ಬೆಂಗಳೂರು ನಗರದಲ್ಲಿ ಕುಗ್ಗಿದ ಕೊರೊನಾ: ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಇಳಿಕೆ

: ನಗರದಲ್ಲಿ ವೈರಾಣು ಸೋಂಕಿತ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿದ್ದು, ಜನರು ನಿಟ್ಟಿಸಿರು ಬಿಡುವಂತಾಗಿದೆ. ಪರಿಣಾಮ, ಮೆಕ್ರೋ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಬಿಬಿಎಂಪಿಯು ಮೂರು ಮತ್ತು ಅದಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾದ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್‌ ವಲಯಗಳೆಂದು ಗುರುತಿಸಿ, ನಿರ್ಬಂಧಗಳನ್ನು ಬಿಗಿಗೊಳಿಸುತ್ತಿದೆ. ಸೋಂಕು ಪತ್ತೆ ಪ್ರಮಾಣವು ಕಡಿಮೆಯಾಗುತ್ತಿರುವುದರಿಂದ ಕಳೆದ ಐದು ದಿನಗಳಲ್ಲಿ 45 ಪ್ರದೇಶಗಳು ಕಂಟೈನ್ಮೆಂಟ್‌ ವಲಯದಿಂದ ಮುಕ್ತಿ ಪಡೆದಿವೆ. ಆಗಸ್ಟ್ 14ರಂದು ಕಂಟೈನ್ಮೆಂಟ್‌ಗಳ ಸಂಖ್ಯೆ 172ಕ್ಕೆ ಏರಿಕೆಯಾಗಿತ್ತು. ಸದ್ಯ 127ಕ್ಕೆ ಇಳಿಕೆಯಾಗಿದೆ. ಕೋವಿಡ್‌ ಪರೀಕ್ಷಾ ಪ್ರಮಾಣ ಹೆಚ್ಚಳ, ಬಿಗಿ ನಿರ್ಬಂಧಗಳು ಹಾಗೂ ಲಸಿಕೆ ವಿತರಣೆಯಿಂದಾಗಿ ಸೋಂಕು ಪತ್ತೆ ಪ್ರಮಾಣವು ಶೇ. 0.55ಕ್ಕೆ ತಗ್ಗಿದೆ. ಮರಣ ದರವು ಶೇ 1.14ರಷ್ಟಿದೆ. ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲೇ ಅತಿ ಹೆಚ್ಚು ಕಂಟೈನ್ಮೆಂಟ್‌ ವಲಯಗಳಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ ನಿತ್ಯ ಸುಮಾರು 10, ಹೊರಮಾವು 7, ಹೂಡಿ, ಬೇಗೂರು, ಹಗದೂರು, ಆರ್‌. ಆರ್‌. ನಗರ, ಕೆ. ಆರ್‌. ಪುರ, ವರ್ತೂರು ಮತ್ತು ಕೋರಮಂಗಲ ವಾರ್ಡ್‌ನಲ್ಲಿ ತಲಾ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ರಾಯಪುರ, ಛಲವಾದಿಪಾಳ್ಯ, ಮಲ್ಲಸಂದ್ರ, ಲಕ್ಷ್ಮಿದೇವಿನಗರ, ಡಿ.ಜೆ.ಹಳ್ಳಿ, ಎಸ್‌.ಕೆ.ಗಾರ್ಡನ್‌, ನಾಗಪುರ, ರಾಜಗೋಪಾಲನಗರ, ಸುಧಾಮನಗರ, ಜಗಜೀವನ್‌ ರಾಂ ನಗರ ವಾರ್ಡ್‌ಗಳಲ್ಲಿ ಕಳೆದ 10 ದಿನಗಳಿಂದ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಮೊದಲನೇ ಅಲೆ ಸಂದರ್ಭದಲ್ಲಿ ಈ ಪ್ರದೇಶಗಳಲ್ಲೇ ಅತಿ ಹೆಚ್ಚು ಮಂದಿ ಸೋಂಕು ಬಾಧಿತರಾಗಿದ್ದರು. ಕೋವಿಡ್‌ ಸೋಂಕಿತರಿಗಾಗಿ ಸರಕಾರಿ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 2,086 ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ಕೇವಲ 205 ಮಂದಿಯಷ್ಟೇ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೀಗಾಗಿ, 1,881 ಹಾಸಿಗೆಗಳು ಖಾಲಿ ಬಿದ್ದಿವೆ. ಇಲ್ಲಿಯವರೆಗೆ 57,79,546 ಮಂದಿ ಕೋವಿಡ್‌ನ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. 16,66,592 ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ.


from India & World News in Kannada | VK Polls https://ift.tt/3j3VX5w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...