50 ವರ್ಷದ ಗರ್ಭಿಣಿಗೆ ಸೇನಾ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ: ಅವಳಿ ಮಕ್ಕಳ ಜನನ

ಶ್ರೀನಗರ: ಐವತ್ತನೇ ವಯಸ್ಸಿನಲ್ಲಿ ಗರ್ಭ ಧರಿಸಿದ್ದ ಮಹಿಳೆಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, ತಾಯಿ ಹಾಗೂ ಅವಳಿ ಮಕ್ಕಳನ್ನು ರಕ್ಷಿಸಿದ ಹೆಗ್ಗಳಿಕೆಗೆ ಜಮ್ಮುವಿನಲ್ಲಿರುವ ಪಾತ್ರವಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿದ್ದ ವೈದ್ಯಕೀಯ ವ್ಯವಸ್ಥೆಯಲ್ಲಿಅಂತ್ಯಂತ ಕ್ಲಿಷ್ಟಕರ ಎನಿಸಿದ್ದ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದ್ದು, ಇದರೊಂದಿಗೆ ನಿವೃತ್ತ ಯೋಧರೊಬ್ಬರ 30 ವರ್ಷದ ದಾಂಪತ್ಯ ಜೀವನದಲ್ಲಿ ಸಂತಾನದ ಸಂಭ್ರಮ ಮೂಡಿದೆ. ನಿವೃತ್ತ ಸೇನಾ ಸಿಬ್ಬಂದಿಯೊಬ್ಬರ ಪತ್ನಿ ಕುಲವಂತ್‌ ಕೌರ್‌ (ಹೆಸರು ಬದಲಿಸಲಾಗಿದೆ), ಮದುವೆಯಾಗಿ 30 ವರ್ಷಗಳ ಬಳಿಕ 'ಐವಿಎಫ್‌' ಚಿಕಿತ್ಸೆ ಮೂಲಕ ಗರ್ಭವತಿಯಾಗಿದ್ದರು. ಶಸ್ತ್ರ ಚಿಕಿತ್ಸೆಯು ಕ್ಲಿಷ್ಟಕರವಾಗಿದ್ದರಿಂದ ಇತರೆ ಆಸ್ಪತ್ರೆಗಳಲ್ಲಿಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿತ್ತು. ಆದರೆ, 166 ಸೇನಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರು, ಇದನ್ನು ಸವಾಲಾಗಿ ಸ್ವೀಕರಿಸಿ ಕೌರ್‌ ಅವರಿಗೆ ಹೆರಿಗೆ ಮಾಡಿಸಿದ್ದಾರೆ. ಅವಳಿ ಮಕ್ಕಳ ಜನನ: ಕುಲವಂತ್‌ ಕೌರ್‌ ಅವರು ಅವಳಿ ಮಕ್ಕಳಿಗೆ (ಒಂದು ಹೆಣ್ಣು ಮಗು ಮತ್ತುಒಂದು ಗಂಡು ಮಗು) ಜನ್ಮ ನೀಡಿದ್ದಾರೆ. ತಾಯಿ ಮತ್ತು ಅವಳಿ ಮಕ್ಕಳಿಬ್ಬರೂ ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೊಂದ ಬಹಳ ಸಂಕೀರ್ಣ ಪ್ರಕರಣ ಎಂದು ಕಮಾಂಡೆಮಟ್‌ ಬ್ರಿಗೆಡಿಯರ್‌ ದೇವೇಂದ್ರ ಅರೋರಾ ಅವರು ತಿಳಿಸಿದ್ದಾರೆ.


from India & World News in Kannada | VK Polls https://ift.tt/2NmduFU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...