ಬಕ್ರೀದ್ ಹಬ್ಬ ಸಹೋದರತ್ವ, ಸಹಾನುಭೂತಿ ಮನೋಭಾವವನ್ನು ಹೆಚ್ಚಿಸಲಿ : ಪ್ರಧಾನಿ ಮೋದಿಯಿಂದ ಶುಭಾಶಯ

ಹೊಸದಿಲ್ಲಿ: ಇಂದು ದೇಶದೆಲ್ಲೆಡೆ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರಿದ್ ಹಬ್ಬದ ಸಂಭ್ರಮ. ಕರ್ನಾಟಕದ ಕರಾವಳಿ ಭಾಗದಲ್ಲಿ ಶುಕ್ರವಾರ ಬಕ್ರಿದ್ ಹಬ್ಬವನ್ನು ಆಚರಿಸಿದರೆ ದೇಶದ ಬಹುತೇಕ ಕಡೆಗಳಲ್ಲಿ ಇಂದು ಆಚರಿಸಲಾಗ್ತಿದೆ. ಬಕ್ರಿದ್ ಹಬ್ಬದ ಹಿನ್ನೆಲೆ ಪ್ರಧಾನಿ ದೇಶದ ಜನತೆಗೆ ಶುಭಾಷಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಎಲ್ಲರಿಗೂ ಈದ್-ಉಲ್-ಅದಾ ಹಬ್ಬದ ಶುಭಾಷಯಗಳು. ನ್ಯಾಯಯುತ, ಸಾಮರಸ್ಯ ಮತ್ತು ಸಮಾಜವನ್ನು ಒಟ್ಟುಗೂಡಿಸಲು ಈ ದಿನ ನಮಗೆ ಪ್ರೇರಣಾದಾಯಕವಾಗಲಿ. ಎಲ್ಲರಲ್ಲೂ ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ ಎಂದು ಶುಭಾಶಯ ತಿಳಿಸಿದ್ದಾರೆ. ವಿಶ್ವದಾದ್ಯಂತ ಮುಸಲ್ಮಾನ ಬಾಂಧವರು ಶ್ರದ್ದೆಯಿಂದ ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಬಕ್ರೀದ್ ದಿನ ಬೆಳಗ್ಗೆ ಮಸೀದಿ ಮತ್ತು ಈದ್ಗಾಗಳಲ್ಲಿ ವಿಶೇಷ ನಮಾಜ್ ಇರುತ್ತದೆ. ಈ ವೇಳೆ ಮಕ್ಕಳು ಹಿರಿಯರೆನ್ನದೆ ಹೊಸ ಬಟ್ಟೆ ಧರಿಸಿ ಪಾಲ್ಗೊಳ್ಳುತ್ತಾರೆ. ಹಬ್ಬದ ವಿಶೇಷವಾಗಿ ಸ್ನೇಹಿತರು ಮತ್ತು ಸಂಬಂಧಿಕರ ಮನೆಗೆ ತೆರಳಿ ತಿಳಿಸಿ ಪರಸ್ಪರ ಕುಶಲೋಪರಿ ವಿಚಾರಿಸುವ ಪರಿಪಾಠವೂ ಹಿಂದಿನಿಂದ ಬಂದಿದೆ. ದೇಶದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ರೋಗ ವಕ್ಕರಿಸಿರುವ ಹಿನ್ನೆಲೆ ಈ ವರ್ಷ ಬಕ್ರಿದ್ ಸೇರಿದಂತೆ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳು ಮೆರಗು ಕಳೆದುಕೊಂಡಿದ್ದು, ಬಕ್ರಿದ್ ಹಬ್ಬವನ್ನು ಕೂಡ ಬಹುತೇಕ ಕಡೆ ಸರಳವಾಗಿ ಆಚರಿಸಲಾಗ್ತಿದೆ.


from India & World News in Kannada | VK Polls https://ift.tt/2Ds6HbK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...