ಹೊಸದಿಲ್ಲಿ: ಅವರ ಬ್ಯಾಟಿಂಗ್‌ನ ತಿದ್ದಿ ತೀಡಿ ಅತ್ಯುತ್ತಮ ಫಿನಿಷರ್ ಆಗುವಂತೆ ಮಾಡಿದ್ದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂಬ ಸಂಗತಿಯನ್ನು ಮಾಜಿ ಓಪನರ್ ಇದೀಗ ಬಹಿರಂಗ ಪಡಿಸಿದ್ದಾರೆ. ಆರಂಭದಲ್ಲಿ ಒಬ್ಬ ಬಿಗ್ ಹಿಟ್ಟರ್ ಎಂದು ಗುರುತಿಸಿಕೊಂಡಿದ್ದ ಎಂಎಸ್ ಧೋನಿ ಅವರನ್ನು ಒಬ್ಬ ಶ್ರೇಷ್ಠ ಫನಿಷರ್ ಆಗುವಂತೆ ಮಾಡಿದ್ದು ದ್ರಾವಿಡ್. 2006-07ರಲ್ಲಿ ನಾಯಕತ್ವ ಪಡೆದಿದ್ದ ದ್ರಾವಿಡ್, ಈ ಅವಧಿಯಲ್ಲಿ ಧೋನಿಯಲ್ಲಿನ ಫಿನಿಷರ್ ಪ್ರತಿಭೆ ಗುರುತಿಸಿ ಬೆಳೆಸಿದ್ದರು ಎಂದಿದ್ದಾರೆ. 2005ರ ಏಪ್ರಿಲ್‌ನಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 123 ಎಸೆತಗಳಲ್ಲಿ 148 ರನ್‌ಗಳನ್ನು ಚೆಚ್ಚಿದ್ದ ಧೋನಿ, ವಿಶ್ವ ಕ್ರಿಕೆಟ್‌ಗೆ ತಮ್ಮ ಆಗಮನವನ್ನು ಸಾರಿದ್ದರು. ಅದೇ ವರ್ಷ ಶ್ರೀಲಂಕಾ ಎದುರು 183 ರನ್ ಸಿಡಿಸಿದ್ದರು. ನಂತರ ಧೋನಿ ಬ್ಯಾಟಿಂಗ್‌ನಲ್ಲಿ ಗಣನೀಯ ಬದಲಾವಣೆ ಆಯಿತು, ಸ್ಫೋಟಕ ಬ್ಯಾಟರ್‌ನಿಂದ ಶಾಂತಯುತವಾಗಿ ಪಂದ್ಯಗಳನ್ನು ಗೆದ್ದುಕೊಡುವ ಫಿನಿಷರ್ ಆಗಿ ಬೆಳೆದು ನಿಂತರು. "ರಾಹುಲ್ ದ್ರಾವಿಡ್ ನಾಯಕತ್ವ ಪಡೆದಿದ್ದಾಗ ಧೋನಿಗೆ ಫಿನಿಷರ್ ಜವಾಬ್ದಾರಿ ಹೊರಿಸಿದರು. ಕೆಟ್ಟ ಹೊಡೆತಕ್ಕೆ ಕೈಹಾಕಿ ಔಟ್ ಆಗಿದ್ದ ಧೋನಿಯನ್ನು ದ್ರಾವಿಡ್ ಸಿಕ್ಕಾಪಟ್ಟೆ ಬೈದಿದ್ದರು. ಇದಾದ ಬಳಿಕ ಧೋನಿಯಲ್ಲಿ ಅದ್ಭುತ ಬದಲಾವಣೆಯಾಯಿತು. 2006-07ರಲ್ಲಿ ಧೋನಿ ತಮ್ಮ ಆಟ ಬದಲಾಯಿಸಿ, ಪಂದ್ಯ ಗೆದ್ದು ಕೊಡುವ ಜವಾಬ್ದಾರಿ ಹೊತ್ತು ಫಿನಿಷರ್ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲಾರಂಭಿಸಿದರು," ಎಂದು ಸೆಹ್ವಾಗ್ ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಆ ಕಾಲದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸ್ ವೇಳೆ ದಾಖಲೆಯ ಸತತ 16 ಪಂದ್ಯಗಳನ್ನು ಗೆದ್ದ ಸಾಧನೆಯ ಹಿಂದ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ನಡುವಣ ಜೊತೆಗಾರಿಗೆ ಮುಖ್ಯ ಪಾತ್ರವಹಿಸಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ. "ಧೋನಿ ಮತ್ತು ಯುವರಾಜ್ ಸಿಂಗ್ ಅದ್ಭುತ ಜೊತೆಯಾಟಗಳನ್ನು ಆಡಿದರು. ಇದರ ಫಲವಾಗಿ ನಾವು ರನ್ ಚೇಸ್‌ನಲ್ಲಿ ಸತತ 16 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು," ಎಂದಿದ್ದಾರೆ. ಧೋನಿಗಾಗಿ ಗಂಗೂಲಿ ತ್ಯಾಗ ಮಾಡಿದ್ದರು!ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಹೇಳಿಕೊಳ್ಳುವ ಆರಂಭ ಪಡೆದಿರಲಿಲ್ಲ. ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಸತತ ವೈಫಲ್ಯ ಕಂಡಿದ್ದರು. ಬಳಿಕ ಅಂದಿನ ನಾಯಕ ಸೌರವ್ ಗಂಗೂಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಧೋನಿಗಾಗಿ ತ್ಯಾಗ ಮಾಡಿದ್ದರು. 3ನೇ ಕ್ರಮಾಂಕದಲ್ಲಿ ಮೊದಲ ಬಾರಿ ಬ್ಯಾಟ್ ಮಾಡಿದ ಧೋನಿ ಅದ್ಭುತ ಶತಕ ಬಾರಿಸಿ ಮಿಂಚಿದ್ದರು. "2005ರಲ್ಲಿ ಪಿಂಚ್ ಹಿಟ್ಟರ್‌ಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಆದ ದಾದಾ (ಗಂಗೂಲಿ) ಯುವ ಆಟಗಾರ ಧೋನಿಗೆ 3ನೇ ಕ್ರಮಾಂಕದಲ್ಲಿ 3-4 ಅವಕಾಶ ಕೊಡಲು ನಿರ್ಧಾರ ಮಾಡಿದ್ದರು. ಧೋನಿ ಯಶಸ್ಸು ಕಾಣಲಿಲ್ಲ ಎಂದರೆ ಬೇರೆಯವರನ್ನು ಆಡಿಸುವ ಆಲೋಚನೆಯಲ್ಲಿದ್ದರು. ಕೆಲವೇ ನಾಯಕರು ಮಾತ್ರ ಈ ರೀತಿ ಮಾಡುತ್ತಾರೆ. ಸೌರವ್ ಅಂದು ತಮ್ಮ ಕ್ರಮಾಂಕವನ್ನು ಧೋನಿಗಾಗಿ ತ್ಯಾಗ ಮಾಡಿದ್ದರು. ಅಂದು ದಾದಾ ಹಾಗೆ ಮಾಡದೇ ಇರದಿದ್ದರೆ ಇಂದು ನಮಗೆ ಧೋನಿ ಸಿಗುತ್ತಿರಲಿಲ್ಲ," ಎಂದು ವೀರೂ ವಿವರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3p6NZdU