ಲ್ಯಾಬುಸ್ಚಾಗ್ನೆ ಶತಕ, ಸ್ಮಿತ್ ಫಿಫ್ಟಿ; ಅಂತಿಮ ಟೆಸ್ಟ್‌ನಲ್ಲೂ ಆಸೀಸ್ ಮೇಲುಗೈ

ಸಿಡ್ನಿ: ಇಲ್ಲಿನ ವಿಶ್ವ ಪ್ರಸಿದ್ಧ ಎಸ್‌ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಮೇಲುಗೈ ಸಾಧಿಸಿದೆ. ಅಮೋಘ ಶತಕ (130*) ಹಾಗೂ (63) ಆಕರ್ಷಕ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ ನಿಗದಿತ ಮೂರು ವಿಕೆಟ್ ನಷ್ಟಕ್ಕೆ 283 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಆರಂಭದಲ್ಲೇ ಜೋ ಬರ್ನ್ಸ್ (18) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜತೆಗೂಡಿದ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲ್ಯಾಬುಸ್ಚಾಗ್ನೆ 56 ರನ್‌ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ 45 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಾರ್ನರ್ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಏತನ್ಮಧ್ಯೆ ಜತೆಗೂಡಿದ ಇನ್ ಫಾರ್ಮ್ ಬ್ಯಾಟ್ಸ್‌ಮನ್‌ಗಳಾದ ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಸ್ಟೀವ್ ಸ್ಮಿತ್ ಮೂರನೇ ವಿಕೆಟ್‌ಗೆ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಈ ಮಧ್ಯೆ ಸ್ಟೀವ್ ಸ್ಮಿತ್ ತಮ್ಮ ಮೊದಲ ರನ್‌ಗಾಗಿ 39 ಎಸೆತಗಳನ್ನು ಎದುರಿಸಿ ಪ್ರಸಂಗವು ನಡೆಯಿತು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಾರ್ನಸ್ ಹಾಗೂ ಸ್ಮಿತ್ ಜೋಡಿಯು ಕಿವೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೆ ಲ್ಯಾಬುಸ್ಚಾಗ್ನೆ ಆಕರ್ಷಕ ಶತಕ ಸಾಧನೆ ಮಾಡಿದರು. ಇದರೊಂದಿಗೆ ಅಮೋಘ ಫಾರ್ಮ್ ಮುಂದುವರಿಸಿದರು. ಮಾರ್ನಸ್ ಹಾಗೂ ಸ್ಮಿತ್ ಮೂರನೇ ವಿಕೆಟ್‌ಗೆ 156 ರನ್‌ಗಳ ಜತೆಯಾಟ ನೀಡಿದರು. ಈ ಮಧ್ಯೆ ದಿನದಾಟದ ಕೊನೆಯಲ್ಲಿ ಸ್ಮಿತ್ ವಿಕೆಟ್ ಒಪ್ಪಿಸಿದರು. 182 ಎಸೆತಗಳನ್ನು ಎದುರಿಸಿದ ಸ್ಮಿತ್ ನಾಲ್ಕು ಬೌಂಡರಿಗಳಿಂದ 63 ರನ್ ಗಳಿಸಿದರು. ಅಲ್ಲದೆ ಅತಿ ಹೆಚ್ಚು ರನ್ ಬೇಟೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. ಅತ್ತ ದಿಟ್ಟ ಹೋರಾಟ ನೀಡುತ್ತಿರುವ ಮಾರ್ನಸ್ 130 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. 210 ಎಸೆತಗಳನ್ನು ಎದುರಿಸಿದ ಮಾರ್ನಸ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಸಿಕ್ಸರ್ ಸೇರಿದೆ. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಮ್ಯಾಥ್ಯೂ ವೇಡ್ 22 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ 25ರ ಹರೆಯದ ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟ್‌ನಿಂದ ಸಿಡಿದ ನಾಲ್ಕನೇ ಶತಕವಾಗಿದೆ. ಮಾರ್ನಸ್ ಲ್ಯಾಬುಸ್ಚಾಗ್ನೆ ಕೊನೆಯ ಐದು ಟೆಸ್ಟ್ ಪಂದ್ಯಗಳು: 185, 162, 143, 50, 63, 19, 130* ಟೆಸ್ಟ್ ಪಂದ್ಯದಲ್ಲಿ ಗುಲಾಬಿ ಬಣ್ಣದ ಅಂಕಿಗಳನ್ನು ಹೊಂದಿರುವ ವಿಶೇಷ ಜೆರ್ಸಿಯಲ್ಲಿ ಪಾಲ್ಗೊಳ್ಳುವ ಮೂಲಕ ಆಸೀಸ್ ಆಟಗಾರರು ಗಮನ ಸೆಳೆದರು. ಮಾಜಿ ವೇಗದ ಬೌಲರ್ ಮೆಕ್‌ಗ್ರಾಥ್ ಫೌಂಡೇಷನ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಜಂಟಿಯಾಗಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಧನ ಸಹಾಯಕ್ಕಾಗಿ ಸಿಡ್ನಿ ಪಿಂಕ್ ಟೆಸ್ಟ್ ಪಂದ್ಯಕ್ಕಾಗಿ ಕೈಜೋಡಿಸಿಕೊಂಡಿದೆ. ಪಿಂಕ್ ಟೆಸ್ಟ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅಮೋಘ ಬ್ಯಾಟಿಂಗ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SQqEOW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...