IPL 2021: ಕೊಹ್ಲಿ ಪಡೆಗೆ ಆಘಾತ, ಆರ್‌ಸಿಬಿಗೆ ಕೈ ಕೊಟ್ಟ ಸ್ಟಾರ್‌ ಆಟಗಾರರು!

ಹೊಸದಿಲ್ಲಿ: ಬಹುನಿರೀಕ್ಷಿತ ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಇನ್ನುಳಿದ ಭಾಗಕ್ಕೆ ಆಸ್ಟ್ರೇಲಿಯಾ ತಂಡದ ವೇಗಿ ಕೇನ್ ರಿಚರ್ಡ್ಸನ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಲಭ್ಯರಾಗಿದ್ದಾರೆ. ಆದರೆ, ಸ್ಪಿನ್ನರ್‌ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಈ ಇಬ್ಬರೂ ಆಟಗಾರರು ಇತ್ತೀಚೆಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ 15 ಸದಸ್ಯರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆಸೀಸ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2021ರ ಚುಟಕು ವಿಶ್ವಕಪ್‌ ಟೂರ್ನಿಯು ಇದೇ ವರ್ಷಾಂತ್ಯದಲ್ಲಿ ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿದೆ. ಸೆಪ್ಟೆಂಬರ್‌ 19 ರಿಂದ ಆರಂಭವಾಗಲಿರುವ 2021ರ ಐಪಿಎಲ್‌ ಟೂರ್ನಿಯ ಎರಡನೇ ಅವಧಿಯಲ್ಲಿ ಕೊಹ್ಲಿ ನಾಯಕತ್ವದ ಆರ್‌ಸಿಬಿಯಲ್ಲಿ ಭಾಗವಹಿಸಲು ನಿರಾಕರಿಸಿರುವ ಕೇನ್‌ ರಿಚರ್ಡ್‌ಸನ್‌, ಮನೆಯಲ್ಲಿಯೇ ಉಳಿಯುವುದಾಗಿ ತಿಳಿಸಿದ್ದಾರೆಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ. ಮತ್ತೊಂದಡೆ ಆಡಂ ಝಾಂಪ ಅವರು ಕೂಡ, ಯುಎಇ ಚರಣದಲ್ಲಿ ಭಾಗವಹಿಸುವುದು ಕೂಡ ಬಹುತೇಕ ಅನುಮಾನವಾಗಿದೆ. ಅವರನ್ನು 2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 4 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆದರೆ, ಅವರು ಮೊದಲ ಅವಧಿಯಲ್ಲಿಯೂ ಆರಂಭಿಕ ಕೆಲವೇ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಬಯೋ ಬಬಲ್‌ ಒಳಗಡೆ ಕೋವಿಡ್‌-19 ಪ್ರಕರಣಗಳು ಕಾಣಿಸಿಕೊಳ್ಳುವುದಕ್ಕೂ ಮೊದಲೇ, ರಿಚರ್ಡ್ಸನ್‌ ಹಾಗೂ ಝಾಂಪ ಟೂರ್ನಿಯಿಂದ ತವರಿಗೆ ವಾಪಸ್‌ ಆಗಿದ್ದರು. ಇನ್ನುಳಿದಂತೆ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಟಗಾರರು 2021ರ ಐಪಿಎಲ್‌ ಸೆಕೆಂಡ್‌ ಆಫ್‌ನಲ್ಲಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಹಲವು ಆಟಗಾರರು ಆಯಾ ಫ್ರಾಂಚೈಸಿಗಳಿಗೆ ಲಭ್ಯರಾಗಲಿದ್ದಾರೆ. ಇಂದು ಎಲ್ಲಾ ಫ್ರಾಂಚೈಸಿಗಳಿಗೂ ತಂಡದ ಆಟಗಾರರ ಪಟ್ಟಿಯನ್ನು ಕೇಳಲಾಗಿದೆ. ಆದರೆ, ಬಹುತೇಕ ತಂಡಗಳಲ್ಲಿ ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಕ್ರಿಕೆಟ್‌ ಆಸ್ಟ್ರೇಲಿಯಾ 2021ರ ಐಪಿಎಲ್‌ ಯುಎಇ ಚರಣದಲ್ಲಿ ಆಡುವುದು ಅಥವಾ ಬಿಡುವುದನ್ನೂ ಆಟಗಾರರ ಆಯ್ಕೆಗೆ ಬಿಟ್ಟಿದೆ. ಇನ್ನೂ ಮೂವರು ಐಪಿಎಲ್‌ಗೆ ಅಲಭ್ಯ: ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್‌ ಟೂರ್ನಿಯ ಸೆಕೆಂಡ್‌ ಆಫ್‌ಗೆ ಆರ್‌ಸಿಬಿಯ ಕೇನ್ ರಿಚರ್ಡ್ಸನ್ ಮಾತ್ರವಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್‌ ವೇಗಿ ಪ್ಯಾಟ್ ಕಮಿನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ವೇಗಿ ಜೇ ರಿಚರ್ಡ್ಸನ್ ಮತ್ತು ರಿಲೆ ಮೆರೆಡಿತ್ ಕೂಡ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಪ್ಯಾಟ್‌ ಕಮಿನ್ಸ್ ದಿನಗಳ ಹಿಂದೆಯೇ ಟೂರ್ನಿಯ ಸೆಕೆಂಡ್‌ ಆಫ್‌ಗೆ ಅಲಭ್ಯರಾಗುತ್ತಿರುವುದಾಗಿ ಹೇಳಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3z3zivz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...