ಜೆಎನ್‌ಯು ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿ: ವಿಧಿವಿಜ್ಞಾನ ತಂಡದ ಭೇಟಿ, ಪೊಲೀಸ್‌ ಸರ್ಪಗಾವಲು

ಹೊಸದಿಲ್ಲಿ: ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಜ.5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಿಯ ರಂಜನ್‌ ಕುಮಾರ್ ಮತ್ತು ಸುಚೇತಾ ತಾಲೂಕ್‌ದಾರ್‌ ( ಪೊಲೀಸರಿಂದ ಆರೊಪಿಗಳೆಂದು ಗುರುತಿಸಲ್ಪಟ್ಟವರು) ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಮಂಗಳವಾರ ವಿಚಾರಣೆಗೆ ಕರೆಯಲಾಗಿದೆ. ಜತೆಗೆ ಮಂಗಳವಾರ ವಿಶ್ವವಿದ್ಯಾಲಯಕ್ಕೆ ವಿಧಿವಿಜ್ಞಾನ (ಫೊರೆನ್ಸಿಕ್‌) ತಂಡ ಬೇಡಿ ನೀಡಲಿದ್ದು ತನಿಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸುತ್ತಲೂ ಪೊಲೀಸ್‌ ಬಿಗಿಭದ್ರತೆ ಇರಿಸಲಾಗಿದೆ. ಸೋಮವಾರವೂ ಅಪರಾಧ ವಿಭಾಗದ ಪೊಲೀಸರು ವಿವಿಗೆ ಭೇಟಿ ನೀಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್‌ ಸೇರಿದಂತೆ ಮೂವರು ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ. ಜ.5 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಯಿಷಿ ಘೋಷ್‌, ಪಂಕಜ್‌ ಮಿಶ್ರಾ, ವಾಸ್ಕರ್‌ ವಿಜಯ್‌ ಅವರ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ಶಂಕಿತರ ಪಟ್ಟಿಯಲ್ಲಿ ಈ ಮೂವರೂ ಕೂಡ ಇದ್ದಾರೆ.


from India & World News in Kannada | VK Polls https://ift.tt/2uHyPTC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...