ನಿರ್ಭಯಾ ಅತ್ಯಾಚಾರ ಪ್ರಕರಣ: ಮುಖೇಶ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ; ಗಲ್ಲು ಖಾಯಂ

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿ ಹಾಗೂ ಹಂತಕ ಮುಖೇಶ್‌ ಕುಮಾರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬುಧವಾರ ವಜಾಗೊಳಿಸಿದೆ. ಜಸ್ಟೀಸ್‌ ಆರ್‌. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಜಾಗೊಳಿಸಿದ್ದು, ಈ ಮೂಲಕ ಹಂತಕರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದೆ. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ಯೋಚಿಸಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಜತೆಗೆ, ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವುದನ್ನು ಪ್ರಶ್ನಿಸಲು ಜೈಲಿನಲ್ಲಿ ಅನುಭವಿಸುವ ನೋವುಗಳು ಆಧಾರವಾಗಿರಬಾರದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳ ಎದುರು ಇಡಲಾಗಿತ್ತು ಮತ್ತು ಅವರು ಅವುಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದು ತ್ರಿಸದಸ್ಯ ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎ ಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು ಸಿಂಗ್ ಅವರ ಪರವಾಗಿ ಹಾಜರಾದ ವಕೀಲರ ವಾದಗಳನ್ನು ತಳ್ಳಿಹಾಕಿತು. ದೆಹಲಿ ಸರಕಾರವು ಗೃಹ ವ್ಯವಹಾರ ಸಚಿವಾಲಯಕ್ಕೆ ಕಳುಹಿಸಿದ ಜನವರಿ 15ರ ಪತ್ರದ ಪ್ರಕಾರ, ಎಲ್ಲಾ ಸಂಬಂಧಿತ ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ನ್ಯಾಯಪೀಠ ಮಂಗಳವಾರ ಕೇಂದ್ರವು ತನ್ನ ಮುಂದೆ ಇರಿಸಿದ ಎರಡು ಫೈಲ್‌ಗಳಲ್ಲಿ ಉಲ್ಲೇಖಿಸಿದೆ. ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ವಿವರವಾದ ತೀರ್ಪುಗಳು, ಮುಖೇಶ್‌ ಸಿಂಗ್ ಸಲ್ಲಿಸಿದ ಅರ್ಜಿ, ಅವರ ಹಿಂದಿನ ಅಪರಾಧ ಇತಿಹಾಸ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ದೆಹಲಿ ಸರಕಾರವು ಗೃಹ ಸಚಿವಾಲಯಕ್ಕೆ ಕಳುಹಿಸಿದೆ ಎಂದು ನ್ಯಾಯಪೀಠ ಗಮನಿಸಿದೆ. ಕ್ಷಮಾದಾನ ಅರ್ಜಿಯನ್ನು ಮಿಂಚಿನ ವೇಗದಲ್ಲಿ ತಿರಸ್ಕರಿಸಲಾಗಿದೆ ಎಂದು ಅತ್ಯಾಚಾರಿಗಳ ಪರ ವಕೀಲರು ವಾದ ಮಾಡಿದ್ದರು. ಆದರೆ, ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಾಗ ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳು ಪರಿಗಣಿಸಿದ್ದಾರೆ ಅಲ್ಲದೆ, ಇದನ್ನು ತ್ವರಿತವಾಗಿ ನಿಭಾಯಿಸಿದರೆ, ಅದನ್ನು ಮೊದಲೇ ಕಲ್ಪಿಸಿಕೊಂಡ ಮನಸ್ಸಿನಲ್ಲಿ ತೀರ್ಪು ನೀಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠ ಹೇಳಿದೆ.


from India & World News in Kannada | VK Polls https://ift.tt/37C9yZI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...