ಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸಿದ ಶಿವಸೇನೆ, 10 ರೂ. ಊಟದ 'ಶಿವ ಭೋಜನ' ಯೋಜನೆಗೆ ಚಾಲನೆ

ಮುಂಬಯಿ: ಶಿವಸೇನೆಯು ಚುನಾವಣಾ ಪ್ರಣಾಳಿಕೆಯಲ್ಲಿನೀಡಿದ್ದ ಭರವಸೆಯಂತೆ 10 ರೂ.ಗೆ ಊಟ ನೀಡುವ '' ಯೋಜನೆಗೆ ಗಣರಾಜ್ಯೋತ್ಸವ ದಿನದಂದು ಚಾಲನೆ ನೀಡಲಾಗಿದೆ. ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ನೀಡಿದರು. ಆರಂಭದಲ್ಲಿ 50 ಕ್ಯಾಂಟೀನ್‌ಗಳ ಮೂಲಕ ಪ್ರಾಯೋಗಿಕಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಈ ಯೋಜನೆಯಂತೆ ಪ್ರತಿ ಜಿಲ್ಲಾಕೇಂದ್ರದಲ್ಲಿಯೂ ಕ್ಯಾಂಟೀನ್‌ ತೆರೆದು ಕೇವಲ ಹತ್ತು ರೂಪಾಯಿಗೆ ಊಟ ನೀಡಲಾಗುತ್ತದೆ. ಊಟವು ಎರಡು ಚಪಾತಿ, ಅನ್ನ, ಪಲ್ಯ, ದಾಲ್‌ ಒಳಗೊಂಡಿರುತ್ತದೆ. ಮಧ್ಯಾಹ್ನ 12ರಿಂದ 2 ಗಂಟೆವರೆಗೆ 'ಶಿವ ಭೋಜನ' ಲಭ್ಯ. ಪ್ರತಿ ಕ್ಯಾಂಟೀನ್‌ನಲ್ಲಿನಿತ್ಯ ಕನಿಷ್ಠ 500 ಊಟ ನೀಡುವ ಗುರಿ ಹೊಂದಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಯೋಜನೆಗಾಗಿ 6.4 ಕೋಟಿ ರೂ.ಗಳನ್ನು ಸರಕಾರ ಮೀಸಲಿರಿಸಿದೆ. ''ನಗರ ಪ್ರದೇಶದಲ್ಲಿಒಂದು ಊಟಕ್ಕೆ 50 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 35 ರೂ. ವೆಚ್ಚವಾಗಲಿದೆ. ಸಹಾಯಧನದ ರೂಪದಲ್ಲಿ ರಾಜ್ಯ ಸರಕಾರವೇ ಉಳಿದ ಮೊತ್ತ ಭರಿಸಲಿದೆ,'' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/2NWEV9B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...