ರಾಷ್ಟ್ರ ವಿರೋಧಿ ಘೋಷಣೆ ಕೂಗಿದರೆ ಜೈಲಿಗಟ್ಟುತ್ತೇವೆ: ಅಮಿತ್‌ ಶಾ

ಭೋಪಾಲ್: ಭಾರತದ ವಿರುದ್ಧ ಘೋಷಣೆ ಕೂಗುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ ನೀಡಿದರು. ಸಿಎಎ ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಭಾಷಣ ಮಾಡಿದ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಭಾನುವಾರ ಹೇಳಿದರು. ಅಲ್ಲದೆ, ಕೇವಲ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ಮುಗಿಲೆತ್ತರದ ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಘೋಷಿಸಿದರು. ಕೆಲವು ವಿದ್ಯಾರ್ಥಿಗಳು ಜೆಎನ್‌ಯುನಲ್ಲಿ ಭಾರತ್ ತೇರೆ ತುಕ್ಡೆ ಹೊಂಗೆ ಏಕ್ ಹಜರ್, ಇನ್ಶಾ ಅಲ್ಲಾ, ಇನ್ಶಾ ಅಲ್ಲಾ ಎಂಬ ಭಾರತ ವಿರೋಧಿ ಘೋಷಣೆಗಳನ್ನು ಎತ್ತಿದರು. ಅವರನ್ನು ಜೈಲಿಗೆ ಹಾಕಬಾರದಾ? ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುವವರನ್ನು ಕಂಬಿಗಳ ಹಿಂದೆ ಕಳುಹಿಸಲಾಗುವುದು ಎಂದು ಸಿಎಎ ಜನಸಂಪರ್ಕ ರ‍್ಯಾಲಿಯಲ್ಲಿ ಅಮಿತ್ ಶಾ ಗುಡುಗಿದರು. ರಾಮ ದೇವಾಲಯದ ನಿರ್ಮಾಣವನ್ನು ನಿಲ್ಲಿಸುವಂತೆ ಬಿಜೆಪಿ ಮುಖ್ಯಸ್ಥರು ಕಾಂಗ್ರೆಸ್‌ಗೆ ಸವಾಲು ಹಾಕಿದರು. ರಾಮ ಮಂದಿರವನ್ನು ನಿರ್ಮಿಸಬೇಕೇ ಬೇಡವೇ? ಕಾಂಗ್ರೆಸ್ ನಾಯಕ ಮತ್ತು ವಕೀಲ ಕಪಿಲ್ ಸಿಬಲ್ ನಿರ್ಮಿಸಬಾರದು ಎಂದು ಹೇಳಿದರು. ನಿಮಗೆ ಸಾಧ್ಯವಾದರೆ ಅದನ್ನು ನಿಲ್ಲಿಸಿ ಸಿಬಲ್‌ ಅವರೇ. ಮುಂದಿನ ನಾಲ್ಕು ತಿಂಗಳಲ್ಲಿ ಮುಗಿಲೆತ್ತರದ ರಾಮ ಮಂದಿರ ಸ್ಥಾಪನೆಯಾಗಲಿದೆ ಎಂದು ಹೇಳಿದರು. ಈ ನಡುವೆ ಪೌರತ್ವ ಕಾಯ್ದೆ ಜಾರಿಯಾದಲ್ಲಿ ಭಾರತೀಯರ ಪೌರತ್ವವನ್ನು ಕಸಿದುಕೊಳ್ಳಬಹುದು ಎನ್ನಲಾಗುತ್ತಿರುವ ಒಂದು ಅಂಶಗಳು ಇರುವುದನ್ನು ಕಾಯ್ದೆಯಲ್ಲಿ ತೋರಿಸಿ ಎಂದು ವಿರೋಧಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಅಮಿತ್‌ ಶಾ, ದೇಶದ ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿತು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಆದರೆ ಇದೀಗ ಅದೇ ಕೆಲಸವನ್ನು ಬಿಜೆಪಿ ಸರಕಾರ ಮಾಡಲು ಮುಂದಾದರೆ ಅದನ್ನು ಕಾಂಗ್ರೆಸ್ ಮುಖಂಡರು ವಿರೋಧಿಸುತ್ತದೆ ಎಂದು ಕಿಡಿಕಾರಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 30 ಶೇಕಡಾ ಇತ್ತು ಈಗ ಪಾಕಿಸ್ತಾನದಲ್ಲಿ ಶೇ. 3ಕ್ಕೆ ತಲುಪಿದೆ. ಇನ್ನು, ಬಾಂಗ್ಲಾದೇಶದಲ್ಲಿ 7 ಶೇಕಡದಷ್ಟು ಹಿಂದೂಗಳಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಕೆಯಾಗಿರುವುದು ಆತಂಕಕಾರಿ ವಿಚಾರ ಎಂದರು. ಈ ಕಾರಣಕ್ಕಾಗಿ ಧಾರ್ಮಿಕ ಕಿರುಕುಳಕ್ಕೊಳಗಾದ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡುವ ನಿಟ್ಟಿನಲ್ಲಿ ಸಿಎಎ ಜಾರಿಗೆ ತರಲಾಗಿದೆ. ಆದರೆ ಇದರಲ್ಲಿ ಯಾವುದೇ ಭಾರತೀಯ ಪೌರತ್ವವನ್ನು ಕಿತ್ತುಕೊಳ್ಳುವ ಉದ್ದೇಶವಿಲ್ಲ. ಹೀಗಿದ್ದರೂ ವಿರೋಧ ಪಕ್ಷಗಳು ಪೌರತ್ವ ಕಾಯ್ದೆ ಕುರಿತಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.


from India & World News in Kannada | VK Polls https://ift.tt/2RoArcT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...