ಹೊಸದಿಲ್ಲಿ: ಬಹು ನಿರೀಕ್ಷಿತ ಟಿ20 ಟೂರ್ನಿಯ 13ನೇ ಆವೃತ್ತಿಗೆ ವೇಳಾಪಟ್ಟಿ ಬಹುತೇಕ ಖಾತ್ರಿಯಾಗಿದ್ದು, ಮಾರ್ಚ್ 29ರಂದು ಮುಂಬೈನಲ್ಲಿ ಮೊದಲ ಪಂದ್ಯ ನಡೆಯಲಿದೆ. ರ ಆವೃತ್ತಿಗೆ ಕಳೆದ ತಿಂಗಳಷ್ಟೇ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡಗಳ ರಚನೆ ಮಾಡಿಕೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ ಮಾರ್ಚ್ 29ರಂದು ಮುಂಬೈನಲ್ಲಿ ಆರಂಭವಾಗಲಿರುವ ಟೂರ್ನಿ ಫೈನಲ್ ಪಂದ್ಯ ಮೇ 24ರಂದು ನಡೆಯಲಿದೆ. ಆದರೆ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಇನ್ನು ಬಿಡುಗಡೆ ಮಾಡಿಲ್ಲ. ಜಗತ್ತಿನ ಐಶಾರಾಮಿ ಟೂರ್ನಿ ಆಗಿರುವ ಐಪಿಎಲ್ ಈ ಬಾರಿಯೂ ಒಟ್ಟಾರೆ 57 ದಿನಗಳ ಕಾಲ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದೆ. ಟೂರ್ನಿ ಆಯೋಜನೆಯ ದಿನಗಳು ಹೆಚ್ಚಿರುವ ಕಾರಣ ಈ ಬಾರಿ ಡಬಲ್ ಹೆಡರ್ ಪಂದ್ಯಗಳ ಇಲ್ಲವಾಗಿದೆ. ಸ್ಟಾರ್ ಸ್ಪೋರ್ಟ್ಸ್ ಟೂರ್ನಿಯ ಅಧಿಕೃತ ಪ್ರಸಾರ ಹಕ್ಕನ್ನು ಪಡೆದಿದೆ. ಆದರೆ, ಈ ಬಾರಿ ಪಂದ್ಯಗಳು ಎಂದಿನಂತೆ ರಾತ್ರಿ 8 ಗಂಟೆಗೆ ಶುರುವಾಗುವುದರ ಬದಲಾಗಿ ರಾತ್ರಿ 7.30ಕ್ಕೆ ಆರಂಭವಾಗುವುದು ಬಹುತೇಕ ಖಾತ್ರಿಯಾಗಿದೆ. ಸುದ್ದಿ ಸಂಸ್ಥೆಯೊಡನೆ ಈ ಬಗ್ಗೆ ಮಾತನಾಡಿದ ಐಪಿಎಲ್ ಮೂಲಗಳು ಈ ಮಾಹಿತಿಯನ್ನು ಖಾತ್ರಿ ಪಡಿಸಿವೆ. "ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇನ್ನ ಬಿಡುಗಡೆಯಾಗಿಲ್ಲ. ಆದರೆ, ಮೇ 24ಕ್ಕೆ ಫೈನಲ್ ಪಂದ್ಯ ನಡೆಯುವುದು ಖಾತ್ರಿಯಾಗಿದೆ. ಮಾರ್ಚ್ 29ರಂದು ಆರಂಭವಾಗಲಿರುವ ಟೂರ್ನಿಯಲ್ಲಿ ಈ ಬಾರಿ ದೀರ್ಘ ಕಾಲದವರೆಗೆ ನಡೆಯಲಿದ್ದು, 45 ದಿನಗಳ ಬದಲಿಗೆ 57 ದಿನಗಳ ಕಾಲ ನಡೆಯಲಿದೆ," ಎಂದು ಮೂಲಗಳು ಹೇಳಿವೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ಪಂದ್ಯಗಳನ್ನು ಕೊಂಚ ಬೇಗ ಪ್ರಸಾರ ಮಾಡಲು ಪ್ರಸ್ತಾವಣೆ ಇಟ್ಟಿದೆ. ಹೀಗಾಗಿ ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಶುರುವಾಗುವುದು ಬಹುತೇಕ ಖಾತ್ರಿಯಾಗಿದೆ. ಕೇವಲ ಪ್ರಸಾರ ಉದ್ದೇಶದಿಂದ ಮಾತ್ರವಲ್ಲ ಪಂದ್ಯಗಳು ತಡವಾಗಿ ಅಂತ್ಯಗೊಳ್ಳುವುದನ್ನು ನಿಯಂತ್ರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZZZpCU