ಆಫ್ಘಾನ್‌ ಬಿಕ್ಕಟ್ಟಿನಿಂದ ಆಮದು ಸ್ಥಗಿತ, ಡ್ರೈಫ್ರುಟ್ಸ್‌ ಬೆಲೆ ಗಗನಕ್ಕೆ ಜಿಗಿತ! ಹಬ್ಬಗಳ ಮೇಲೂ ಹೊಡೆತ

ವೀಣಾ ವಿ. ಕುಂಬಾರ ಹುಬ್ಬಳ್ಳಿ: ಅಫ್ಘಾನಿಸ್ತಾನದ ಬಿಕ್ಕಟ್ಟು ನಮ್ಮ ರಾಜ್ಯದ ಮಾರ್ಕೆಟ್‌ ಮೇಲೂ ಪರಿಣಾಮ ಬೀರಿದೆ. ಅಫ್ಘಾನಿಸ್ತಾನದಲ್ಲಿಯೇ ಬೆಳೆಯುವ ಎಷ್ಟೋ ಡ್ರೈಫ್ರುಟ್ಸ್‌ ಹಾಗೂ ಮಸಾಲೆ ಪದಾರ್ಥಗಳನ್ನು ನಾವು ಬಳಸುತ್ತೇವೆ. ಅವು ಅಲ್ಲಿ ಮಾತ್ರ ಬೆಳೆಯುವಂತಹ ಹಣ್ಣುಗಳಾಗಿದ್ದು, ಉತ್ಕೃಷ್ಟ ಗುಣಮಟ್ಟದ್ದವು ಆಗಿರುತ್ತವೆ. ಅಲ್ಲಿಯ ಅರಾಜಕತೆಯಿಂದ ಇದೀಗ ಆಮದು ನಿಂತಿದ್ದು, ಸುಮಾರು 15 ದಿನಗಳಿಂದ ಕೆಲ ಪದಾರ್ಥಗಳು ಕೆಜಿಗೆ 150ರಿಂದ 200 ರೂ. ಏರಿಕೆ ಕಂಡಿದೆ. ಅಂಜೂರ, ಸಕ್ಕರೆ ಬಾದಾಮಿ, ಬ್ಲ್ಯಾಕ್‌ ಗ್ರೇಫ್ಸ್‌, ಗ್ರೀನ್‌ ಗ್ರೇಫ್ಸ್‌, ಶಹಾಜೀರಿಗೆ, ಅಂಟು, ಇಂಗು ಅಫ್ಘಾನಿಸ್ತಾನದಲ್ಲಿಯೇ ಬೆಳೆಯುವಂತಹವು. ಒಂದೊಂದು ಸಾಮಗ್ರಿಯಲ್ಲಿಯೂ 10ರಿಂದ 20 ವಿಧಗಳಿವೆ. ಇವೆಲ್ಲ ಉತ್ತಮ ಗುಣಮಟ್ಟದ್ದಾಗಿರುತ್ತವೆ. ಅಫ್ಘಾನಿಸ್ತಾನದಲ್ಲಾದ ಬಿಕ್ಕಟ್ಟು ಈ ಎಲ್ಲ ಸಾಮಗ್ರಿಗಳ ದರದ ಮೇಲೆ ಪರಿಣಾಮ ಬೀರುತ್ತದೆ. ಶೇ.20ರಿಂದ 30ರಷ್ಟು ಏರಿಕೆಯಾಗಿದೆ ಎಂದು ಹುಬ್ಬಳ್ಳಿಯ ಸಗಟು ವ್ಯಾಪಾರಿಗಳು ಹೇಳುತ್ತಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟು ಇದೇ ರೀತಿ ಮುಂದುವರಿದು ಅಲ್ಲಿಂದ ಆಮದು ನಿಂತರೆ ಬಹಳ ಕಷ್ಟವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರುಪೇರು ಸ್ಥಳೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈಗ ನಮ್ಮ ದೇಶದಲ್ಲಿ ಹಬ್ಬದ ಸಂದರ್ಭ. ಈಗ ಶ್ರಾವಣ, ಕೃಷ್ಣ ಜನ್ಮಾಷ್ಟಮಿ, ದೊಡ್ಡ ಹಬ್ಬ ಗಣೇಶ ಚತುರ್ಥಿ ಬರುತ್ತವೆ. ಇದೇ ನೆಪದಲ್ಲಿ ಇನ್ನೂ ಏರಬಹುದು ಎಂಬ ಆತಂಕವೂ ಇದೆ. ಬಾದಾಮಿ, ಪಿಸ್ತಾ, ಅಕ್ರ್ಯೂಟ್‌, ಅಂಜೂರ ಇತ್ಯಾದಿ ಒಣ ಹಣ್ಣುಗಳು ಅಫ್ಘಾನಿಸ್ತಾನ ಹಾಗೂ ಸುತ್ತಲಿನ ದೇಶಗಳಿಂದ ದಿಲ್ಲಿ, ಮುಂಬಯಿ ಹಾಗೂ ಚೆನ್ನೈ ಮಾರುಕಟ್ಟೆಗೆ ಬರುತ್ತವೆ. ಅಲ್ಲಿಂದ ಹುಬ್ಬಳ್ಳಿ ವ್ಯಾಪಾರಿಗಳು ತರಿಸಿಕೊಳ್ಳುತ್ತಾರೆ. ಎಪಿಎಂಸಿಯಲ್ಲಿ ಏರಿಕೆ15 ದಿನಗಳಿಂದ ಡ್ರೈಫ್ರುಟ್ಸ್‌ ದರ ಒಂದೊಂದಾಗಿ ಏರುತ್ತಿದೆ. ಪಿಸ್ತಾ ಕೆಜಿಗೆ 300 ರೂ., ಅಕ್ರೂಟ್‌ ಕೆಜಿಗೆ 150 ರೂ., ಜಾಸ್ತಿ ಆಗಿದೆ. ಪಿಸ್ತಾ(ಉತ್ತಮ ಮಟ್ಟದ್ದು) 1050 ರೂ. ಇದ್ದದ್ದು 1300 ರೂ. ಆಗಿದೆ. ಕಾಬೂಲ್‌ ದ್ರಾಕ್ಷಿ ನಮ್ಮಲ್ಲಿ 260 ರೂ.ಗಳಿಂದ 340 ರೂ.ಗೆ ಏರಿದೆ ಎಂದು ಎಪಿಎಂಸಿಯಲ್ಲಿ ಅಂಗಡಿ ಹೊಂದಿರುವ ವ್ಯಾಪಾರಿ ಮುತ್ತು ಜವಳಿ ಹೇಳುತ್ತಾರೆ. ಶಕ್ತಿವರ್ಧಕಕೊರೊನಾ ಸಂದರ್ಭದಲ್ಲಿ ಎಲ್ಲರೂ ರೋಗ ನಿರೋಧಕ ಶಕ್ತಿವರ್ಧನೆಗೆ ಹೆಚ್ಚು ಡ್ರೈಫ್ರುಟ್ಸ್‌ ಬಳಸುತ್ತಿದ್ದಾರೆ. ಅಂಜೂರದಿಂದ ಹಿಮೋಗ್ಲೋಬಿನ್‌ ಹೆಚ್ಚುತ್ತದೆ, ಗರ್ಭಿಣಿಯರು ಹೆಚ್ಚು ಇದನ್ನು ಸೇವಿಸುತ್ತಾರೆ. ಯೋಗ ತಜ್ಞರು ಸಹ ಇದರ ಸೇವನೆ ಸಲಹೆ ನೀಡುತ್ತಾರೆ. ಕಾಬೂಲ್‌ ದ್ರಾಕ್ಷಿಯೂ ರಕ್ತ ಹೆಚ್ಚಳಕ್ಕೆ ಉತ್ತಮ ಎಂದು ಅದೂ ಕೆಲವರಿಗೆ ಬಹಳ ಇಷ್ಟವಾಗುತ್ತದೆ. ಅಫ್ಘಾನಿಸ್ತಾನದಿಂದ ಸಾಮಗ್ರಿಗಳು ಆಮದಾಗುತ್ತಿಲ್ಲ. ಇನ್ನು ಮುಂದೆ ಹಬ್ಬದ ಸೀಸನ್‌ ಇರುವುದರಿಂದ ಬಹಳ ಪರಿಣಾಮ ಬೀರಲಿದೆ. ಮಾರುಕಟ್ಟೆಯಲ್ಲಿ ರೇಟುಗಳು ಏರಿವೆ. ಅಂಜೂರ, ಅಫ್ಘನ್‌ ದ್ರಾಕ್ಷಿ, ಸಕ್ಕರೆ ಬಾದಾಮಿಗಳೆಲ್ಲ ಕೆಜಿಗೆ 200 ರೂ. ಏರಿವೆ. ಅಂಜೂರಕ್ಕೆ ಬೇಡಿಕೆ ಹೆಚ್ಚು ಇರುವುದರಿಂದ ಅದು ಗ್ರಾಹಕರಿಗೆ ಹೊಡೆತ ಬೀಳುತ್ತದೆ ಎಂದು ನರೇಶ ಡ್ರೈಫ್ರುಟ್ಸ್‌ ಅಂಗಡಿ ಹುಬ್ಬಳ್ಳಿಯ ನರೇಶ ಸೋಳಂಕಿ ಹೇಳುತ್ತಾರೆ.


from India & World News in Kannada | VK Polls https://ift.tt/3Bgylkm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...