ವಾಷಿಂಗ್ಟನ್: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಸಿಕೊಂಡಿರುವ ಅಧ್ಯಕ್ಷ , ಈ ಕುರಿತಾಗಿ , ಹಾಗೂ ರಷ್ಯಾದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಭಾರತ, ಚೀನಾ ಹಾಗೂ ರಷ್ಯಾ ದೇಶಗಳು ತಮ್ಮ ವಾತಾವರಣದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಶುದ್ಧ ಗಾಳಿಯ ಮಹತ್ವದ ಅರಿಯದ ಈ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕ ತನ್ನ ಹವಾಮಾನದ ಕುರಿತು ಅತ್ಯಂತ ಜಾಗರೂಕವಾಗಿರುತ್ತದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಟೆಕ್ಸಾಸ್ನ ಮಿಡ್ಲ್ಯಾಂಡ್ನಲ್ಲಿರುವ ಪೆರ್ಮಿಯನ್ ಜಲಾನಯನ ಪ್ರದೇಶದಲ್ಲಿ ಮಾತನಾಡಿದ ಟ್ರಂಪ್, ಪ್ಯಾರಿಸ್ ಹವಾಮಾನ ಒಪ್ಪಂದದಿಂದಾಗಿ ಅಮೆರಿಕದಲ್ಲಿ ಸ್ಥಾಪನೆಯಾಗಬೇಕಿದ್ದ ಅದೆಷ್ಟೋ ಕಾರ್ಖಾನೆಗಳು ಚೀನಾ ಮತ್ತು ರಷ್ಯಾದ ಪಾಲಾಗಿವೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ತಮ್ಮ ಪ್ರಯತ್ನಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ. ಇದೇ ಕಾರಣಕ್ಕೆ ನ್ಯಾಯಸಮ್ಮತವಲ್ಲದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹಿಂಪಡೆಯಲಾಯಿತು ಎಂದಿರುವ ಟ್ರಂಪ್, ವಾತಾವರಣದ ಕುರಿತು ಅಮರಿಕಕ್ಕೆ ಇರುವಷ್ಟು ಕಾಳಜಿ ಭಾರತ, ಚೀನಾ ಹಾಗೂ ರಷ್ಯಾ ದೇಶಗಳಿಗೆ ಇಲ್ಲ ಎಂದು ಹರಿಹಾಯ್ದಿದ್ದಾರೆ. ಸಂಕುಚಿತ ಮನೋಭಾವದ ಎಡಪಂಥೀಯರು ಹಾಗೂ ಡೆಮೊಕ್ರಾಟ್ಸ್ಗಳ ತಪ್ಪು ನಿರ್ಧಾರಗಳಿಂದಾಗಿ ಅಮೆರಿಕದ ಯುವ ಜನತೆ ಸಂಕಷ್ಟಕ್ಕೆ ಸಿಲುಕಿದೆ. ಆದರೆ ತಾವು ಅಧ್ಯಕ್ಷರಾಗಿ ಇರುವವರೆಗೂ ಈ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ.
from India & World News in Kannada | VK Polls https://ift.tt/30ZsteW