ಬೆಡ್‌ ಇಲ್ಲ, ವೆಂಟಿಲೇಟರ್‌ ಇಲ್ಲ! ಉಸಿರಾಟದ ಸಮಸ್ಯೆಯ ರೋಗಿಯ ಪರದಾಟ ಕೇಳೋರಿಲ್ಲ!

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಸಮಸ್ಯೆ ಅನುಭವಿಸುತ್ತಿರುವ ರೋಗಿಯೊಬ್ಬರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಹಾಗೂ ಕೋವಿಡ್‌ ತಪಾಸಣೆಯ ವರದಿ ಕೊಡಿ ಎಂದ ನೆಪ ಹೇಳಿ ಸತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚೊಕ್ಕಸಂದ್ರದ ನಿವಾಸಿ 55 ವರ್ಷದ ಸುಬ್ರಮಣಿ ಎಂಬುವವರಿಗೆ ಸೋಮವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ಹಲವು ಖಾಸಗಿ ಆಸ್ಪತ್ರೆಗಳಿಗೆ ಅವರ ಪುತ್ರ ಫೋನ್ ಕರೆ ಮಾಡಿದ್ದಾರೆ. ಆದರೆ ಕೋವಿಡ್‌ ತಪಾಸಣೆ ವರದಿ ಹಾಗೂ ಬೆಡ್‌ಗಳ ಕೊರತೆ ಕಾರಣ ನೀಡಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲು ಅವಕಾಶ ನೀಡಲಿಲ್ಲ. ದಾಸರಹಳ್ಳಿಯ ಪ್ರಕ್ರಿಯ ಆಸ್ಪತ್ರೆಯಿಂದಯಿಂದ ಹಿಡಿದು ಎಂ.ಎಸ್ ರಾಮಯ್ಯ, ಕೊಲಂಬಿಯ ಏಷಿಯಾ, ಪೀಪಲ್ ಟ್ರೀ, ಸಪ್ತಗಿರಿ ಎಲ್ಲಾ ಕಡೆ ರಾತ್ರಿಯಿಂದ ಪ್ರಯತ್ನ ನಡೆಸಿದರೂ ಚಿಕಿತ್ಸೆಗಾಗಿ ದಾಖಲು ಮಾಡಿಕೊಳ್ಳಲಿಲ್ಲ. ಈಗ ಸದ್ಯಕ್ಕೆ ಅವರು ಬೌರಿಂಗ್ ಆಸ್ಪತ್ರೆಲ್ಲಿ ದಾಖಲಿಸಿಕೊಳ್ಳಲಾಗಿದ್ದರೂ ಇನ್ನೂ ವೆಂಟಿಲೇಟರ್‌ ವ್ಯವಸ್ಥೆಯನ್ನು ನೀಡಿಲ್ಲ ಎಂದು ರೋಗಿಯ ಪುತ್ರ ವೆಂಕಟೇಶ್ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಸುಧಾಕರ್‌, ಆರೋಗ್ಯ ಸಚಿವ ಶ್ರೀರಾಮುಲು ಗಮನ ಹರಿಸಬೇಕಾಗಿದೆ. ಬೆಡ್‌, ಕೋವಿಡ್‌ ತಪಾಸಣೆ ವರದಿ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆಯನ್ನು ನಿರಾಕರಣೆ ಮಾಡುತ್ತಿವೆ. ಇಂತಹ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.


from India & World News in Kannada | VK Polls https://ift.tt/3jNBssg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...