2022ವರೆಗೆ ಮುಂದುವರಿಯುತ್ತೆ ಐಟಿ ಕಂಪನಿಗಳ ವರ್ಕ್ ಫ್ರಂ ಹೋಮ್‌; ಸರಕಾರವೇ ಪರೋಕ್ಷ ಬೆಂಬಲ!

ಮಹಾಬಲೇಶ್ವರ ಕಲ್ಕಣಿ ಬೆಂಗಳೂರು: ನಗರದ ಸಿಲ್ಕ್‌ ಬೋರ್ಡ್‌ನಿಂದ ಕೆಆರ್‌ಪುರಂವರೆಗಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ ಡಿಸೆಂಬರ್‌ 2022ರವರೆಗೂ ವರ್ಕ್ ಫ್ರಂ ಹೋಮ್‌ ವಿಸ್ತರಿಸುವಂತೆ ರಾಜ್ಯ ಸರಕಾರ ಸಲಹೆ ಕೊಟ್ಟಿದೆ. ಇದರಿಂದ ಐಟಿ ಉದ್ಯೋಗಿಗಳನ್ನೇ ನೆಚ್ಚಿಕೊಂಡಿದ್ದ ಹೋಟೆಲ್‌, ಆಟೋ ಹಾಗೂ ಕ್ಯಾಬ್‌ ಮಾಲೀಕರು ಮತ್ತು ಇತರೆ ವಾಣಿಜ್ಯ ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗಗಳಲ್ಲಿ ಟೆಕ್‌ ಪಾರ್ಕ್ ಮತ್ತು ಐಟಿ ಕಂಪನಿಗಳ ಕ್ಯಾಂಪಸ್‌ಗಳಿದ್ದು, ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತವೆ. ಇದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಸಿಲ್ಕ್‌ ಬೋರ್ಡ್‌ನಿಂದ ಕೆಆರ್‌ಪುರಂ ವರೆಗಿನ ರಸ್ತೆಗಳಲ್ಲಿ ತೆರಳುವ ಐಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ಮುಂದುವರಿಸುವಂತೆ ರಾಜ್ಯ ವಿದ್ಯುನ್ಮಾನ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಲಹೆ ನೀಡಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ಧಾರ ಕಂಪನಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಬದಲಾಯಿಸಿತು. ಇದರಿಂದ ವರ್ಷಾಂತ್ಯದಲ್ಲಿ ಕಚೇರಿ ತೆರೆಯಬೇಕೆಂದಿದ್ದ ಬಹಳಷ್ಟು ಕಂಪನಿಗಳು ಗೊಂದಲಕ್ಕೆ ಒಳಗಾಗಿವೆ. ಹೋಟೆಲ್‌ ಉದ್ಯಮ ಸಂಪೂರ್ಣ ಕುಸಿತಈ ರಸ್ತೆಯ ವ್ಯಾಪ್ತಿಯಲ್ಲಿ ಸುಮಾರು 800 ಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ದೊಡ್ಡ ಐಟಿ ಕಂಪನಿಯೊಂದರಲ್ಲಿ ಸರಾಸರಿ 5 ರಿಂದ 20 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಪ್ರತಿ ಕಂಪನಿಯಲ್ಲಿ 10-15 ಫುಡ್‌ ಕೋರ್ಟ್‌ಗಳು ಇವೆ. ಕೋವಿಡ್‌ ಕಾರಣದಿಂದ ಅವುಗಳಲ್ಲಿ ಕೆಲವು ಈಗಾಗಲೇ ಮುಚ್ಚಿ ಹೋಗಿವೆ. ಇದರಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ 400 ಹೋಟೆಲ್‌ಗಳಿವೆ, ಇವುಗಳಲ್ಲೂ ಕೆಲವು ಮುಚ್ಚಿಹೋಗಿವೆ. ಇದ್ದ ಕೆಲವು ಇಂದಲ್ಲ ನಾಳೆ ಐಟಿ ಕಂಪನಿಗಳು ಪುನರಾರಂಭವಾಗುತ್ತವೆ ಎನ್ನುವ ಆಶಾಭಾವ ಹೊಂದಿದ್ದವು. ಅವುಗಳಿಗೆ ಸರಕಾರದ ಈ ಹೇಳಿಕೆಯಿಂದ ಆತಂಕ ತಂದಿದೆ ಎನ್ನುತ್ತಾರೆ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ ಪಿ.ಸಿ.ರಾವ್‌. ನಿತ್ಯ ಎರಡು ಲಕ್ಷ ಊಟ :ಲಾಕ್‌ಡೌನ್‌ ಪೂರ್ವದಲ್ಲಿಐಟಿ ವಲಯದಲ್ಲಿ ಪ್ರತಿದಿನ 2 ಲಕ್ಷ ಊಟ ಸರಬರಾಜಾಗುತ್ತಿತ್ತು. 8 ರಿಂದ 10 ಲಕ್ಷ ಟೀ ಖರ್ಚಾಗುತ್ತಿತ್ತು ಸುಮಾರು 1.60 ಲಕ್ಷ ಲೀಟರ್‌ ಹಾಲು ಬೇಕಾಗಿತ್ತು. ಇದರ ಅರ್ಧದಷ್ಟು ಸಿಲ್ಕ್‌ ಬೋರ್ಡ್‌- ಕೆ.ಆರ್‌.ಪುರಂ ಭಾಗದಿಂದ ಹೋಗುತ್ತಿತ್ತು ಎನ್ನುತ್ತಾರೆ ಪಿ.ಸಿ.ರಾವ್‌. ಈ ಭಾಗದ ಹೋಟೆಲ್‌ಗಳು ಮಾತ್ರವಲ್ಲದೆ ಬೇಕರಿ, ಪಾನ್‌ಶಾಪ್‌, ಇತರೆ ಚಿಕ್ಕಪುಟ್ಟ ತಳ್ಳುವ ಗಾಡಿಗಳಿಗೂ ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ, ಹಾಗಾಗಿ ಮೆಟ್ರೊ ಕಾಮಗಾರಿಗಾಗಿ ವರ್ಕ್ ಫ್ರಂ ಹೋಮ್‌ ಮುಂದುವರಿಸಬೇಕು ಎನ್ನುವುದು ಅವೈಜ್ಞಾನಿಕ ತೀರ್ಮಾನ, ಇದರಿಂದ ದೊಡ್ಡ ಮಟ್ಟದಲ್ಲಿ ನಷ್ಟ ಸಂಭವಿಸಲಿದೆ ಎನ್ನುತ್ತಾರೆ ಅವರು. ಐಟಿ ಕಂಪನಿ ನಂಬಿದ್ದ ಕ್ಯಾಬ್‌ ಚಾಲಕರು ಬೀದಿಗೆಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳುವ ಪ್ರಕಾರ ‘ಸಿಲ್ಕ್‌ ಬೋರ್ಡ್‌ ಐಟಿ ವಿಭಾಗದ ದೊಡ್ಡ ಹಬ್‌. ಈ ಭಾಗದಲ್ಲಿ ಐಟಿ ಕಂಪನಿಗಳನ್ನೇ ನಂಬಿಕೊಂಡಿದ್ದ, ಒಲಾ- ಉಬರ್‌ ಸೇರಿದಂತೆ ಖಾಸಗಿ ಕ್ಯಾಬ್‌ ಕಂಪನಿಗಳ ಸಂಚಾರ ಸಾಕಷ್ಟು ತಗ್ಗಿದೆ. ಐಟಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದ ಸ್ವಂತ ಕ್ಯಾಬ್‌ ಹೊಂದಿದವರು ಸಾಲ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಅರ್ಧಕ್ಕಿಂತ ಹೆಚ್ಚು ಕ್ಯಾಬ್‌ ಸಮುದಾಯಕ್ಕೆ ದೊಡ್ಡ ಮಟ್ಟದ ವ್ಯವಹಾರ ತಂದುಕೊಡುವ ಮಾರ್ಗವೇ ಇದು. ಐಟಿ ಕಂಪನಿಗಳನ್ನೇ ನೆಚ್ಚಿಕೊಂಡು ಕ್ಯಾಬ್‌, ಆಟೋ ಇಟ್ಟುಕೊಂಡವರು ಏನು ಮಾಡಬೇಕು? ನಗರದಲ್ಲಿಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಹಾಗಿರುವಾಗ ಎಲ್ಲರೂ ವರ್ಕ್ ಫ್ರಂ ಹೋಮ್‌ ಮಾಡಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ ಅವರು. ಸೂಪರ್‌ ಮಾರ್ಕೆಟ್‌ನಲ್ಲಿ ಜನರೇ ಇಲ್ಲಸಿಲ್ಕ್‌ಬೋರ್ಡ್‌ನಿಂದ - ಕೆ.ಅರ್‌.ಪುರಂ ನಡುವೆ ಸುಮಾರು 85 ರಿಂದ 100 ಸೂಪರ್‌ ಮತ್ತು ಹೈಪರ್‌ ಮಾರ್ಕೆಟ್‌ಗಳು ಇವೆ. ಕೋವಿಡ್‌ ಪೂರ್ವದಲ್ಲಿಇವೆಲ್ಲವೂ ತುಂಬಿ ತುಳುಕುತ್ತಿದ್ದವು. ಈಗ ಶೇ. 60ರಷ್ಟು ವ್ಯವಹಾರ ಕುಸಿದಿದೆ. ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ ನೀಡಿರುವುದರಿಂದ ಇವುಗಳ ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮೆಟ್ರೊ ಕಾಮಗಾರಿ ನೆಪದಲ್ಲಿ ಮತ್ತೆ ವರ್ಕ್ ಫ್ರಂ ಹೋಮ್‌ ಮುಂದುವರಿಸಿದ್ದೇ ಆದಲ್ಲಿಇದ್ದ ಸೂಪರ್‌ ಮಾರ್ಕೆಟ್‌ಗಳೂ ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಶರವಣ್‌. ಬಾಡಿಗೆ ನೀಡುವ ಉದ್ದೇಶದಿಂದ ಕಟ್ಟಿದ ಬಹಳಷ್ಟು ಕಟ್ಟಡಗಳಿಗೆ ಯಾರೂ ಬರುತ್ತಿಲ್ಲ. ಎರಡು ಮೂರು ಮಹಡಿಗಳನ್ನು ಬಾಡಿಗೆಗೆ ಪಡೆದವರು ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಒಂದು ಮಹಡಿಯನ್ನು ಮಾತ್ರ ಬಾಡಿಗೆಗೆ ಕೇಳುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ನೆಲ ಕಚ್ಚಿದೆ. ಸೆಕ್ಯುರಿಟಿ, ಹೌಸ್‌ ಕೀಪಿಂಗ್‌ ಕೆಲಸಗಾರರ ಸಂಖ್ಯೆಯೂ ಕಡಿತವಾಗಿದೆ.


from India & World News in Kannada | VK Polls https://ift.tt/2WvpgFg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...