ನಮ್ಮ ಮೆಟ್ರೋ: ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿಗೆ ಬಿಎಸ್‌ವೈ ಚಾಲನೆ

ಬೆಂಗಳೂರು: ನಮ್ಮ ಮೆಟ್ರೋದ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗುರುವಾರ ಚಾಲನೆ ನೀಡಿದ್ದಾರೆ. ಕಂಟೋನ್ಮೆಂಟ್‌ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗದ ಕಾಮಗಾರಿ ಆರಂಭಗೊಳ್ಳುತ್ತಿದ್ದು ಬಿಎಸ್‌ವೈ ಈ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದರು. ಯೋಜನೆಯ ಎರಡನೇ ಹಂತದ ಸುರಂಗ ಮಾರ್ಗವು ಜಯನಗರ ಅಗ್ನಿಶಾಮಕ ಕೇಂದ್ರದ ಸಮೀಪವಿರುವ ದಕ್ಷಿಣ ರಾಂಪ್‌ನಿಂದ ನಾಗವಾರ ನಿಲ್ದಾಣದ ಬಳಿಯ ಉತ್ತರ ರಾಂಪ್‌ವರೆಗೆ 13.9 ಕಿ. ಮೀ ಸುರಂಗ ಮಾರ್ಗದ ಕಾರಿಡಾರ್‌ ಅನ್ನು ಒಳಗೊಂಡಿದೆ. ಇದರಲ್ಲಿ 12 ನೆಲಮಹಡಿ ನಿಲ್ದಾಣಗಳು ಹಾಗೂ 10.37 ಕಿಲೋ ಮೀಟರ್‌ ಅವಳಿ ಸುರಂಗ ಮಾರ್ಗಗಳನ್ನು ಹೊಂದಿರುತ್ತವೆ. ಸಂಪೂರ್ಣ ಸುರಂಗ ಮಾರ್ಗದ ನಿರ್ಮಾಣ ಕೆಲಸವನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಆರ್‌ಟಿ 03 ಪ್ಯಾಕೇಜ್‌ನಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಶಿವಾಜಿನಗರ ನಿಲ್ದಾಣಕ್ಕೆ ಮತ್ತು ಕಂಟೇನ್ಮೆಂಟ್‌ ನಿಲ್ದಾಣದಿಂದ ಟ್ಯಾನರಿ ರಸ್ತೆಯಲ್ಲಿರುವ ಶಾದಿ ಮಹಲ್‌ ವರೆಗೆ 2.88 ಕಿ.ಮೀ ಉದ್ದದ ಸುರಂಗ ಮಾರ್ಗ ಹಾಗೂ ಕಂಟೋನ್ಮೆಂಟ್‌ ಮತ್ತು ಪಾಟರಿ ಟೌನ್‌ ನೆಲದಡಿ ನಿಲ್ದಾಣಗಳ ಕಾಮಗಾರಿ ಒಳಗೊಂಡಿರುತ್ತದೆ ಎಂದು ರೈಲು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/30brWaB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...