'ಕಾಂಗ್ರೆಸ್‌ನಲ್ಲಿನ ನಾಯಕತ್ವ ಪೈಪೋಟಿಯಿಂದ ಸಿದ್ದರಾಮಯ್ಯರಿಗೆ ಕೈಕಾಲು ಆಡ್ತಿಲ್ಲ': ಈಶ್ವರಪ್ಪ

ಬೆಂಗಳೂರು: ಮಾಜಿ ಸಿಎಂ ಅವರಿಗೆ ಕೈಕಾಲು ಆಡ್ತಿಲ್ಲ, ಏನು ಮಾಡಬೇಕು? ಏನು ಬಿಡಬೇಕು? ಎಂಬುದು ಗೊತ್ತಾಗುತ್ತಿಲ್ಲ ಎಂದು ಸಚಿವ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್‌ ಕೊರೊನಾ ಉಪಕರಣಗಳ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ರಾಜಕಾರಣ‌ ಮಾಡುತ್ತಾ ಹೊರಟಿದ್ದಾರೆ. ಅವರು ದಾಖಲೆ ಬಿಡುಗಡೆ ಮಾಡೋದು ಹೊಸದೇನಲ್ಲ. ಯಾವ‌ ದಾಖಲೆ ಸರಿ ಇದೆ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಮೊದಲು ಕೊರೊನಾ ಓಡಿಸೋಣ, ನಂತರ ರಾಜಕಾರಣ‌ ಮಾಡೋಣ. ಕೊರೊನಾ‌ ಓಡಿಸಲು ಕಾಂಗ್ರೆಸ್‌ ಪಕ್ಷ ಸಹಕಾರ ನೀಡಲಿ ಎಂದ ಅವರು, ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ಇದೆ. ವಿಪಕ್ಷ ನಾಯಕರಾಗಿ ಏನು ಮಾಡಬೇಕು ಎಂಬುದು ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಟೀಕಿಸಿದರು. ಕೊರೊನಾ ಸಮಸ್ಯೆ ಇರುವಾಗ ಸರಕಾರದ ಜೊತೆ ಸಿದ್ದರಾಮಯ್ಯ ಕೈ ಜೋಡಿಸಬೇಕು. ಅದು ಬಿಟ್ಟು ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ನಾಯಕತ್ವದ ಪೈಪೋಟಿಯಿಂದ ಈ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಕೊರೊನಾದಿಂದ ಜನ ಸಾಯುತ್ತಿರುವಾಗ ಒಟ್ಟಿಗೆ ಕೆಲಸ ಮಾಡಬೇಕು. ಸಿದ್ದರಾಮಯ್ಯ ಹಾಗೂ ಡಿಕೆಶಿ ಸರಕಾರದ ಜೊತೆ ಕೈ ಜೋಡಿಸಬೇಕು ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ಟಾಂಗ್‌ ನೀಡಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಸರಕಾರ ಭ್ರಷ್ಟಾಚಾರ ನಡೆಸಿದೆ. ಸುಮಾರು 2200 ಕೋಟಿ ರೂ. ಹಗರಣ ನಡೆದಿದೆ. ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3eMW1kQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...