ಮನಮೋಹನ್‌ ಸರಕಾರ ಉದಾರವಾಗಿ ಪರಿಹಾರ ಕೊಟ್ಟಿದ್ದನ್ನು ಸಿದ್ದರಾಮಯ್ಯ ತೋರಿಸಲಿ: ಕಾರಜೋಳ

ಬಾಗಲಕೋಟೆ: ರಾಜ್ಯದಲ್ಲಿ ಯಾವಾಗೆಲ್ಲಾ ಪ್ರಕೃತಿ ವಿಕೋಪ ಆಗಿದೆ? ಆಗ ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಹೆಚ್ಚು ಪರಿಹಾರ ತಂದುಕೊಟ್ಟ ಉದಾಹರಣೆಯನ್ನು ತೋರಿಸಲಿ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರವಿದ್ದಾಗ ಉದಾರವಾಗಿ ಪರಿಹಾರ ಕೊಟ್ಟಿದ್ದನ್ನು ಸಿದ್ದರಾಮಯ್ಯ ತೋರಿಸಲಿ. ಮೋದಿ ಸರಕಾರ ಕಡಿಮೆ ಪರಿಹಾರ ಕೊಟ್ಟಿದೆ ಅನ್ನೋದನ್ನು ತೋರಿಸಲಿ. ಎಲ್ಲ ದಾಖಲೆಗಳನ್ನು ಸಿದ್ದರಾಮಯ್ಯ ಅವರು ಮಾಧ್ಯಮ ಮತ್ತು ಜನತೆ ಮುಂದಿಡಲಿ ಎಂದು ಉಪ ಮುಖ್ಯಮಂತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಕೇಂದ್ರ ಸರಕಾರದ ಪರಿಹಾರ ಮೊತ್ತವನ್ನು ರಾವಣನ ಹೊಟ್ಟೆ ಅರೆಕಾಸಿನ ಮಚ್ಚಿಗೆ ಎಂದು ಜರೆದ ವಿಚಾರಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ''ಭಾವನಾತ್ಮಕವಾಗಿ ಕೆರಳಿಸಲಿಕ್ಕೆ ಸಿದ್ದರಾಮಯ್ಯ ಅವರು ಮನಸ್ಸಿಗೆ ಬಂದಂತೆ ಏನೇನೋ ಹೇಳಬಾರದು'' ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಭೇಟಿ ನೀಡಿದ ಸಂದರ್ಭ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವೇದಿಕೆಯ ಮೇಲೆಯೇ ಹೆಚ್ಚಿನ ನೆರೆ ಪರಿಹಾರ ಕೇಳಿದ್ದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ''ನಮ್ಮ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗಲಿ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಮನವಿ ಮಾಡಿಕೊಂಡ್ರು ಅಷ್ಟೇ. ಇದರಲ್ಲಿ ಬೇರೇನು ಇರಲಿಲ್ಲ. ಮಾಧ್ಯಮದವರು ಟ್ವೀಸ್ಟ್ ಮಾಡಿ ಏನೇನೋ ಮಾಡಿದ್ರು. ಅದರಲ್ಲಿ ಅಂತಹದ್ದೇನು ಆಗಿಲ್ಲ. ಎರಡನೇ ಕಂತು ಪರಿಹಾರ ಬಂದಿರೋ ಬಗ್ಗೆ ಪ್ರೊಸಿಡಿಂಗ್ಸ್ ಇರುತ್ತೆ ಅದನ್ನು ನೋಡ್ಬೇಕು" ಎಂದರು. ಡಿಸಿಎಂ ಲಕ್ಷ್ಮಣ ಸವದಿ ಫೆಬ್ರವರಿ 19ರ ಒಳಗೆ ಚುನಾಯಿತ ಸದಸ್ಯರಾಗಬೇಕೆನ್ನುವ ವಿಚಾರ ಸಂಬಂಧಿಸಿ, "ಈ ಬಗ್ಗೆ ಇನ್ನೂ ಸಭೆ ಆಗಿಲ್ಲ. ಸಭೆಯಾದ ನಂತ್ರ ಮಾತನಾಡ್ತೀನಿ'' ಎಂದು ಗೋವಿಂದ ಕಾರಜೋಳ ಹೇಳಿದರು. "ಪರಿಹಾರ ಹೆಚ್ಚು ಕೊಡಿ ಎಂದು ಆಗ್ರಹ ಮಾಡುವುದರಲ್ಲಿ ತಪ್ಪಿಲ್ಲ. ನಮ್ಮ ಜನರಿಗೆ ಹೆಚ್ಚು ಸ್ಪಂದಿಸಿ ಎಂದು ಹೇಳುವುದರಲ್ಲೂ ತಪ್ಪಿಲ್ಲ. ಆದರೆ ಯಾವ ಕೇಂದ್ರ ಸರಕಾರವೂ ಗೈಡ್ಲೈನ್ಸ್‌ ಮೀರಿ ಪರಿಹಾರ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ ಅವರು ಖಾಲಿಯಿದ್ದಾರೆ. ಜನ ಅವರನ್ನು ಮರೆಯಬಾರದು ಎಂದು ದಿನ ಏನಾದರು ಒಂದು ಸುದ್ದಿ ಹೇಳುತ್ತಿರುತ್ತಾರೆ. ಸರಕಾರದ ಆದೇಶಗಳು ಬಾಯಿ ಮಾತಿನಲ್ಲಿ ಇರುವುದಿಲ್ಲ. ಬ್ಲ್ಯಾಕ್, ವೈಟ್‌ನಲ್ಲಿರುತ್ತವೆ. ಬೇಕಾದರೆ ಸಿದ್ದರಾಮಯ್ಯ ಅವರು ಪ್ರೊಸೀಡಿಂಗ್ ಓದಲಿ'' ಎಂದು ಗೋವಿಂದ ಕಾರಜೋಳ ಹೇಳಿದರು. "ಅಮಿತ್ ಷಾ ಗೃಹ ಮಂತ್ರಿಯಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಮಿತಿ ಇರುತ್ತದೆ. ಅವರು ಕೊಡುವ ಪರಿಹಾರದಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ'' ಎಂದರು.


from India & World News in Kannada | VK Polls https://ift.tt/36Olnvt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...