ಹೊಸದೆಹಲಿ: ಪ್ರಧಾನಿ ಭಗನಾನ್ ಶ್ರೀರಾಮನಿದ್ದ ಹಾಗೆ ಹಾಗೂ ಕೇಂದ್ರ ಗೃಹ ಸಚಿವ ಹನುಮಂತ ಇದ್ದಂತೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ ಅವರು ಸಿಂಹ ಇದ್ದಂತೆ ಎಂದು ಹಾಡಿ ಹೊಗಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆನ್ನು ಕೇಂದ್ರ ಸರಕಾರ ಜಾರಿಗೊಳಿಸುತ್ತದೆ. ಪ್ರಪಂಚದ ಯಾವುದೇ ಶಕ್ತಿ ಕೂಡಾ ಸಿಎಎ ಜಾರಿಗೊಳಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸಿಎಎ ಹಿಂಪಡೆಯುವಂತೆ ನಡೆಯುತ್ತಿರುವ ಯಾವುದೇ ಸ್ವರೂಪದ ಪ್ರತಿಭಟನೆಗೂ ಕೇಂದ್ರ ಸರಕಾರ ಭಯಪಡುವುದಿಲ್ಲ ಎಂದರು. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ದೆಹಲಿಯ ಚುನಾವಣೆಯಲ್ಲೂ ಸಿಎಎ ಹಾಗೂ ಎನ್ಆರ್ಸಿ ಸದ್ದು ಮಾಡುತ್ತದೆ. ಸಿಎಎ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದ್ದು ಆದರೆ ಯಾವುದೇ ಕಾರಣಕ್ಕೂ ಕಾಯ್ದೆಯನ್ನು ರದ್ದು ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
from India & World News in Kannada | VK Polls https://ift.tt/2RERQPT