'ನಿಮ್ಮನ್ನು ಬೇಟೆಯಾಡುತ್ತೇವೆ, ಮಾಡಿದ್ದಕ್ಕೆ ಬೆಲೆ ತೆರಲೇಬೇಕು': ಉಗ್ರರ ವಿರುದ್ಧ ಅಮೆರಿಕ ಶಪಥ

ವಾಷಿಂಗ್ಟನ್: ರಾಜಧಾನಿ ಕಾಬೂಲ್‌ನಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ ಸುಮಾರು 60 ಜನರನ್ನು ಹತ್ಯೆ ಮಾಡಿದ ಸಂಚುಕೋರರನ್ನು ಹೊಡೆದುರುಳಿಸುವುದಾಗಿ ಅಧ್ಯಕ್ಷ ಪ್ರತಿಜ್ಞೆ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಸಾವಿರಾರು ಪ್ರಜೆಗಳನ್ನು ಸ್ಥಳಾಂತರ ಮಾಡುವ ತನ್ನ ಯೋಜನೆಯಿಂದ ಅಮೆರಿಕ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. 'ನಮ್ಮ ಮೇಲೆ ಈ ದಾಳಿ ನಡೆಸಿದವರು ಹಾಗೂ ಅಮೆರಿಕಕ್ಕೆ ಹಾನಿ ಮಾಡಲು ಬಯಸುವ ಯಾರೇ ಆಗಲಿ, ಇದನ್ನು ತಿಳಿದುಕೊಳ್ಳಿ: ನಾವು ಕ್ಷಮಿಸುವುದಿಲ್ಲ. ನಾವು ಮರೆಯುವುದಿಲ್ಲ. ನಿಮ್ಮನ್ನು ಬೇಟೆಯಾಡುತ್ತೇವೆ ಮತ್ತು ಅದಕ್ಕೆ ಬೆಲೆ ತೆರುವಂತೆ ಮಾಡುತ್ತೇವೆ' ಎಂದು ಬೈಡನ್ ಶಪಥ ಮಾಡಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಹಾಗೂ ಹೋಟೆಲ್‌ಗಳ ಬಳಿ ನಡೆದ ಬಾಂಬ್ ದಾಳಿಗಳ ಬಳಿಕ ಶ್ವೇತಭವನದಲ್ಲಿ ಮಾತನಾಡಿದ ಅವರು, ದಾಳಿಯಲ್ಲಿ ಬಲಿಯಾದ ಅಮೆರಿಕದ ಸೈನಿಕರನ್ನು 'ಹೀರೋಗಳು' ಎಂದು ಬಣ್ಣಿಸಿದ್ದಾರೆ. ಅಮೆರಿಕದ ಉದ್ದೇಶಿತ ಸ್ಥಳಾಂತರ ಚಟುವಟಿಕೆಯ ಗುರಿಯಾದ ಆಗಸ್ಟ್ 31ರವರೆಗೂ ಯೋಜನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. 'ನಾವು ಉಗ್ರರಿಂದ ಹಿಮ್ಮೆಟ್ಟಿಲ್ಲ. ನಮ್ಮ ಯೋಜನೆಯನ್ನು ತಡೆಯಲು ನಾವು ಅವರಿಗೆ ಬಿಡುವುದಿಲ್ಲ. ನಾವು ಸ್ಥಳಾಂತರ ಕಾರ್ಯವನ್ನು ಮುಂದುವರಿಸುತ್ತೇವೆ' ಎಂದಿದ್ದಾರೆ. ಅಫ್ಘಾನಿಸ್ತಾನವನ್ನು ತೊರೆಯಲು ಅಮೆರಿಕ ಪಡೆಗಳಿಗೆ ಆಗಸ್ಟ್ 31 ಅಂತಿಮ ಗಡುವಾಗಿದೆ ಎಂದು ಪುನರುಚ್ಚರಿಸಿದ ಅವರು, ಆ ದಿನದವರೆಗೆ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಜನರನ್ನು ಅಮೆರಿಕ ಪಡೆಗಳು ಹೊರಕ್ಕೆ ಕರೆತರಲಿವೆ ಎಂದು ಹೇಳಿದ್ದಾರೆ. 'ನಮಗೆ ಬೆದರಿಕೆ ಬಗ್ಗೆ ತಿಳಿದಿದೆ. ನಮ್ಮ ಮೇಲೆ ಮತ್ತೊಂದು ದಾಳಿ ನಡೆಯಬಹುದು ಎಂಬುದು ಕೂಡ ಚೆನ್ನಾಗಿ ತಿಳಿದಿದೆ. ನಾವು ಏನು ಮಾಡಬೇಕೋ ಅದನ್ನು ಸೇನೆ ಮಾಡಿದೆ. ಈ ಮಾರಕ ದಾಳಿಗಳನ್ನು ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಬಳಸಿಕೊಂಡಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3sR1ZcT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...