ಇಂದು ಟೈಗರ್‌ ಡೇ: ಹುಲಿಗಳ ಸಂಖ್ಯೆ ಇಳಿಕೆ, 2ನೇ ಸ್ಥಾನದಲ್ಲಿ ಕರ್ನಾಟಕ

ಬೆಂಗಳೂರು: ದೇಶದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಜ್ಯ ಪ್ರಸ್ತುತ 2ನೇ ಸ್ಥಾನಕ್ಕಿಳಿದಿದೆ. 526ಹುಲಿಗಳ ಸಂಖ್ಯೆಯೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನಕ್ಕೇರಿದ್ದರೆ, 524ಹುಲಿಗಳೊಂದಿಗೆ ರಾಜ್ಯ 2ನೇ ಸ್ಥಾನಕ್ಕಿಳಿದಿದೆ. ರಾಜ್ಯದಲ್ಲಿ ಪ್ರಸ್ತುತ ಕಾಳಿ, ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ, ಬಂಡೀಪುರ ಸಂರಕ್ಷಿತ ಧಾಮಗಳಿವೆ. ಇದರೊಂದಿಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ವನ್ಯಜೀವಿಧಾಮದ 900ಚದರ ಕಿಮೀ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹುಲಿಗಳಿದ್ದು, ಈ ಪ್ರದೇಶವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಿಸಲು ಈ ಹಿಂದೆಯೇ ಮನವಿ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ವನ್ಯಜೀವಿಗಳ ವ್ಯಾಪ್ತಿ, ವಲಯಗಳ ಬಗ್ಗೆ ಕೆಲ ಸ್ಪಷ್ಟನೆ ಕೇಳಿತ್ತು. ಆದರೆ, ಕೊರೊನಾ ಹೊಡೆತಕ್ಕೆ ಈ ಪ್ರಕ್ರಿಯೆಗಳು ಸ್ತಗಿತಗೊಂಡಿವೆ. ಹುಲಿ ಅರಣ್ಯ ಸಂರಕ್ಷಣಾ ಧಾಮವೆಂದು ಘೋಷಣೆಯಾದರೆ ಹುಲಿ ಸಂತತಿ ವೃದ್ಧಿಯಾಗಲಿದೆ. ಏನಿದು ಹುಲಿ ದಿನ? ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್‌ಪೀಟರ್‌ಬರ್ಗ್‌ನಲ್ಲಿಆಚರಿಸಲಾಯಿತು. ಹುಲಿ ಸಂರಕ್ಷಣೆ ಜಾಗೃತಿಗೆ ಜುಲೈ 29 ರಂದು ಅಚರಿಸಲಾಗುತ್ತದೆ.


from India & World News in Kannada | VK Polls https://ift.tt/3hLNtwi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...