ದೇವನಹಳ್ಳಿಯ ಕೆಂಗುಲಾಬಿ ತೋಟದಲ್ಲಿ ನಡುವೆ ಗಾಂಜಾ ಬೆಳೆ..! 60 ಕೆಜಿ ಮಾದಕ ವಸ್ತು ವಶ..

ಕುಂದಾಣ (): ದೇವನಹಳ್ಳಿ ತಾಲೂಕಿನ ವಿಶ್ವನಾಥ ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಣಿಗಟ್ಟ ಗ್ರಾಮದ ದಾಸಪ್ಪ ಎಂಬುವವರ ತೋಟವೊಂದರಲ್ಲಿ ಬೆಳೆಯುತ್ತಿದ್ದ 24 ಲಕ್ಷ ರೂ. ಮೌಲ್ಯದ ಬೆಳೆಯನ್ನು ವಿಶ್ವನಾಥಪುರ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಗಾಂಜಾ ಪೂರೈಕೆಗೆ ಸಂಬಂಧಿಸಿದಂತೆ, ಒಂದಷ್ಟು ಜನರನ್ನು ಬಂಧಿಸಿದ್ದ ವಿಶ್ವನಾಥಪುರ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಬೆಳೆದಿರುವ ಮಾಹಿತಿಯ ಮೇರೆಗೆ ವಿಶ್ವನಾಥಪುರ ಪೊಲೀಸ್‌ ಪಿಎಸ್‌ಐ ವೆಂಕಟೇಶ್‌ ನೇತೃತ್ವದ ತಂಡ ತೋಟದಲ್ಲಿ ಚುರುಕು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಂದು 5 ಅಡಿ ಎತ್ತರ ಬೆಳೆದಿದ್ದು, ಹಸಿ ಗಾಂಜಾ ಸುಮಾರು 60 ಕೆಜಿ ಬರಲಿದ್ದು, ದಾಳಿ ನಡೆಸಿ ನಾಲ್ಕು ಗಾಂಜಾ ಗಿಡ ಜಪ್ತಿ ಮಾಡಿದ್ದಾರೆ. ದಾಳಿ ವಿಚಾರ ತಿಳಿಯುತ್ತಿದ್ದಂತೆ ದಾಸಪ್ಪ ಎಂಬಾತ ನಾಪತ್ತೆಯಾಗಿದ್ದಾನೆ. ವಿಶ್ವನಾಥಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದಾಸಪ್ಪನ ಹುಡುಗಾಟಕ್ಕೆ ಬೀಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ 60 ಕೆಜಿ 600ಗ್ರಾಂ. ತೂಕದ ಗಾಂಜಾ ಗಿಡಗಳು ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 24 ಲಕ್ಷ ರೂ. ಎಂದು ಮೂಲಗಳಿಂದ ತಿಳಿದುಬಂದಿದೆ.


from India & World News in Kannada | VK Polls https://ift.tt/381hAwW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...