ಮುಂಬಯಿ / ಬೆಂಗಳೂರು: ಭಯೋತ್ಪಾದನಾ ನಿಗ್ರಹ ಪಡೆಯು ನಿವಾಸಿ ಪ್ರತಾಪ್ ಹಜ್ರಾ ಎಂಬಾತನನ್ನು ಬಂಧಿಸಿದೆ. ಇದರಿಂದಾಗಿ , ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಆಯಾಮ ದೊರೆತಂತಾಗಿದೆ. ಸ್ಫೋಟಕಗಳನ್ನು ತಯಾರಿಸಲು ಈತ ಬಲಪಂಥೀಯ ಸಂಘಟನೆಗಳಿಗೆ ನೀಡಿದ ಆರೋಪದಡಿ ಪ್ರತಾಪ್ ಹಜ್ರಾನನ್ನು ಆರೋಪಿಸಲಾಗಿದೆ. 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಆರೋಪ ಹಿನ್ನೆಲೆ ಈಗಾಗಲೇ ಪ್ರತಾಪ್ ಹಜ್ರಾನ ಸಹಚರರನ್ನು ಬಂಧಿಸಲಾಗಿದೆ. 2018ರ ನಲಸೋಪರ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ತಂಡವು ಪ್ರತಾಪ್ ಹಜ್ರಾನನ್ನು ಬಂಧಿಸಿದೆ. ಈತ ಕರ್ನಾಟಕ ಪೊಲೀಸರಿಗೂ ಅಥವಾ ಎಸ್‌ಐಟಿಗೂ ಬೇಕಾಗಿದ್ದಾನೆ. ಆರೋಪಿ ಪ್ರತಾಪ್ ವಿರುದ್ಧ 2018ರ ಆಗಸ್ಟ್ 10ರಂದು ಪ್ರಕರಣ ದಾಖಲಾಗಿತ್ತು. 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಜ್ರಾನನ್ನು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಪ್ರತಾಪ್ ಹಜ್ರಾನನ್ನು ಕಳೆದ ಸೋಮವಾರವೇ ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಮುಂಬೈ ನ್ಯಾಯಾಲಯಕ್ಕೆ ಕರೆತಂದಿದ್ದು, ಮಹಾರಾಷ್ಟ್ರ ಎಟಿಎಸ್‌ನವರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಪೊಲೀಸರ ಚಾರ್ಜ್‌ಶೀಟ್‌ನಲ್ಲೂ ಆರೋಪಿ ಹೆಸರು 2015ರ ಮಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಬಾಂಬ್ ತಯಾರಿಸುವ ತಜ್ಞ ಮತ್ತು ಅತಿಥಿ ತರಬೇತುದಾರ ಎಂದು ಹಜ್ರಾ ಹೆಸರನ್ನು ಗೌರಿ ಲಂಕೇಶ್ ಕೊಲೆ ಪ್ರಕರಣದ ಬಂಧಿತ ಶಂಕಿತನೊಬ್ಬ ತಿಳಿಸಿದ್ದಾನೆ ಎಂದು ಕರ್ನಾಟಕ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿದೆ. ಶಿಬಿರಗಳನ್ನು ಸನಾತನ ಸಂಸ್ಥೆಗೆ ಸಂಬಂಧಿಸಿರುವ ವ್ಯಕ್ತಿಗಳು ನಡೆಸಿದ್ದಾರೆ ಎಂದು ಎಸ್‌ಐಟಿ ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ. ಮತ್ತೊಬ್ಬ ಶಂಕಿತನ ನ್ಯಾಯಾಂಗ ಬಂಧನ? ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಋಷಿಕೇಶ್ ದೇವ್ಡೆಕರ್ ಅಲಿಯಾಸ್ ಮುರಳಿಯ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜಾರ್ಖಂಡ್‌ನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಎಸ್‌ಐಟಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿತ್ತು. ಬಳಿಕ ಎಸ್‌ಐಟಿ ಪೊಲೀಸರು ಆರೋಪಿ ಋಷಿಕೇಶ್ ದೇವ್ಡೆಕರ್ ಅಲಿಯಾಸ್ ಮುರಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು. ನಂತರ 15 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
from India & World News in Kannada | VK Polls https://ift.tt/2vnNjbD