ಹುಲಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ವ್ಯಕ್ತಿ: ವಿಡಿಯೋ ವೈರಲ್‌

ಹೊಸದಿಲ್ಲಿ: ಇಬ್ಬರು ವ್ಯಕ್ತಿಗಳು ಕರಡಿಯಿಂದ ಪಾರಾದ ಕತೆಯೊಂದನ್ನು ನೀವು ಕೇಳಿರುತ್ತೀರಾ. ಒಬ್ಬ ವ್ಯಕ್ತಿ ಮರ ಹತ್ತಿ ಕುಳಿತರೆ, ಮತ್ತೊಬ್ಬ ವ್ಯಕ್ತಿ ಮರ ಹತ್ತಲು ಆಗದೆ ಸತ್ತಂತೆ ನಟಿಸಿ ತನ್ನ ಪ್ರಾಣ ಉಳಿಸಿಕೊಂಡಿದ್ದ. ಇಂತಹದ್ದೇ ಘಟನೆ ದೇಶದಲ್ಲಿ ನಡೆದಿದೆ. ಇಲ್ಲಿ ಕರಡಿ ಬದಲಾಗಿ ಇತ್ತು. ಹುಲಿಯು ಮನುಷ್ಯನ ಎದೆಯ ಮೇಲೆ ತನ್ನ ಎರಡೂ ಕಾಲುಗಳನ್ನು ಇಟ್ಟಿತ್ತು. ಆದರೆ, ಆತ ಸತ್ತಂತೆ ನಟಿಸಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹಲವು ಜನರಿದ್ದ ಪ್ರದೇಶಕ್ಕೆ ಹುಲಿ ನುಗ್ಗಿದೆ. ಈ ಮಾನವ - ಪ್ರಾಣಿ ಸಂಘರ್ಷದಲ್ಲಿ ವ್ಯಕ್ತಿಯೊಬ್ಬ ಹುಲಿ ಬಾಯಿಯಿಂದ ಉಪಾಯವಾಗಿ ಪಾರಾಗಿದ್ದಾನೆ. ಈ ಮೈನವಿರೇಳಿಸುವ ದೃಶ್ಯವನ್ನು ಐಎಫ್‌ಎಸ್‌ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕಾಡಿನಿಂದ ನಾಡಿಗೆ ಬಂದ ಹುಲಿಯನ್ನು ಓಡಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಉದ್ರಿಕ್ತ ಹುಲಿ ಜನರತ್ತ ದಾಳಿಗೆ ಮುಂದಾಗಿತ್ತು. ನಂತರ ಸನಿಹದಲ್ಲೇ ಸಿಕ್ಕ ವ್ಯಕ್ತಿಯೊಬ್ಬನ ಮೇಲೆ ಕುಳಿತಿತ್ತು. ಆದರೆ, ಆತ ಬುದ್ಧಿವಂತಿಕೆಯಿಂದ ಸತ್ತಂತೆ ನಟಿಸಿದ್ದಾನೆ. ಅಲ್ಲದೆ, ಗ್ರಾಮಸ್ಥರು ಕಲ್ಲುಗಳನ್ನು ಎಸೆದು ಹುಲಿಯನ್ನು ಆ ಸ್ಥಳದಿಂದ ಓಡಿಸಿದ್ದಾರೆ. ಇದರಿಂದ ಮನುಷ್ಯ ಹಾಗೂ ಹುಲಿ ಇಬ್ಬರ ಪ್ರಾಣವೂ ಉಳಿದಿದೆ. ಈ ವಿಡಿಯೋವನ್ನು ನನ್ನ ಹಿರಿಯರೊಬ್ಬರು ಕಳಿಸಿದ್ದಾರೆ ಎಂದೂ ಐಎಫ್‌ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಟ್ವೀಟಿಗ, ಆ ಘಟನೆಯ 30 ಸೆಕೆಂಡ್‌ ವಿಡಿಯೋ ಕಳಿಸಿದ್ದು, ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ತುಮ್ಸಾರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ.


from India & World News in Kannada | VK Polls https://ift.tt/2RScFGf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...