
ಭುವನೇಶ್ವರ್: ಉಪನಾಯಕ ಸಂಜಯ್ ಬಾರಿಸಿದ ಸತತ ಎರಡನೇ ಹ್ಯಾಟ್ರಿಕ್ ಗೋಲ್ ಮತ್ತು ಬಾರಿಸಿದ ಮೊದಲ ಹ್ಯಾಟ್ರಿಕ್‌ನೊಂದಿಗೆ ಅಬ್ಬರಿಸಿದ ಭಾರತ ತಂಡ, ಇಲ್ಲಿ ನಡೆಯುತ್ತಿರುವ ಎಫ್‌ಐಎಸ್ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು 13-1 ಗೋಲ್‌ಗಳ ಅಂತರದಲ್ಲಿ ಬಗ್ಗುಬಡಿದು ಟೂರ್ನಿಯಲ್ಲಿ ಮೊದಲ ಜಯದ ಸವಿಯುಂಡಿದೆ. ಟೂರ್ನಿಯ 'ಬಿ' ಗುಂಪಿನಲ್ಲಿ ಪೈಪೋಟಿ ನಡೆಸುತ್ತಿರುವ ಭಾರತ ಕಿರಿಯರ ತಂಡ ತನ್ನ ಮೊದಲ ಪಂದ್ಯದಲ್ಲಿ ಎದುರು 4-5 ಗೋಲ್‌ಗಳ ಅಚ್ಚರಿಯ ಸೋಲುಂಡಿತ್ತು. ಈಗ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಭಾರತ ತಂಡ ಮನಮೋಹಕ ಪ್ರದರ್ಶನ ನೀಡಿದೆ. ಉಪನಾಯಕ ಸಂಜಯ್ (17, 32 ಮತ್ತು 59ನೇ ನಿಮಿಷ) ಮತ್ತು ಹುಂಡನ್ (40, 50, 51ನೇ ನಿ.) ಹ್ಯಾಟ್ರಿಕ್ ಗೋಲ್‌ಗಳೊಂದಿಗೆ ಮಿಂಚಿದರೆ, ಉತ್ತಮ್ ಸಿಂಗ್ (3ನೇ ಮತ್ತು 47ನೇ ನಿ.), ಶರ್ದಾನಂದ್ ತಿವಾಯ್ (35ನೇ ಮತ್ತು 53ನೇ ನಿ.), ವಿವೇಕ್ ಸಾಗರ್ ಪ್ರಸಾದ್ (8ನೇ ನಿ.), ಮಣಿಂದರ್ ಸಿಂಗ್ (27ನೇ ನಿ.) ಹಾಗೂ ಅಭಿಷೇಕ್ ಲಾಕ್ರಾ (55ನೇ ನಿ.) ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸಿ ಭಾರತ ತಂಡದ ಭರ್ಜರಿ ಗೆಲುವಿನ ರೂವಾರಿಗಳೆನಿಸಿದರು. ಇನ್ನು ಟೂರ್ನಿಯ 'ಬಿ' ಗುಂಪಿನಲ್ಲಿ 2 ಜಯ ದಾಖಲಿಸಿರುವ ಫ್ರಾನ್ಸ್ ತಂಡ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ತನ್ನ ಎರಡನೇ ಪಂದ್ಯದಲ್ಲಿ ಫ್ರಾನ್ಸ್ 7-1 ಗೋಲ್‌ಗಳಿಂದ ಪೋಲೆಂಡ್ ಎದುರು ಜಯ ದಾಖಲಿಸಿದೆ. ಭಾರತ ತಂಡ ಈ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಭಾರತ ತಂಡ ತನ್ನ 3ನೇ ಪಂದ್ಯದಲ್ಲಿ ಪೋಲೆಂಡ್ ಎದುರು ಶನಿವಾರ ಪೈಪೋಟಿ ನಡೆಸಲಿದೆ. ಫ್ರಾನ್ಸ್ ಎದುರು ಮರ್ಮಾಘಾತಕ್ಕೀಡಾಗಿದ್ದ ಭಾರತ ತಂಡ ಕೆನಡಾ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ ಸತತ ಗೋಲ್‌ಗಳ ಸುರಿಮಳೆ ಸುರಿಸಿತು. ಪಂದ್ಯ ಆರಂಭಗೊಂಡ ಮೂರೇ ನಿಮಿಷಯದಲ್ಲಿ ಉತ್ತಮ್ ಸಿಂಗ್ ಗೋಲ್ ಖಾತೆ ತೆರೆದಿದ್ದರು. ಇದಾದ 5 ನಿಮಿಷಕ್ಕೆ ನಾಯಕ ವಿವೇಕ್ ಸಾಗರ್ ಗೋಲ್ ಅಂತರವನ್ನು ದುಪ್ಪಟ್ಟಾಗಿಸಿದರು. ನಂತರ ಭಾರತ ತಂಡ ಗೋಲ್ ಸಂಖ್ಯೆ ಸತತವಾಗಿ ಏರುತ್ತಲೇ ಸಾಗಿತ್ತು. ಕೆನಡಾ ತಂಡದ ಡಿಫೆನ್ಸ್‌ನ ಧೂಳೀಪಟ ಮಾಡಿದ್ದ ಭಾರತೀಯ ಆಟಗಾರರು ಮುನ್ನುಗ್ಗಿ ಗೋಲ್‌ಗಳ ಮೇಲೆ ಗೋಲ್ ಬಾರಿಸಿದರು. ಗುರುವಾರದ ಆಟದಲ್ಲಿ ಅರ್ಜೆಂಟೀನಾ ತಂಡ 15-0 ಗೋಲ್‌ಗಳಿಂದ ಈಜಿಪ್ಟ್ ತಂಡವನ್ನು ಬಗ್ಗುಬಡಿದರೆ, ನೆದರ್ಲೆಂಡ್ಸ್ ತಂಡ 12-5 ಗೋಲ್‌ಗಳಿಂದ ಕೊರಿಯಾ ತಂಡಕ್ಕೆ ಮಣ್ಣು ಮುಕ್ಕಿಸಿದೆ. ಮೂರನೇ ಪಂದ್ಯದಲ್ಲಿ ಸ್ಪೇನ್ ತಂಡ 17-0 ಗೋಲ್‌ಗಳಿಂದ ಅಮೆರಿಕ ತಂಡಕ್ಕೆ ಮರ್ಮಾಘಾತ ನೀಡಿದೆ. ಒಟ್ಟು ನಾಲ್ಕು ಗುಂಪುಗಳಲ್ಲಿ ಟೂರ್ನಿಯ ಲೀಗ್ ಪಂದ್ಯಗಳು ನಡೆಯುತ್ತಿವೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ. ಡಿಸೆಂಬರ್ 5ರಂದು ಟೂರ್ನಿಯ ಫೈನಲ್ ಪಂದ್ಯ ಜರುಗಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3DWmb22