ಹೊಸದಿಲ್ಲಿ: ಉತ್ತರ ಅರಬ್ಬಿ ಸಮುದ್ರದಲ್ಲಿ ಮತ್ತು ಚೀನಾ ಕೈಗೊಂಡಿರುವ ಬೆನ್ನಲ್ಲೇ ಭಾರತ 'ಐಎನ್‌ಎಸ್ ವಿಕ್ರಮಾದಿತ್ಯ' ಯುದ್ಧ ನೌಕೆಯನ್ನು ಅರಬ್ಬಿ ಸಮುದ್ರದ ಕಣ್ಗಾವಲಿಗೆ ಕಳುಹಿಸಿದೆ. ಕಾಶ್ಮೀರ ವಿಚಾರದಲ್ಲಿಭಾರತ ಮತ್ತು ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಮಧ್ಯೆಯೇ ಪಾಕಿಸ್ತಾನ ಹಾಗೂ ಜಂಟಿಯಾಗಿ ಅರಬ್ಬಿ ಸಮುದ್ರದಲ್ಲಿ'ಸೀ ಗಾರ್ಡಿಯನ್ಸ್' ಸಮರಾಭ್ಯಾಸವನ್ನು ಕೈಗೊಂಡಿರುವುದನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಈ ಎರಡೂ ದೇಶಗಳ ರಕ್ಷಣಾ ಕಾರ್ಯತಂತ್ರಗಳ ಮೇಲೆ ತೀವ್ರ ನಿಗಾ ಇರಿಸಿರುವ ಭಾರತವು ಕಠಿಣ ಸಂದೇಶ ರವಾನಿಸುವ ಉದ್ದೇಶದೊಂದಿಗೆ ಮಿಗ್-29ಕೆ ವಿಮಾನಗಳ ಸಹಿತ 'ಐಎನ್‌ಎಸ್ ವಿಕ್ರಮಾದಿತ್ಯ' ನೌಕೆಯನ್ನು ಕಳುಹಿಸಿದೆ. 2013ರಲ್ಲಿನೌಕಾಪಡೆ ಸೇರಿರುವ ಈ ನೌಕೆ ವಿಶ್ವದ ಪ್ರಮುಖ ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳಲ್ಲಿಒಂದೆನಿಸಿದೆ. 60 ಬಿಲಿಯನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಭಾಗವಾಗಿ ಚೀನಾವು ಪಾಕಿಸ್ತಾನದ ಜತೆಗೂಡಿ ಉತ್ತರ ಅರಬ್ಬೀ ಸಮುದ್ರ ವಲಯದಲ್ಲಿಗ್ವಾದರ್ ಬಂದರು ಅಭಿವೃದ್ಧಿಪಡಿಸುತ್ತಿದೆ. ಈ ಎರಡೂ ನೆರೆ ರಾಷ್ಟ್ರಗಳ ವ್ಯೂಹಾತ್ಮಕ ತಂತ್ರಗಾರಿಕೆಗಳ ಮೇಲೆ ಭಾರತ ನಿಗಾ ವಹಿಸಿದ್ದು, ಜಂಟಿ ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ನೌಕಾಪಡೆ ಮೂಲಗಳು ಹೇಳಿವೆ.
from India & World News in Kannada | VK Polls https://ift.tt/2Tcm3XB