ಯುವರಾಜ್‌ ಸಿಂಗ್‌ ಮಾದರಿಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿದ ಕಿವೀಸ್‌ ಬ್ಯಾಟ್ಸ್‌ಮನ್‌!

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ನ ದೇಶಿ ಟೂರ್ನಿಯಾದ ಟಿ20 ಟೂರ್ನಮೆಂಟ್‌ನಲ್ಲಿ ಯುವ ಎಡಗೈ ಬ್ಯಾಟ್ಸ್‌ಮನ್‌ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ. ಭಾನುವಾರ ಸೂಪರ್‌ ಸ್ಮ್ಯಾಷ್‌ ಲೀಗ್‌ ಇತಿಹಾಸದಲ್ಲಿ ಓವರ್‌ ಒಂದರ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ನಾರ್ದನ್‌ ನೈಟ್ಸ್‌ ವಿರುದ್ಧದ ಪಂದ್ಯದಲ್ಲಿ 220 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನತ್ತಿದ್ದ ಕ್ಯಾಂಟರ್ಬರಿ ಕಿಂಗ್ಸ್‌ ತಂಡಕ್ಕೆ 16ನೇ ಓವರ್‌ನಲ್ಲಿ ಫಲಿತಾಂಶವೇ ಬದಲಾಯಿತು. ಕ್ರೀಸ್‌ಗೆ ಆಗಷ್ಟೇ ಆಗಮಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ಲಿಯೋ ಕಾರ್ಟರ್‌, ಎಡಗೈ ಸ್ಪಿನ್ನರ್‌ ಆಂಟನ್‌ ಡೆವ್ಚಿಚ್‌ ಅವರು ಎಸೆದ 16ನೇ ಓವರ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆಗೈದರು. 25 ವರ್ಷದ ಕಾರ್ಟರ್‌ ಕೇವಲ 29 ಎಸೆತಗಳಲ್ಲಿ ಅಜೇಯ 70 ರನ್‌ ಚಚ್ಚಿ ತಂಡಕ್ಕೆ 7 ವಿಕೆಟ್‌ಗಳ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಸತತ 6 ಸಿಕ್ಸರ್‌ ಬಾರಿಸುವುದಕ್ಕೂ ಮುನ್ನ ಕಾರ್ಟರ್‌ 12 ಎಸೆತಗಳಲ್ಲಿ 11 ರನ್‌ ಗಳಿಸಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸುತ್ತಿದ್ದರು. ಬಳಿಕ ಡೆವ್ಚಿಚ್‌ ಅವರ ಓವರ್‌ನಲ್ಲಿ ಮಿಡ್‌ವಿಕೆಟ್‌, ಲಾಂಗ್‌ ಆನ್‌ ಮತ್ತು ಸ್ಕ್ವೇರ್‌ಲೆಗ್‌ ಕಡೆಗೆ ಸಿಕ್ಸರ್‌ಗಳ ಸುರಿಮಳೆಗೈದರು. ದೇಶಿ ಮತ್ತು ಅಂತಾರಾಷ್ಟ್ರೀಯ ಮಟ್ಟ ಒಳಗೊಂಡಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಓವರ್‌ ಒಂದರಲ್ಲೇ 6 ಸಿಕ್ಸರ್‌ಗಳನ್ನು ಬಾರಿಸಿದವರ ಪೈಕಿ ಲಿಯೋ ಕಾರ್ಟರ್‌ ವಿಶ್ವದ 7ನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಈ ಮೂಲಕ ಗ್ಯಾರಿ ಸೋಬರ್ಸ್‌, ರವಿ ಶಾಸ್ತ್ರಿ, ಹರ್ಷಲ್‌ ಗಿಬ್ಸ್‌, , ರಾಸ್‌ ವೈಟ್ಲೀ ಹಾಗೂ ಅಫಘಾನಿಸ್ತಾನದ ಹಝರತುಲ್ಲಾ ಝಜಾಯ್‌ ಅವರನ್ನು ಹೊಂದಿರುವ ಎಲೈಟ್‌ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಯೂ ಕಾರ್ಟರ್‌ಗೆ ಒಲಿದಿದೆ. ಈ ಪಟ್ಟಿಯಲ್ಲಿ ಯುವರಾಜ್‌ ಸಿಂಗ್‌ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಬ್ಬರಿಸಿ ಮೊದಲಿಗರೆನಿಸಿದ್ದರು. ಬಳಿಕ ವೈಟ್ಲೀ (2017) ಮತ್ತು ಝಜಾಯ್‌ (2018) ಈ ಸಾಧನೆ ಮಾಡಿದ್ದರು. ವಿಶೇಷವೆಂದರೆ ಈ ಎಲ್ಲಾ ಬ್ಯಾಟ್ಸ್‌ಮನ್‌ಗಳು ಎಡಗೈ ಆಟಗಾರರಾಗಿದ್ದಾರೆ. ಜೋ ಕಾರ್ಟರ್‌ ಅವರ 6 ಸಿಕ್ಸರ್‌ಗಳ ವಿಡಿಯೊ ಈ ಟ್ವಿಟರ್‌ ಲಿಂಕ್‌ನಲ್ಲಿ ಪಡೆದುಕೊಳ್ಳ ಬಹುದಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35jmSAg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...