ಗೋಮಾಂಸ ಸೇವನೆ ತಡೆಯಲು ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದ ಕೇಂದ್ರ ಸಚಿವ!

ಪಾಟ್ನಾ: ಸೇವನೆ ತಡೆಯಲು ಶಾಲೆಗಳಲ್ಲಿ ಭಗವದ್ಗೀತೆಯನ್ನು ಬೋಧಿಸಬೇಕು ಎಂಬುದಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ. ವಿದೇಶಕ್ಕೆ ತೆರಳುವ ಮಕ್ಕಳು ಗೋಮಾಂಸ ತಿನ್ನುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಬಣ್ಣಿಸಿರುವ ಬೇಗುಸರಾಯ್‌ ಸಂಸದ ಗಿರಿರಾಜ್‌ ಸಿಂಗ್‌, ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಬೇಕು ಎಂದಿದ್ದಾರೆ. “ನಾವು ಮಕ್ಕಳನ್ನು ಮಿಷನರಿ ಶಾಲೆಗಳಿಗೆ ಕಳುಹಿಸುತ್ತೇವೆ. ಐಐಟಿ ಪ್ರವೇಶಿಸುವ ಅವರು ಇಂಜಿನಿಯರ್‌ಗಳಾಗಿ ವಿದೇಶಕ್ಕೆ ತೆರಳಿ ಗೋಮಾಂಸ ತಿನ್ನಲು ಆರಂಭಿಸುತ್ತಾರೆ. ಯಾಕೆ? ಕಾರಣ ಅವರಿಗೆ ನಾವು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸುವುದಿಲ್ಲ,” ಎಂಬುದಾಗಿ ಗಿರಿರಾಜ್‌ ಸಿಂಗ್‌ ವಿಶ್ಲೇಷಿಸಿದ್ದಾರೆ. ಶಾಲೆಗಳಲ್ಲಿ ಕಲಿಸಬೇಕು ಎಂದು ಒತ್ತಿ ಹೇಳಿದ ಅವರು, "ಈ ಕಾರಣಕ್ಕೆ ಶಾಲೆಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಕಲಿಸಬೇಕು. ಸುಮಾರು ನೂರು ಮನೆಗಳ ಸಮೀಕ್ಷೆಯಲ್ಲಿ ಕೇವಲ 15ರಲ್ಲಿ ಮಾತ್ರ ಹನುಮಾನ್‌ ಚಾಲಿಸ ಸಿಕ್ಕಿದೆ. ಮತ್ತು ರಾಮಾಯಣ ಮತ್ತು ಭಗವದ್ಗೀತೆಯ ಪುಸ್ತಕಗಳು ಕೇವಲ ಮೂರು ಮನೆಗಳಲ್ಲಿ ಸಿಕ್ಕಿವೆ. ಹೀಗಾಗಿ ನಾವು ಮಕ್ಕಳನ್ನು ದೂರಲು ಸಾಧ್ಯವಿಲ್ಲ,” ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ ಅವರು "ಇವತ್ತು ಧರ್ಮ ಉಳಿದಿದೆ. ಈ ಕಾರಣಕ್ಕೆ ಪ್ರಜಾಪ್ರಭುತ್ವವೂ ಉಳಿದಿದೆ," ಎಂದು ವಿವರಿಸಿದ್ದಾರೆ.


from India & World News in Kannada | VK Polls https://ift.tt/2sGL2qX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...