ಉಪನ್ಯಾಸಕಿ, ಸಾಹಿತಿ ದೀಪಾ ಹಿರೇಗುತ್ತಿಗೆ ಈ ಬಾರಿಯ ಮಯೂರವರ್ಮ ಪ್ರಶಸ್ತಿ ಗೌರವ

ಕೊಪ್ಪ: ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ, ಸಾಹಿತಿ ಅವರಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಯೂರ ವರ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆ.27ರಂದು ಸಂಜೆ 4ಕ್ಕೆ ಆಯೋಜಿಸಿರುವ ನೃಪತುಂಗ ಸಾಹಿತ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಪಡೆಯಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಪ್ರಶಸ್ತಿ ನೀಡಲಿದ್ದು, ಸಾರಿಗೆ ಸಚಿವ ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಕಸಾಪ ಗೌರವಾರ್ಪಣೆ:ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ದೀಪಾ ಹಿರೇಗುತ್ತಿ ಅವರನ್ನು ತಾಲೂಕು ಕಸಾಪ ಘಟಕದ ಸದಸ್ಯರು ಗುರುವಾರ ಸಾಹಿತಿಯ ಮನೆಗೆ ತೆರಳಿ ಗೌರವಿಸಿದರು. ಅಧ್ಯಕ್ಷ ಇನೇಶ್‌, ಮಾಜಿ ಅಧ್ಯಕ್ಷ ಎಚ್‌.ಎಂ.ರವಿಕಾಂತ್‌, ಸದಸ್ಯರಾದ ರಮೇಶ್‌, ಶ್ರೀ ಹರ್ಷ, ಚಂದ್ರಕಲಾ, ಚಾವಲ್ಮನೆ ಸುರೇಶ್‌ ನಾಯ್ಕ್‌, ಶಂಕರಪ್ಪ, ಬರ್ಕತ್‌ ಆಲಿ, ಶಗುಪ್ತಾ, ಅಣ್ಣಯ್ಯ, ದುರ್ಗೇಶ್‌, ಕರವೇ ಅಧ್ಯಕ್ಷ ಫ್ರಾನ್ಸಿಸ್‌ ಕಾರ್ಡೋಜ, ನಾಗರಾಜ್‌ ಪವಾರ್‌, ಜಗದೀಶ್‌ ಮತ್ತಿತರರು ಇದ್ದರು.


from India & World News in Kannada | VK Polls https://ift.tt/3zyUBFy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...