ಹಿಂದಿಯಲ್ಲಿ ಕೆಟ್ಟ ಪದ ಬಳಕೆ ಮಾಡಿದ ಮಾರ್ಟಿನ್ ಗಪ್ಟಿಲ್; ಕಕ್ಕಾಬಿಕ್ಕಿಯಾಗಿ ನಕ್ಕುಬಿಟ್ಟ ರೋಹಿತ್ ಶರ್ಮಾ

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ದ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 2-0ರ ಅಂತರದ ಮುನ್ನಡೆ ದಾಖಲಿಸಿದೆ. ಮೊದಲೆರಡು ಪಂದ್ಯಕ್ಕೆ ಆಕ್ಲೆಂಡ್ ಪಂದ್ಯ ಆತಿಥ್ಯ ವಹಿಸಿತ್ತು. ಇದರೊಂದಿಗೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಈ ಮಧ್ಯೆ ಕಿವೀಸ್ ಆಟಗಾರ , ಹಿಂದಿ ಭಾಷೆಯಲ್ಲಿ ಕೆಟ್ಟ ಪದ ಬಳಕೆ ಮಾಡಿ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಇದ್ದ ಕಕ್ಕಾಬಿಕ್ಕಿಯಾಗಿ ನಕ್ಕು ಬಿಟ್ಟರು. ಲೈವ್ ಟಿವಿ ಸಂದರ್ಶನದ ವೇಳೆಯಲ್ಲಿ ನಿರೂಪಕನಿಂದ ಮೈಕ್ ಕಿತ್ತುಕೊಂಡ ನೇರವಾಗಿ ಮಾರ್ಟಿನ್ ಗಪ್ಟಿಲ್ ಹಾಗೂ ರೋಹಿತ್ ಶರ್ಮಾ ಮಧ್ಯೆ ತೆರಳಿದರು. 'ವಾಟ್ಸಪ್ ಗಯ್ಸ್' ಎಂದು ಕೇಳಿದಾಗ, ಮಾರ್ಟಿನ್ ಗಪ್ಟಿಲ್ ಹಿಂದಿ ಭಾಷೆಯಲ್ಲಿ ಕೆಟ್ಟ ಪದ ಬಳಕೆ ಮಾಡಿದರು. ಅವರಿಗೆ ಟಿವಿಯಲ್ಲಿ ಲೈವ್ ಆಗಿ ಪ್ರಸಾರವಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ಪಕ್ಕದಲ್ಲಿಯೇ ನಿಂತುಕೊಂಡಿದ್ದ ರೋಹಿತ್ ಶರ್ಮಾ ಕಕ್ಕಾಬಿಕ್ಕಿಯಾಗಿ ನಕ್ಕುಬಿಟ್ಟರು. ಯುಜ್ವೇಂದ್ರ ಚಹಲ್‌ಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಳಿಕ ಗಪ್ಟಿಲ್ ಹಾಗೂ ಚಹಲ್ ಪರಸ್ಪರ ಹೆಗಲ ಮೇಲೆ ಕೈಯನ್ನಿಟ್ಟು ಅಭಿಪ್ರಾಯಗಳನ್ನು ಹಂಚಿಕೊಂಡರು. ಭಾರತ ಹಾಗೂ ಕಿವೀಸ್ ಆಟಗಾರರು ಪರಸ್ಪರ ಅತೀವ ಗೌರವವನ್ನು ಹೊಂದಿದ್ದು, ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್‌ಗನಲ್ಲಿ ಪಾಲ್ಗೊಳ್ಳುವ ಮೂಲಕ ಆಟಗಾರರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮೈದಾನದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಬಳಿಕ ಮೈದಾನದ ಹೊರಗಡೆ ಅನೋನ್ಯವಾಗಿ ಬೆರೆತುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಕಿವೀಸ್ ಸರಣಿಯ ಆರಂಭಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಸಹ ಇದನ್ನೇ ಬೊಟ್ಟು ಮಾಡಿದರು. ಕಿವೀಸ್ ಆಟಗಾರರು ಉತ್ತಮ ವ್ಯಕ್ತಿಗಳಿದ್ದು, ಏಕದಿನ ವಿಶ್ವಕಪ್‌ಗೆ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇವೆಲ್ಲವೂ ಸ್ಪರ್ಧಾತ್ಮಕ ಕ್ರಿಕೆಟ್‌ಗಷ್ಟೇ ಸೀಮಿತ ಎಂದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aQYqKH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...