ಕೋವಿಡ್ ಚರ್ಚಿಸಲು ವಿಶೇಷ ಅಧಿವೇಶನ ಬೇಕು: ವರಸೆ ಬದಲಿಸಿದ ಅಶೋಕ್ ಗೆಹ್ಲೋಟ್!

ಜೈಪುರ್: ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಕರೆಯುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗಾಗಿ ವಿಶೇಷ ಅಧಿವೇಶನ ಕರೆಯುವಂತೆ. ಮುಖ್ಯಮಂತ್ರಿ ಬಣ ನಿರಂತರವಾಗಿ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ. ಆದರೆ ರಾಜ್ಯಪಾಲರು ಮಾತ್ರ ಈ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮಾತಿನ ವರಸೆ ಬದಲಿಸಿರುವ ಅಶೋಕ್ ಗೆಹ್ಲೋಟ್, ಬಹುಮತ ಸಾಬೀತಾಗಾಗಿ ವಿಶೇಷ ಅಧಿವೇಶನಕ್ಕೆ ಆಗ್ರಹಿಸುತ್ತಿಲ್ಲ ಬದಲಿಗೆ ರಾಜ್ಯದಲ್ಲಿನ ಕೊರೊನಾ ವೈರಸ್ ಪರಿಸ್ಥಿತಿ ಅವಲೋಕಿಸಲು ವಿಶೇಷ ಅಧಿವೇಸನ ಕರೆಯುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಸದಸ್ಯರ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರುವ ನಿಟ್ಟಿನಲ್ಲಿ ವಿಶೇಷ ಅಧಿವೇಶನದ ಅವಶ್ಯಕತೆ ಇದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಜುಲೈ 31ರಂದು ವಿಶೇಷ ಅಧಿವೇಶನ ಕರೆಯುವಂತೆ ಮತ್ತೊಮ್ಮೆ ರಾಜ್ಯಪಾಲ ಕಾಲರಾಜ್ ಮಿಶ್ರಾ ಅವರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಳಿಕೊಂಡಿದ್ದಾರೆ. ಗೆಹ್ಲೋಟ್ ಕೋವಿಡ್ ಚರ್ಚೆ ಎಂಬ ಕಾರಣ ಕೊಡುತ್ತಿರುವುದರಿಂದ ರಾಜ್ಯಪಾಲ ಕಾಲರಾಜ್ ಮಿಶ್ರಾ ಸಂಕಷ್ಟಕ್ಕೆ ಸಿಲುಕಿದ್ದು, ಜುಲೈ31ರಂದು ವಿಶೇಷ ಅಧಿವೇಶನ ಕರೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


from India & World News in Kannada | VK Polls https://ift.tt/3jC85Jr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...