ರಾಜೀನಾಮೆ ನೀಡಿ ಮನೆಗೆ ನಡೆಯಿರಿ, ಜೆಎನ್‌ಯು ಉಪಕುಲಪತಿಗೆ ಚಿದಂಬರಂ ಚಾಟಿ

ಹೊಸದಿಲ್ಲಿ: ‘ಹಳೆಯದನ್ನು ಮರೆತು ಹೊಸ ಜೀವನ ಆರಂಭಿಸುವಂತೆ' ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ದ ಉಪಕುಲಪತಿ ಎಂ ಜಗದೀಶ್‌ ಕುಮಾರ್‌ ಸಲಹೆ ನೀಡಿದ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಕಾಂಗ್ರೆಸ್‌ ನಾಯಕ , ಜಗದೀಶ್‌ ಕುಮಾರ್ ತಮ್ಮದೇ ಸಲಹೆಗಳನ್ನು ಪರಿಗಣಿಸಿ ಬಿಡಬೇಕು ಎಂದಿದ್ದಾರೆ. “ಜೆಎನ್‌ಯು ವಿಸಿ ವಿದ್ಯಾರ್ಥಿಗಳಿಗೆ ಹಳೆಯದನ್ನು ಮರೆತುಬಿಡಲು ಹೇಳಿದ್ದಾರೆ. ಅವರು ತಮ್ಮ ಸಲಹೆಯನ್ನು ಅನುಸರಿಸಬೇಕು. ಅವರು ಜೆಎನ್‌ಯುವನ್ನು ಬಿಡಬೇಕು,” ಎಂದು ಟ್ಟೀಟ್‌ ಮಾಡಿದ್ದಾರೆ. ಮಂಗಳವಾರ ಮಾತನಾಡಿದ್ದ ಜಗದೀಶ್‌ ಕುಮಾರ್‌ ಜನವರಿ 5ರ ಹಿಂಸಾಚಾರವನ್ನು ದುರದೃಷ್ಟಕರ ಎಂದಿದ್ದರು. ಜೊತೆಗೆ ಹಿಂಸೆ ಯಾವುದಕ್ಕೂ ಪರಿಹಾರ ಅಲ್ಲ ಎಂದು ಹೇಳಿದ್ದರು.ವಿವಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಆಡಳಿತ ಮಂಡಳಿ ನಡೆಸಲಿದೆ ಎಂದಿದ್ದರು.

“ಜನವರಿ 5ರ ಭಾನುವಾರ ನಡೆದ ಘಟನೆ ದುರದೃಷ್ಟಕರ. ಯಾವುದೇ ಸಮಸ್ಯೆಗಳ ನಿವಾರಣೆಗೆ ನಮ್ಮ ಕ್ಯಾಂಪಸ್‌ ವಾದಗಳು ಮತ್ತು ಚರ್ಚೆಗಳಿಗೆ ಹೆಸರಾಗಿತ್ತು. ಹಿಂಸಾಚಾರ ಯಾವುದಕ್ಕೂ ಪರಿಹಾರವಲ್ಲ. ವಿಶ್ವವಿದ್ಯಾಲಯ ಸಾಮಾನ್ಯಕ್ಕೆ ಮರಳುವಂತಾಗಾಲು ಇರುವ ಎಲ್ಲಾ ಅವಕಾಶಗಳನ್ನು ನಾವು ಬಳಸಿಕೊಳ್ಳಲಿದ್ದೇವೆ," ಎಂಬುದಾಗಿ ಪತ್ರಿಕಾಗೊಷ್ಠಿಯಲ್ಲಿ ಅವರು ಹೇಳಿದ್ದರು. 'ನೋಂದಣಿ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ವಿದ್ಯಾರ್ಥಿಗಳು ಚಳಿಗಾಲದ ಸೆಮಿಸ್ಟರ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಹಳೆಯದನ್ನು ಮರೆತು ಹೊಸ ಜೀವನ ಆರಂಭಿಸೋಣ,’ ಎಂದು ಸಲಹೆ ನೀಡಿದ್ದರು.

ಭಾನುವಾರ ಸಂಜೆ ಜೆಎನ್‌ಯು ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ನುಗ್ಗಿ ದುಷ್ಕರ್ಮಿಗಳು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಪರಿಣಾಮ ಘಟನೆಯಲ್ಲಿ 34 ಜನರು ಗಾಯಗೊಂಡಿದ್ದರು.


from India & World News in Kannada | VK Polls https://ift.tt/37WgoZZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...