ಮುಂಬಯಿ: ಭಾರತ ವಿರುದ್ದ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 2020ನೇ ವರ್ಷವನ್ನು ಶ್ರೀಲಂಕಾ ವಿರುದ್ಧ ಗೆಲುವಿನೊಂದಿಗೆ ಆರಂಭಿಸಿರುವ ಟೀಮ್ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಗೆಲುವಿನ ಓಟವನ್ನು ಮುಂದುವರಿಸುವ ಇರಾದೆಯಲ್ಲಿದೆ. ಮೂರು ಪಂದ್ಯಗಳ ಕದನಕ್ಕೆ ಇತ್ತಂಡಗಳು ಸಜ್ಜಾಗಿದ್ದು, ಮೊದಲ ಪಂದ್ಯ ಮುಂಬಯಿಯ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ನಿರೀಕ್ಷೆಯಂತೆಯೇ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ನಾಯಕ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ. ಆಡುವ ಬಳಗ ಇಂತಿದೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಮಾರ್ನಸ್ ಲ್ಯಾಬುಶಾನೆ, ಸ್ಟೀವ್ ಸ್ಮಿತ್, ಆಶ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ. ದಾಖಲೆಯತ್ತ ದೃಷ್ಟಿ ಹಾಯಿಸಿದ ಭಾರತ: ಸಚಿನ್ ದಾಖಲೆ ಸನಿಹ ಕೊಹ್ಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಅವರ ಸಾಧನೆ ಸರಿಗಟ್ಟಲಿದ್ದಾರೆ. ಏಕದಿನ ಮಾದರಿಯಲ್ಲಿ ಒಟ್ಟು 49 ಶತಕ ಬಾರಿಸಿರುವ ಸಚಿನ್, ತಾಯ್ನಾಡಿನಲ್ಲಿ 20 ಶತಕ ಸಿಡಿಸಿದ್ದಾರೆ. ಕೊಹ್ಲಿ ಸದ್ಯ ತಾಯ್ನೆಲದಲ್ಲಿ 19 ಶತಕ ಬಾರಿಸಿದ್ದಾರೆ. ಕುಲ್‌ದೀಪ್ 100: ಈ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ (ಮೈದಾನಕ್ಕಿಳಿದರೆ) ಒಂದು ವಿಕೆಟ್ ಉರುಳಿಸಿದರೆ ಏಕದಿನ ಮಾದರಿಯಲ್ಲಿ 100 ವಿಕೆಟ್ ಪಡೆದ ಗರಿಮೆಗೆ ಒಳಗಾಗಲಿದ್ದಾರೆ. ರೋಹಿತ್‌ಗೆ ಬೇಕು 128 ರನ್ ರೋಹಿತ್ ಶರ್ಮಾ ಇದುವರೆಗೆ ಆಸೀಸ್ ವಿರುದ್ಧ 37 ಪಂದ್ಯಗಳಲ್ಲಿ 2037 ರನ್ ಪೇರಿಸಿದ್ದಾರೆ. ಇನ್ನೊಂದೆಡೆ ರಿಕಿ ಪಾಂಟಿಂಗ್ 59 ಪಂದ್ಯಗಳಲ್ಲಿ 2164 ರನ್ ಗಳಿಸಿದ್ದಾರೆ. ಪ್ರಸ್ತುತ ಪಟ್ಟಿಯನ್ನು ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದು, 71 ಪಂದ್ಯಗಳಲ್ಲಿ 3077 ರನ್ ಪೇರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ನಾಯಕ ವಿರಾಟ್ ಕೊಹ್ಲಿ 37 ಪಂದ್ಯಗಳಲ್ಲಿ 1727 ರನ್ ಗಳಿಸಿದ್ದಾರೆ. ಈ ಎಲ್ಲದರ ಪೈಕಿ ರೋಹಿತ್ ಶರ್ಮಾ ಅತ್ಯುತ್ತಮ ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ.
9000 ರನ್ ಮೈಲುಗಲ್ಲು ಸನಿಹದಲ್ಲಿ ರೋಹಿತ್:
ಏಕದಿನ ಕ್ರಿಕೆಟ್‌ನಲ್ಲಿ 9000 ರನ್ ಮೈಲುಗಲ್ಲು ತಲುಪಲು ರೋಹಿತ್ ಶರ್ಮಾಗೆ 56 ರನ್‌ಗಳ ಅವಶ್ಯಕತೆಯಿದೆ. ಮುಂಬಯಿ ಪಂದ್ಯದಲ್ಲೇ ಈ ಸಾಧನೆ ಮಾಡಿದರೆ ಮೂರನೇ ಅತಿ ವೇಗದಲ್ಲಿ ಈ ಮೈಲುಗಲ್ಲು ಬರೆದ ಹಿರಿಮೆಗೆ ಭಾಜನವಾಗಲಿದ್ದಾರೆ. ರೋಹಿತ್ ಶರ್ಮಾ 221 ಏಕದಿನ ಪಂದ್ಯಗಲ್ಲಲಿ (214 ಇನ್ನಿಂಗ್ಸ್) 49.14ರ ಸರಾಸರಿಯಲ್ಲಿ 8944 ರನ್ ಪೇರಿಸಿದ್ದಾರೆ. ಇದರಲ್ಲಿ 28 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ.from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3a4ozVM