ಹೊಸದಿಲ್ಲಿ: ಗ್ರಾಹಕರು ತಮ್ಮ ಗುರುತು ಅಥವಾ ವಿಳಾಸವನ್ನು ದೃಢೀಕರಿಸುವ () ಪ್ರಕ್ರಿಯೆ ಸರಳವಾಗಲಿದೆ. ವಿಡಿಯೊ ಮೂಲಕ ಗುರುತು ದೃಢೀಕರಿಸುವ ಇ-ಕೆವೈಸಿಗೆ ರಿಸರ್ವ್ ಬ್ಯಾಂಕ್ ಸಮ್ಮತಿ ನೀಡಿದೆ. ಇದರಿಂದ ಗ್ರಾಹಕರು ಖುದ್ದಾಗಿ ಬ್ಯಾಂಕ್, ಅಥವಾ ಸೇವಾದಾರ ಸಂಸ್ಥೆಗಳ ಕಚೇರಿಗೆ ಹೋಗುವ ಶ್ರಮ, ಹಣ ಮತ್ತು ಸಮಯ ತಪ್ಪಲಿದೆ. ಅತಿಸಣ್ಣ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಕುರಿತು ಸೆಬಿ ಮಾಜಿ ಅಧ್ಯಕ್ಷ ಯು.ಕೆ.ಸಿನ್ಹಾ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿದ್ದ ವರದಿಯಲ್ಲಿವಿಡಿಯೊ ಕೆವೈಸಿಯನ್ನು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಆರ್‌ಬಿಐ ಅನುಮೋದನೆ ನೀಡಿದೆ. ಏನು ಉಪಯೋಗ? ಯಾವುದೋ ದೂರದ ಪ್ರದೇಶದಲ್ಲಿರುವ ಗ್ರಾಹಕನು ಬ್ಯಾಂಕ್‌ಗಳು ಅಥವಾ ಫಿನ್‌ಟೆಕ್‌ಗಳಿಗೆ ತನ್ನ ಕೆವೈಸಿ ದೃಢೀಕರಿಸಲು ಸಹಾಯಕ. ಡಿಜಿಟಲ್ ವ್ಯಾಲೆಟ್ ಕಂಪನಿಗಳು ಮತ್ತು ಫಿನ್‌ಟೆಕ್‌ಗಳು ಗ್ರಾಹಕರಿಗೆ ವಿಧಿಸುತ್ತಿದ್ದ ಕೆವೈಸಿ ಶುಲ್ಕ ತಗ್ಗಲಿದೆ. ಪೇಪರ್‌ಲೆಸ್ ಸಹ ಹೌದು. ಇದು ಹೇಗೆ, ಎತ್ತ?
- ಇ-ಕೆವೈಸಿಗೆ ಯಾವ ಅಪ್ಲಿಕೇಷನ್ ಬಳಸಬೇಕು ಎನ್ನುವುದನ್ನು ಆರ್‌ಬಿಐ ಸೂಚಿಸಿಲ್ಲ. ಪ್ರತ್ಯೇಕ ಅಪ್ಲಿಕೇಷನ್ ಬೇಕಾಗುತ್ತದೆ.
- ಈ ಪ್ರಕ್ರಿಯೆಯು 'ಆಧಾರ್' ಅನ್ನು ಆಧರಿಸಿರುತ್ತದೆ. ಖುದ್ದು ಹಾಜರಿ ಇಲ್ಲಿಅಗತ್ಯವಿಲ್ಲ.
- ಇ-ಕೆವೈಸಿ ಪ್ರಕ್ರಿಯೆಯು ಮೊಬೈಲ್ ವಿಡಿಯೊ ಸಂಭಾಷಣೆ ಮೂಲಕ ನಡೆಯುತ್ತದೆ. ಮೊಬೈಲ್ ವಿಡಿಯೊ ಚಾಟ್ ಮೂಲಕವೇ ಅಗತ್ಯ ದಾಖಲೆಗಳನ್ನು ತೋರಿಸಿ ದೃಢೀಕರಿಸಬಹುದು.
from India & World News in Kannada | VK Polls https://ift.tt/36KNV8W