ಹೊಸದಿಲ್ಲಿ: ದಿಲ್ಲಿಯ ಜೆಎನ್‌ಯು ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್‌ನ ಎಸ್‌ಐಟಿ ಶುಕ್ರವಾರ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥೆ ಆಯಿಷೆ ಘೋಷ್ ಸೇರಿ 9 ಶಂಕಿತ ದಾಳಿಕೋರರ ಚಿತ್ರ ಬಿಡುಗಡೆ ಮಾಡಿದೆ. ಪ್ರಕರಣ ಸಂಬಂಧ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದರೂ ಇದುವರೆಗೂ ಒಬ್ಬರನ್ನೂ ಬಂಧಿಸಲಾಗಿಲ್ಲ. ಕುಲಪತಿ ಎಂ.ಜಗದೀಶ್ ಕುಮಾರ್ ತಲೆದಂಡಕ್ಕೆ ಆಗ್ರಹಿಸಿ ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಹಾಗೂ ಕೆಲ ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳು ಮುಂದುವರಿದಿರುವ ಮಧ್ಯೆಯೇ ಎಸ್‌ಐಟಿ ಸಿಸಿಟಿವಿಗಳನ್ನು ಜಾಲಾಡಿ ಇಡೀ ಗಲಾಟೆ ರಾದ್ಧಾಂತ ವೃತ್ತಾಂತಕ್ಕೆ ಸಂಬಂಧಿಸಿ 9 ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದಿದೆ. ಭಾನುವಾರ ಸಂಜೆ ಸಾಬರಮತಿ ಹಾಸ್ಟೆಲ್ ಮತ್ತಿತರ ಕಡೆ ಸಂಘರ್ಷ ಭುಗಿಲೇಳುವ ಮುನ್ನ ಪೆರಿಯಾರ್ ಹಾಸ್ಟೆಲ್ ಹಾಗೂ ಸರ್ವರ್ ರೂಮ್‌ನಲ್ಲಿವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಧ್ಯಾಹ್ನ 3.30ರ ಸುಮಾರಿಗೆ ಎಐಎಸ್‌ಎಫ್, ಎಸ್‌ಐಡಿಎ, ಡಿಎಸ್‌ಎಫ್ ಸಂಘಟನೆಗಳಿಂದ ದಾಳಿ ನಡೆದಿತ್ತು. ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು ಎಂದು ಡಿಸಿಪಿ ಡಾ.ಜಾಯ್ ಟಿರ್ಕೆ ನೇತೃತ್ವದ ಎಸ್‌ಐಟಿ ಹೇಳಿದೆ. ಶಂಕಿತ ದಾಳಿಕೋರರನ್ನು ಆಯಿಷೆ ಘೋಷ್, ಚುಂಚುನ್ ಕುಮಾರ್, ಪಂಕಜ್ ಮಿಶ್ರಾ, ವಾಸ್ಕರ್ ವಿಜಯ್, ಸುಚೇತಾ ತಾಲುದ್ಕರ್, ಪ್ರಿಯಾ ರಂಜನ್, ಡೋಲನ್ ಸಾವಂತ್, ಯೋಗೇಂದ್ರ ಭಾರದ್ವಾಜ್, ವಿಕಾಸ್ ಪಟೇಲ್ ಎಂದು ಗುರುತಿಸಲಾಗಿದೆ. ಈ ಪೈಕಿ ವಿಕಾಸ್ ಪಟೇಲ್, ಯೋಗೇಂದ್ರ ಭಾರದ್ವಾಜ್ ಎಬಿವಿಪಿಯ ಸದಸ್ಯರೆಂದು ಹೇಳಲಾಗುತ್ತಿದ್ದು, ಇದರಲ್ಲಿಭಾರದ್ವಾಜ್ 'ಯುನಿಟಿ ಅಗೇನೆಸ್ಟ್ ಲೆಫ್ಟ್' ವಾಟ್ಸ್‌ಆ್ಯಪ್ ಗ್ರೂಪ್‌ನ ಆಡ್ಮಿನ್‌ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಜನವರಿ 1ರಿಂದ 5ರವರೆಗೆ ನಡೆಯುತ್ತಿರುವ ಈ ಋುತುವಿನ ಸೆಮಿಸ್ಟರ್ ಎಗ್ಸಾಂ ನೋಂದಣಿ ಪ್ರಕ್ರಿಯೆಯಲ್ಲಿಪಾಲ್ಗೊಂಡು ತಮ್ಮ ಹೆಸರು ನೋಂದಾಯಿಸಿಕೊಳ್ಳುತ್ತಿದ್ದರು. ಆದರೆ ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ತಡೆಯೊಡ್ಡಿ ಗಲಾಟೆ ನಡೆಸಿದ್ದರು ಎಂದು ಎಸ್‌ಐಟಿ ಹೇಳಿದೆ. ಇದಾದ ಬಳಿಕವೇ ಸಾಬರಮತಿ ಹಾಸ್ಟೆಲ್ ಬಳಿ ಮುಸುಕುಧಾರಿ ದಾಳಿಕೋರರು ದಾಳಿ ನಡೆಸಿದ್ದರು. ಇಲ್ಲಿಆಯಿಷೆ ಘೋಷ್ ಸೇರಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಗಾಯಗೊಂಡಿದ್ದರು. ನನ್ನ ಬಳಿಯೂ ಪುರಾವೆಗಳಿವೆ ಎಂದ ಆಯಿಷೆ ಘೋಷ್ ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿ ಮುಸುಕುಧಾರಿಗಳು ದಾಳಿ ನಡೆಸಿದ ಪ್ರಕರಣದಲ್ಲಿವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಶಂಕಿತ ಆರೋಪಿ ಎಂದು ಪೊಲೀಸರು ಹೇಳಿದ ಬೆನ್ನಲ್ಲೇ ಅವರು ಸುದ್ದಿಗೋಷ್ಠಿ ನಡೆಸಿ ಆರೋಪಗಳಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ನನ್ನ ಮೇಲೆ ನಡೆದ ದಾಳಿ ಕುರಿತು ಸಾಕಷ್ಟು ಪುರಾವೆಗಳಿವೆ. ಆದರೆ ಪೊಲೀಸರು ಪಕ್ಷಪಾತಿಗಳಾಗಿದ್ದಾರೆ ಎಂದು ಜರಿದಿದ್ದಾರೆ.
- * ಪೆರಿಯಾರ್ ಹಾಸ್ಟೆಲ್‌ನಲ್ಲಿನಡೆದ ಗಲಾಟೆಯಲ್ಲಿಭಾಗಿಯಾಗಿರಲಿಲ್ಲ. ಹಾಗಿದ್ದರೆ ಪೊಲೀಸರು ಸಾಕ್ಷ್ಯ ತೋರಿಸಲಿ.
- * ದಿಲ್ಲಿ ಪೊಲೀಸರು ತನಿಖೆ ನಡೆಸಲಿ, ನಾನು ತಪ್ಪು ಮಾಡಿಲ್ಲ, ಹೆದರುವ ಪ್ರಶ್ನೆಯೇ ಇಲ್ಲ. ಹೋರಾಟ ಮುಂದುವರಿಸುವೆ.
- * ಸಾಬರಮತಿ ಹಾಸ್ಟೆಲ್ ಬಳಿ ನನ್ನ ಮೇಲೆ ಮುಸುಕುಧಾರಿಗಳು ಹೇಗೆ ದಾಳಿ ನಡೆಸಿದರೆಂಬುದಕ್ಕೆ ಪುರಾವೆಗಳಿವೆ.
- * ನಾನು ನೀಡಿದ ದೂರಿಗೆ ಎಫ್‌ಐಆರ್ ದಾಖಲಿಸಿಲ್ಲ. ಪೊಲೀಸರು ಪಕ್ಷಪಾತಿಯಾಗಿದ್ದಾರೆ. ಕುಲಪತಿಯವರಲ್ಲಿನಂಬಿಕೆ ಇಲ್ಲ.
- * ಎಚ್‌ಆರ್‌ಡಿ ಸಚಿವಾಲಯಕ್ಕೆ ಗಲಾಟೆ ಕುರಿತ ಎಲ್ಲಮಾಹಿತಿಗಳನ್ನು ನೀಡಿದ್ದೇವೆ. ವಿವಾದ ತಿಳಿಯಾಗುವ ಭರವಸೆ ಇದೆ.
- * ದೇಶದ ಕಾನೂನು ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ.
from India & World News in Kannada | VK Polls https://ift.tt/308MzSY