಯ ಕಳೆದುಕೊಂಡರೆ ಸಾಕಪ್ಪ ಎಂಬ ಹತಾಶೆಯ ಮಾತನ್ನು ನ್ಯೂಜಿಲೆಂಡ್‌ ತಂಡದ ಸ್ಟಾರ್‌ ಓಪನಿಂಗ್‌ ಬ್ಯಾಟ್ಸ್‌ಮನ್‌ ಆಡಿದ್ದಾರೆ. 'ಬೂಮ್‌ ಬೂಮ್‌' ಖ್ಯಾತಿಯ ವಿಶ್ವದ ನಂ.1 ಓಡಿಐ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರ ಡೆತ್‌ ಓವರ್‌ ಬೌಲಿಂಗ್‌ ಬಗ್ಗೆ ಮಾಡಿರುವ ಅನುಭವಿ ಬ್ಯಾಟ್ಸ್‌ಮನ್‌ ಗಪ್ಟಿಲ್‌, "ಡೆತ್‌ ಓವರ್‌ಗಳಲ್ಲಿ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಅವರ ಬತ್ತಳಿಕೆಯಲ್ಲಿ ಅದ್ಭುತ ಬೌನ್ಸರ್‌ ಮತ್ತು ಅಷ್ಟೇ ಅತ್ಯುತ್ತಮವಾದ ಮಂದಗತಿಯ ಎಸೆತವಿದೆ. ಹೀಗಾಗಿ ಅವರ ಬೌಲಿಂಗ್‌ನಲ್ಲಿ ರನ್‌ ಗಳಿಸುವುದು ಸುಲಭವಲ್ಲ. ಮುಂದಿನ ಮೂರು ಪಂದ್ಯದಲ್ಲಿ ಅವರು ಲಯ ಕಳೆದುಕೊಳ್ಳಲಿ ಎಂದು ಆಶಿಸುತ್ತೇನೆ," ಎಂದಿದ್ದಾರೆ. "ಸರಣಿಯ ಮೊದಲ ಪಂದ್ಯವನ್ನಾಡಿದ ಪಿಚ್‌ ಸಂಪೂರ್ಣ ವಿಭಿನ್ನವಾಗಿತ್ತು. ಆದರೆ, ಎರಡನೇ ಪಂದ್ಯಕ್ಕೆ ಪಿಚ್‌ ಮಂದಗತಿಯದ್ದಾಗಿತ್ತು. ಹೀಗಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಯಿತು. ನಾನು ಮತ್ತು ಮನ್ರೋ ಬ್ಯಾಟ್‌ ಮಾಡುವ ಸಂದರ್ಭದಲ್ಲಿ ಚೆಂಡು ಬ್ಯಾಟ್‌ಗೆ ಉತ್ತಮ ರೀತಿಯಲ್ಲಿ ಸಿಗುತ್ತಿತ್ತು. ಆದರೆ ನನ್ನ ವಿಕೆಟ್‌ ಬಳಿಕ ಹಿಡಿತ ಕಳೆದುಕೊಂಡೆವು. ಅಲ್ಲಿಂದ ಹಿಡಿತ ಮರಳಿ ಪಡೆಯುವ ಪ್ರಯತ್ನ ಶುರುಮಾಡಿದೆವು," ಎಂದು ಗಪ್ಟಿಲ್‌ ಹೇಳಿದ್ದಾರೆ. ಐದು ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಭಾರತ ವಿರುದ್ಧ ನ್ಯೂಜಿಲೆಂಡ್‌ ತಂಡ ಇಲ್ಲಿನ ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ 7 ವಿಕೆಟ್‌ಗಳ ಹೀನಾಯ ಸೋಲುಂಡ ಬಳಿಕ ಕಿವೀಸ್‌ ಆಟಗಾರ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲೂ 204 ರನ್‌ ಗುರಿ ಬೆನ್ನತ್ತಿ 6 ವಿಕೆಟ್‌ ಜಯ ದಾಖಲಿಸಿದ ಇದೀಗ ಸರಣಿಯಲ್ಲಿ 2-0 ಅಂತರದ ಮುನ್ನಡೆಯಲ್ಲಿದೆ. ಭಾನುವಾರದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ ತಂಡ ಟೀಮ್‌ ಇಂಡಿಯಾದ ಶಿಸ್ತಿನ ಬೌಲಿಂಗ್‌ ದಾಳಿ ಎದುರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 132 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಶಕ್ತವಾಯಿತು. ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ, 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 135 ರನ್‌ ಚಚ್ಚಿ 7 ವಿಕೆಟ್‌ ಗೆಲುವು ದಾಖಲಿಸಿತು. ಕಿವೀಸ್‌ ಪರ ಮಾರ್ಟಿನ್‌ ಗಪ್ಟಿಲ್‌ 33 ರನ್‌ ಸಿಡಿಸಿ ಉತ್ತಮ ಆರಂಭ ಒದಗಿಸಿದ್ದ ಗಪ್ಟಿಲ್‌, ತಂಡ 170 ರನ್‌ಗಳಿಸಿದ್ದರೆ ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ. "ಈ ಪಿಚ್‌ನಲ್ಲಿ 170 ರನ್‌ ಗಳಿಸಿದ್ದರೆ ಒಳ್ಳೆಯ ಮೊತ್ತವಾಗುತ್ತಿತ್ತು. ಆದರೆ ಭಾರತ ತಂಡ ನಿಜಕ್ಕೂ ಅದ್ಭುತವಾಗಿ ಬೌಲಿಂಗ್‌ ಮಾಡಿತು. ಪರಿಣಾಮ ನಾವು ಹೆಚ್ಚು ಡಾಟ್‌ ಬಾಲ್‌ಗಳನ್ನು ಆಡುವಂತಾಯಿತು. ಕಾಲಿನ್‌ ಮತ್ತು ನಾನು ಆಕ್ರಮಣಕಾರಿಯಾಗಿ ಆಡುವು ಜವಾಬ್ದಾರಿ ಹೊಂದಿದ್ದೇವೆ, ಜೊತೆಗೆ 15 ಓವರ್‌ ವರೆಗೆ ಇಬ್ಬರಲ್ಲಿ ಒಬ್ಬರು ಬ್ಯಾಟ್‌ ಮಾಡಬೇಕು. ಆದರೆ ಇದು ನಡೆಯಲಿಲ್ಲ," ಎಂದು ಹೇಳಿದ್ದಾರೆ. "ಉತ್ತಮವಾಗಿ ಬ್ಯಾಟ್‌ ಮಾಡಿ ಜೊತೆಯಾಟಗಳನ್ನು ಕಟ್ಟಿದರು. ಈ ಮೂಲಕ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ಭಾರತ ತಂಡದಲ್ಲಿ ಮ್ಯಾಚ್‌ ವಿನ್ನರ್‌ಗಳಿದ್ದಾರೆ. ಇಷ್ಟು ಚಿಕ್ಕ ಕ್ರೀಡಾಂಗಣದಲ್ಲಿ ಗುರಿ ಕಾಯ್ದುಕೊಳ್ಳುವುದು ಕಷ್ಟ," ಎಂದು ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ಗಳನ್ನು ಗಪ್ಟಿಲ್‌ ಗುಣಗಾನ ಮಾಡಿದ್ದಾರೆ. 133 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಕೆಎಲ್‌ ರಾಹುಲ್‌ (ಅಜೇಯ 57) ಮತ್ತು ಶ್ರೇಯಸ್‌ ಅಯ್ಯರ್‌ (44) ಭರ್ಜರಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಗುರಿ ಮುಟ್ಟಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2vjDtaI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...