ಹೊಸದಿಲ್ಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ದ ವಿದ್ಯಾರ್ಥಿಗಳ ಮೇಲೆ ಜನವರಿ 5ರಂದು ನಡೆದ ದಾಳಿಯನ್ನು ಗ್ರೂಪ್‌ಗಳ ಮೂಲಕ ಸಂಯೋಜಿಸಲಾಗಿದೆ ಎಂಬ ಆರೋಪದ ಮೇಲೆ ಈ ಗುಂಪಿನ ಸದಸ್ಯರ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡುವಂತೆ ದಿಲ್ಲಿ ಪೊಲೀಸರಿಗೆ ಸೂಚನೆ ನೀಡಿದೆ. ವಾಟ್ಸಾಪ್,ತಾನು ಸಂದೇಶಗಳನ್ನು ಸರ್ವರ್‌ಗಳಲ್ಲಿ ಇಟ್ಟುಕೊಂಡಿರುವುದಿಲ್ಲ, ಆದರೆ ಬಳಕೆದಾರರ ಫೋನ್‌ಗಳಿಂದ ಸಂದೇಶಗಳನ್ನು ಪುನಃ ಪಡೆದುಕೊಳ್ಳಬಹುದು ಎಂದು ಹೇಳಿದ ಬಳಿಕ ದಿಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ. ಇಷ್ಟೇ ಅಲ್ಲದೆ 'ಫ್ರೆಂಡ್ಸ್ ಆಫ್ ಆರ್‌ಎಸ್‌ಎಸ್' ಮತ್ತು 'ಯುನಿಟಿ ಎಗೈನ್ಸ್ಟ್ ಲೆಫ್ಟ್' ಗುಂಪಿನ ಎಲ್ಲಾ ಸದಸ್ಯರಿಗೆ ಸಮನ್ಸ್ ನೀಡುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಜೆಎನ್‌ಯುನ ಮೂವರು ಪ್ರಧ್ಯಾಪಕರು ಸಿಸಿಟಿವಿ ದೃಶ್ಯಾವಳಿಗಳು, ವಾಟ್ಸಾಪ್ ಸಂವಾದಗಳು ಮತ್ತು ಜನವರಿ 5ರ ಗಲಭೆಗೆ ಸಂಬಂಧಿಸಿದ ಇತರ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸುವಂತೆ ಕೋರಿ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವಾಟ್ಸಾಪ್, ಗೂಗಲ್‌ಗೆ ಮಾಹಿತಿಯನ್ನು ಜೋಪಾನ ಮಾಡುವಂತೆ ಮತ್ತು ದಿಲ್ಲಿ ಪೊಲೀಸರು ಕೇಳುವ ಮಾಹಿತಿಯನ್ನು ನೀಡುವಂತೆ ಹೇಳಿದೆ. ಇದರ ಜೊತೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪೊಲೀಸರು ಕೇಳಿದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಸೂಚಿಸಿದೆ.
from India & World News in Kannada | VK Polls https://ift.tt/386KsSm