'ನ.7ರ ಪಂದ್ಯ ಆಸಕ್ತಿ ಕೆರಳಿಸಿದೆ' ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ಕೊಹ್ಲಿ ಹೇಳಿದ್ದಿದು!

ದುಬೈ: ಸ್ಕಾಟ್ಲೆಂಡ್‌ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಬಗ್ಗೆ ಟೀಮ್ ಇಂಡಿಯಾ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತಂಡ ರನ್‌ ರೇಟ್‌ ಅನ್ನು ಉತ್ತಮ ಪಡಿಸಿಕೊಂಡಿದೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಸ್ಕಾಟ್ಲೆಂಡ್‌ ತಂಡ, 17.4 ಓವರ್‌ಗಳಿಗೆ ಕೇವಲ 85 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಸಾಧಾರಣ ಗುರಿ ಹಿಂಬಾಲಿಸಿದ ಭಾರತ ತಂಡ 6.3 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿ ಗೆಲುವು ಪಡೆಯಿತು. ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, "ಇದು ನಮ್ಮ ಪ್ರಾಬಲ್ಯದ ಪ್ರದರ್ಶನವಾಗಿದೆ, ಮತ್ತೊಮ್ಮೆ ನಾವು ಇದನ್ನು ಪುನರಾವರ್ತಿಸಿದ್ದೇವೆ. ಆದರೆ, ನವೆಂಬರ್‌ 7ರಂದು ಏನಾಗಲಿದೆ ಎಂಬುದು ತೀವ್ರ ಆಸಕ್ತಿ ಮೂಡಿಸಿದೆ. ಇವತ್ತಿನ(ಶುಕ್ರವಾರ) ಪಂದ್ಯದ ಬಗ್ಗೆ ನಾನು ಜಾಸ್ತಿ ಏನೂ ಹೇಳುವುದಿಲ್ಲ, ನಾವು ಏನು ಮಾಡಬಹುದೆಂದು ನಮಗೆ ಗೊತ್ತಿದೆ," ಎಂದರು. "ಈ ಮೈದಾನದಲ್ಲಿ ಟಾಸ್‌ ಎಷ್ಟು ಮುಖ್ಯ ಎಂಬುದು ನಾನು ನಿಮಗೆ ತಿಳಿಸುತ್ತೇನೆ. ನಾವು ಅವರನ್ನು(ಸ್ಕಾಟ್ಲೆಂಡ್‌) ಗರಿಷ್ಠ 110 ಅಥವಾ 120ರ ಒಳಗಾಗಿ ಆಲೌಟ್‌ ಮಾಡಬೇಕೆಂದು ಅಂದುಕೊಂಡಿದ್ದೆವು. ಆದರೆ, ನಮ್ಮ ಬೌಲರ್‌ಗಳು ಅದ್ಭುತವಾಗಿ ಕಂಡರು ಹಾಗೂ ಕೆ.ಎಲ್ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ," ಎಂದು ಸಹ ಆಟಗಾರರನ್ನು ಕೊಹ್ಲಿ ಗುಣಗಾನ ಮಾಡಿದ್ದಾರೆ. "ನಾವು ಚೇಸಿಂಗ್‌ ಆರಂಭಿಸುವುದಕ್ಕೂ ಮುನ್ನ 8 ರಿಂದ 10 ಓವರ್‌ಗಳಗೆ ಮುಗಿಸುವ ಬಗ್ಗೆ ಮಾತನಾಡಿಕೊಂಡಿದ್ದೆವು. ಕಠಿಣವಾಗಿ ಆಡುವುದು ನಮಗೆ ಬೇಕಾಗಿರಲಿಲ್ಲ. ಏಕೆಂದರೆ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೆ, ಮುಂದಿನ 20 ಎಸೆತಗಳು ನಮಗೆ ದುಬಾರಿ ಎನಿಸಬಹುದು. ಹಾಗಾಗಿ, ನಾವು ಸ್ವಾಭಾವಿಕ ಆಟವನ್ನು ಪ್ರದರ್ಶಿಸಿದರೆ, ರನ್‌ಗಳ ತ್ವರಿತವಾಗಿ ಮೂಡಿಬರಲಿದೆ," ಎಂದು ತಿಳಿಸಿದರು. 86 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಆರಂಭಿಕರಾದ ಹಾಗೂ ರೋಹಿತ್‌ ಶರ್ಮಾ ಅಬ್ಬರಿಸಿದರು. ಮುರಿಯದ ಮೊದಲನೇ ವಿಕೆಟ್‌ಗ ಇವರಿಬ್ಬರೂ 71 ರನ್‌ ಕಲೆ ಹಾಕಿದರು. ಅದರಲ್ಲೂ ಕೆ.ಎಲ್‌ ರಾಹುಲ್‌ ಕೇವಲ 19 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, ಅಭ್ಯಾಸ ಪಂದ್ಯಗಳಲ್ಲಿಯೂ ಆಟಗಾರರು ಇದೇ ಉದ್ದೇಶದೊಂದಿಗೆ ಆಡಿದ್ದರು ಎಂದು ಹೇಳಿದ್ದಾರೆ. "ನೀವು ನಮ್ಮ ಅಭ್ಯಾಸ ಪಂದ್ಯಗಳನ್ನು ನೋಡಿರಬಹುದು, ಇದೇ ಹಾದಿಯಲ್ಲಿ ನಾವು ಕೂಡ ಅಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದೆವು. ಆದರೆ, ಎರಡೇ ಎರಡು ಕೆಟ್ಟ ಗಳಿಗೆ ನಮ್ಮ ಪಾಲಿಗೆ ನಡೆದಿವೆ. ಅಲ್ಲಿ ನಾವು ಸತತ ಎರಡು ಓವರ್‌ಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ," ಎಂದರು. "ತಂಡಗಳು ಅತ್ಯುತ್ತಮವಾಗಿ ಬೌಲ್‌ ಮಾಡಿವೆ ಹಾಗೂ ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಿದ್ದವು. ಆದರೆ, ನಾವು ಎರಡು ಓವರ್‌ ಉತ್ತಮ ಬ್ಯಾಟ್‌ ಮಾಡಬೇಕಾಗಿತ್ತಷ್ಟೆ. ಆದರೆ, ಇಂದಿನ ಪಂದ್ಯದಲ್ಲಿ ಜಡೇಜಾ ಅತ್ಯುತ್ತಮ ಬೌಲ್‌ ಮಾಡಿದ್ದಾರೆ, ಶಮಿ ಕೂಡ. ನನ್ನ ಕುಟುಂಬ ಕೂಡ ಇಲ್ಲೇ ಇದೆ. ಹಾಗಾಗಿ ನನ್ನ ಜನುಮ ದಿನಕ್ಕೆ ಇದಕ್ಕಿಂತ ಇನ್ನೇನು ಬೇಕು," ಎಂದು ವಿರಾಟ್‌ ಕೊಹ್ಲಿ ಸೈನ್‌ ಆಫ್‌ ಮಾಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3GVAs0H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...