ಭಾರತ ತಂಡಕ್ಕೀಗಲೂ ಧೋನಿ ಅವಶ್ಯಕತೆಯಿದೆ: ಸುರೇಶ್ ರೈನಾ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡಕ್ಕೀಗಲೂ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸೇವೆಯು ಅವಶ್ಯಕತೆಯಿದೆ ಎಂದು ವಿಶ್ವಕಪ್ ವಿಜೇತ ತಂಡದ ಆಲ್‌ರೌಂಡರ್ ಅಭಿಪ್ರಾಯಪಟ್ಟಿದ್ದಾರೆ. 28 ವರ್ಷಗಳ ಬಳಿಕ 2011ನೇ ಇಸವಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಸುರೇಶ್ ರೈನಾ ಅವಿಭಾಜ್ಯ ಅಂಗವಾಗಿದ್ದರು. ಅಲ್ಲದೆ ಕಳೆದ ಅನೇಕ ವರ್ಷಗಳಲ್ಲಿ ಧೋನಿ ಮೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲೂ ಧೋನಿ ಜೊತೆಗೆ ರೈನಾ ಮಹತ್ವದ ಪಾತ್ರ ನಿಭಾಯಸಿದ್ದರು. ಸದ್ಯ ಶಸ್ತ್ರ ಚಿಕಿತ್ಸೆಯ ಬಳಿಕ ಪುನಶ್ಚೇತನದ ಹಂತದಲ್ಲಿರುವ ಸುರೇಶ್ ರೈನಾ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ. ಹಾಗೊಂದು ವೇಳೆ ಐಪಿಎಲ್‌ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದರೆ ಮುಂದಿನ 2-3 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ಭಾರತೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದನ್ನು ಗುರಿಯಿಸಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾದಲ್ಲಿ ಧೋನಿ ಮಹತ್ವವನ್ನು ಸಾರಿದ್ದಾರೆ. ನನ್ನ ಪ್ರಕಾರ ಭಾರತೀಯ ತಂಡಕ್ಕೀಗಲೂ ಧೋನಿಯ ಅಗತ್ಯವಿದೆ. ಆದರೆ ಇವೆಲ್ಲವೂ ನಾಯಕ ವಿರಾಟ್ ಕೊಹ್ಲಿ ಯೋಜನೆಯ ಮೇಲೆ ಅವಲಂಬನೆವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ತಮ್ಮ ಕುಟುಂಬದ ಜೊತೆಗೆ ಮಹೇಂದ್ರ ಸಿಂಗ್ ಧೋನಿ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಹಾಗೊಂದು ವೇಳೆ ಪಂದ್ಯವನ್ನು ಬಿಟ್ಟು ತೆರಳುವುದಾದರೆ ಹೆಚ್ಚೇನು ಸದ್ದು ಮಾಡದೇ ತೆರಳಲಿದ್ದಾರೆ. ಅಷ್ಟಕ್ಕೂ ಧೋನಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದನ್ನು ನೋಡುವುದನ್ನು ಬಯಸುತ್ತೇನೆ ಎಂದರು. ಮಹೇಂದ್ರ ಸಿಂಗ್ ಧೋನಿ ಈಗಲೂ ಫಿಟ್ ಆಗಿದ್ದಾರೆ ಎಂಬುದನ್ನು ಉಲ್ಲೇಖಿಸಲು ರೈನಾ ಮರೆಯಲಿಲ್ಲ. ಅಲ್ಲದೆ ಐಪಿಎಲ್‌ನಲ್ಲಿ ಭಾಗವಹಿಸಲು ಮಾರ್ಚ್ ಮೊದಲ ವಾರದಲ್ಲಿ ಚೆನ್ನೈಗೆ ಆಗಮಿಸುವ ಬಗ್ಗೆಯೂ ಮಾಹಿತಿ ನೀಡಿದರು. 2019 ಏಕದಿನ ವಿಶ್ವಕಪ್‌ನಲ್ಲಿ ಧೋನಿ ಕೊನೆಯದಾಗಿ ಆಡಿದ್ದರು. ಅಲ್ಲಿಂದ ಬಳಿಕ ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಈ ಮಧ್ಯೆ ಮುಂಬರುವ ಟಿ20 ವಿಶ್ವಕಪ್ ಗುರಿಯಾಗಿರಿಸಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವರೇ ಎಂಬುದು ಸಾಕಷ್ಟು ವದಂತಿಗಳಿಗೆ ಕಾರಣವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RvzsbP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...