ಮಹಾರಾಷ್ಟ್ರ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು; ಹಣಕಾಸು ಖಾತೆ ಅಜಿತ್ ಪವಾರ್‌ ಪಾಲು ?

ಮುಂಬೈ: ಮಹಾರಾಷ್ಟ್ರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು ಆರಂಭಗೊಂಡಿದೆ. ಪ್ರಭಲ ಖಾತೆಯ ಮೇಲೆ ಪ್ರಭಾವಿಗಳು ಕಣ್ಣಿಟ್ಟಿದ್ದು ಹಣಕಾಸು ಖಾತೆ ಡಿಸಿಎಂ ಅಜಿತ್ ಪವಾರ್‌ ಪಾಲಾಗುವ ಸಾಧ್ಯತೆ ಇದ್ದು ಲೋಕೋಪಯೋಗಿ ಖಾತೆ ಕಾಂಗ್ರೆಸ್‌ನ ಅಶೋಕ್ ಚೌಹಾನ್‌ಗೆ ಒಲಿಯೋ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಡಿಸೆಂಬರ್ 30 ರಂದು ಮೈತ್ರಿ ಸರಕಾರದ ಸಂಪುಟ ವಿಸ್ತರಣೆಯಾಗಿದ್ದು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಅಲ್ಲದೆ ಮೈತ್ರಿ ಸಂಪುಟದಕ್ಕೆ ಆದಿತ್ಯ ಠಾಕ್ರೆ ಸೇರಿದಂತೆ ಕಾಂಗ್ರೆಸ್‌ ಶಿವಸೇನೆ ಹಾಗೂ ಎನ್‌ಸಿಪಿಯಿಂದ ಒಟ್ಟು 34 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದೀಗ ಸಂಪುಟ ವಿಸ್ತರನೆ ಕಸರತ್ತು ಮುಗಿದ ಬೆನ್ನಲ್ಲೇ ಖಾತೆ ಹಂಚಿಕೆ ಸಿಎಂ ಉದ್ಧವ್ ಠಾಕ್ರೆ ಪಾಲಿಗೆ ತಲೆನೋವಾಗಿ ಮಾರ್ಪಟ್ಟಿದೆ. ಪ್ರಬಲ ಖಾತೆಯ ಮೇಲೆ ಮೂರು ಪಕ್ಷದ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದಾರೆ. ಆದರೆ ಈ ಕುರಿತಾಗಿ ಮಾತುಕತೆ ನಡೆಯುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಹಣಕಾಸು ಖಾತೆ ಎನ್‌ಸಿಪಿ ಪಾಲಾಗುವ ಸಾಧ್ಯತೆ ಇದೆ. ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಅಜಿತ್‌ ಪವಾರ್‌ಗೆ ಹಣಕಾಸು ಖಾತೆ ಸಿಗುವ ಸಾಧ್ಯತೆ ಇದೆ. ಮತ್ತೊಂದು ಪ್ರಮುಖ ಖಾತೆಯಾಗಿರುವ ಲೋಕೋಪಯೋಗಿ ಖಾತೆ ಕಾಂಗ್ರೆಸ್‌ನ ಅಶೋಕ್ ಚೌಹಾಣ್ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡುವ ನಿಟ್ಟಿನಲ್ಲಿ ಎನ್‌ಸಿಪಿ ಪ್ರಧಾನ ಪಾತ್ರ ವಹಿಸಿದ್ದು ಈ ಹಿನ್ನೆಲೆಯಲ್ಲಿ ಪ್ರಮುಖ ಖಾತೆಗಳು ಎನ್‌ಸಿಪಿಗೆ ಒಲಿಯಲಿದೆ ಎನ್ನಲಾಗಿದೆ.


from India & World News in Kannada | VK Polls https://ift.tt/2ZHVF9a

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...