: ನೈಋುತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ - ನಡುವೆ ವಾರಾಂತ್ಯದ ವಿಶೇಷ ಸಂಚಾರ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 3 ಶುಕ್ರವಾರದಂದು ವಿಶೇಷ ರೈಲು ಬೆಂಗಳೂರಿನಿಂದ ಹೊರಡಲಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರಿನ ಯಶವಂತಪುರದಿಂದ ರೈಲು ಸೆಪ್ಟೆಂಬರ್ 3ರಂದು 11.50ಕ್ಕೆ ಹೊರಡಲಿದೆ. ಹುಬ್ಬಳ್ಳಿಯಿಂದ ಸೆಪ್ಟೆಂಬರ್ 4ರಂದು ರಾತ್ರಿ 7.35ಕ್ಕೆ ವಿಶೇಷ ರೈಲು ಹೊರಡಲಿದೆ. ಯಶವಂತಪುರದಿಂದ ಹೊರಡುವ ರೈಲು ತುಮಕೂರು, ಅರಸೀಕೆರೆ ಜಂಕ್ಷನ್, ದಾವಣಗೆರೆ, ಹರಿಹರ, ಹಾವೇರಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ನೈಋುತ್ಯ ರೈಲ್ವೆ ಹೇಳಿದೆ. ಬೆಂಗಳೂರು-ಚಾಮರಾಜನಗರ ರೈಲು, ನೈಋುತ್ಯ ರೈಲ್ವೆ ಕೆಎಸ್ಆರ್ ಬೆಂಗಳೂರು - ಚಾಮರಾಜನಗರ ನಡುವೆ ಸೆಪ್ಟೆಂಬರ್ 1 ರಿಂದ ಸಂಚರಿಸಲಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ಜನರ ಅನುಕೂಲಕ್ಕಾಗಿ ಎರಡು ನಗರಗಳ ನಡುವೆ ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ. ನಿತ್ಯ ಪ್ರಯಾಣಿಸುವವರಿಗೆ ಈ ರೈಲು ಸೇವೆಯಿಂದ ಅನುಕೂಲವಾಗಲಿದೆ. ನೈಋುತ್ಯ ರೈಲ್ವೆಯಿಂದ ಇನ್ನೊಂದು ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಯಶವಂತಪುರ ಹಾಗೂ ಸೇಲಂ ನಡುವೆ ಆಗಸ್ಟ್ 30ರಿಂದ ಆರಂಭವಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
from India & World News in Kannada | VK Polls https://ift.tt/38mgegD