ಗುಜರಾತಿನ ಅಣು ಸ್ಥಾವರಕ್ಕೆ ಉಡುಪಿ ಬೆಲ್‌ಒಸೀಲ್‌ ಸಂಸ್ಥೆಯಿಂದ ಉಪಕರಣ

ಎಸ್‌. ಜಿ. ಕುರ್ಯ, ಗುಜರಾತಿನಲ್ಲಿ 700 ಮೆ. ವ್ಯಾ. ಸಾಮರ್ಥ್ಯದ ಕಕ್ರಾಪರ್‌ ಅಣು ವಿದ್ಯುತ್‌ 3ನೇ ಸ್ಥಾವರ ಸ್ವದೇಶಿ ತಂತ್ರಜ್ಞಾನದಲ್ಲಿ ರೂಪುಗೊಂಡಿದ್ದು, ಸಹಸ್ರಾರು ವಾಲ್ವ್ಸ್ ಗಳನ್ನು ಉಡುಪಿಯ ಬೆಲ್‌ಒಸೀಲ್‌ ಸಂಸ್ಥೆ ಪೂರೈಸಿದೆ. ಇದರಿಂದ ನ್ಯಾಷನಲ್‌ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌(ಎನ್‌ಪಿಸಿಎಲ್‌) ಯುರೋಪಿಯನ್‌ ರಾಷ್ಟ್ರಗಳಿಂದ ಇಂಡಸ್ಟ್ರಿಯಲ್‌ ವಾಲ್ವ್ಸ್ ಆಮದು ಮಾಡಿಕೊಳ್ಳುವುದು ನಿಲುಗಡೆಯಾಗಿ ಸ್ವಾವಲಂಬನೆ ಸಾಧಿಸಿದಂತಾಗಿದೆ. 2018ರಿಂದ ಈ ಸಂಸ್ಥೆ ಅಣು ವಿದ್ಯುತ್‌ ಘಟಕಕ್ಕೆ ವಾಲ್ವ್ಸ್ ಗಳನ್ನು ಪೂರೈಕೆ ಮಾಡುತ್ತಿದ್ದು,ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಆರೂರಲ್ಲಿ ಫೌಂಡ್ರಿ ಯುನಿಟ್‌ ಇದ್ದು(100 ಮಂದಿ), ಸುಬ್ರಹ್ಮಣ್ಯ ನಗರದಲ್ಲಿ 250 ಮಂದಿ ಕೆಲಸ ಮಾಡುತ್ತಿದ್ದಾರೆ. ಲೀಕ್‌ ಪ್ರೂಫ್‌ ಇಂಡಸ್ಟ್ರಿಯಲ್‌ ವಾಲ್ವ್ಸ್ ತಯಾರಿಯಲ್ಲಿ ಏರ್‌, ಪ್ರೆಶರ್‌, ಹೀಲಿಯಂ ಗ್ಯಾಸ್‌, ನೀರು, ಶಾಖ ಇತ್ಯಾದಿ ಅಗ್ನಿ ಪರೀಕ್ಷೆಗೆ ಒಳಪಡಿಸಿ ಗುಣಮಟ್ಟ, ಸಾಮರ್ಥ್ಯ ಪರಿಶೀಲಿಸಲಾಗಿದೆ. ಐಎಸ್‌ಒ ಜತೆಗೆ ಯುರೋಕ್ಲೋರ್‌ ಸರ್ಟಿಫಿಕೇಶನ್‌ ಪಡೆದ ಜಗತ್ತಿನ ಆರು ಕಂಪನಿಗಳಲ್ಲಿ ಬೆಲ್‌ ಒ ಸೀಲ್‌ ಭಾರತದ ಏಕೈಕ ಕಂಪನಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸ್ವದೇಶಿ ವಿನ್ಯಾಸದ ರೂಪುಗೊಳಿಸಿದ ಸಾಧನೆ ಮೆಚಿ ಟ್ವೀಟ್‌ ಮಾಡಿದ್ದಾರೆ. ವಿಜ್ಞಾನಿಗಳಿಗೆ ದೇಶದ ಪರವಾಗಿ ಗೌರವ ಸಲ್ಲಿಸಿದ್ದು ಭಾರತ ಪ್ರಧಾನಿ ಮೋದಿ ದೂರದೃಷ್ಟಿಯ ಆತ್ಮನಿರ್ಭರದ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಣು ಸ್ಥಾವರದ ರಿಯಾಕ್ಟರ್‌ ಬುಧವಾರ ಕಾರ್ಯಾರಂಭಿಸಿದೆ. ಉಡುಪಿಯ ಸಂತೆಕಟ್ಟೆ ಸುಬ್ರಹ್ಮಣ್ಯ ನಗರದಲ್ಲಿ(ಪ್ರಧಾನ ಕಚೇರಿ ಮುಂಬಯಿ) ಇರುವ ಬೆಲ್‌ ಒ ಸೀಲ್‌ ಸಂಸ್ಥೆಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಉಡುಪಿ ಮೂಲದ ಗಿಲ್ಬರ್ಟ್‌ ಸಾಲಿನ್ಸ್‌ ಸ್ಥಾಪಕ ಚೇರ್ಮನ್‌ ಆಗಿದ್ದಾರೆ. 30 ದೇಶಗಳಿಗೆ ವಾಲ್ವ್ಸ್ ಪೂರೈಸುತ್ತಿದ್ದು, ಅಣು ವಿದ್ಯುತ್‌ ಸ್ಥಾವರಕ್ಕೆ ವಾಲ್ವ್ಸ್ ಪೂರೈಕೆ ಹೊಸ ಅವಕಾಶವಾಗಿದೆ. ತೈಲ, ಫಾರ್ಮಾ, ಟೆಕ್ಸ್‌ಟೈಲ್‌, ಪವರ್‌ ಕಂಪನಿಗಳಿಂದ ಗುಣಮಟ್ಟದ ವಾಲ್ವ್ಸ್ ಗೆ ಅಪಾರ ಬೇಡಿಕೆಯಿದೆ. - ಬಿ. ಕೆ. ನಾರಾಯಣ್‌, ಮಾನವ ಸಂಪನ್ಮೂಲ ನಿರ್ದೇಶಕ, ಬೆಲ್‌ ಒ ಸೀಲ್‌, ಸುಬ್ರಹ್ಮಣ್ಯ ನಗರ, ಉಡುಪಿ


from India & World News in Kannada | VK Polls https://ift.tt/2EqnH2B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...