ಮತ್ತೆ 47 ಚೀನಾ ಆ್ಯಪ್ ಮೇಲೆ ನಿಷೇಧ ಹೇರಿದ ಕೇಂದ್ರ: ಮೋದಿ ಹೊಡೆತಕ್ಕೆ ಪೆಚ್ಚಾದ ಡ್ರ್ಯಾಗನ್!

ನವದೆಹಲಿ: ಗಡಿ ತಂಟೆಗೆ ಬಂದ ಚೀನಾಗೆ ಆ್ಯಪ್ ನಿಷೇಧದ ಹೊಡೆತ ನೀಡಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇದೀಗ ಮತ್ತೆ 47 ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಭಾರೀ ಹೊಡೆತ ನೀಡಿದೆ. ಈಗಾಗಲೇ 59 ಚೀನಿ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ್ದ ಮೋದಿ ಸರ್ಕಾರ, ಇದೀಗ ಹೊಸದಾಗಿ 47 ಆ್ಯಪ್‌ಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ಮೂಲಕ ಎರಡನೇಬಾರಿ ಚೀನಾಗೆ ಭಾರೀ ಆಘಾತ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸುರಕ್ಷತೆ ದೃಷ್ಟಿಯಲ್ಲಿ ಚೀನಾದ 47 ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ನಿಷೇಧ ಹೇರಲಾಗಿದ್ದ 59 ಆ್ಯಪ್‌ಗಳ ಹೊಸ ಅವತರಣಿಕೆಗಳಾದ ಈ 47 ಆ್ಯಪ್‌ಗಳ ಬಳಕೆಯ ಮೇಲೂ ನಿಷೇಧ ಹೇರಲಾಗಿದೆ ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಒಟ್ಟು 106 ಆ್ಯಪ್‌ಗಳ ಮೇಲೆ ನಿಷೇಧ: ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆ ನಡೆಸಿ ಭಾರತೀಯ ಸೈನಿಕರ ಸಾವಿಗೆ ಕಾರಣವಾದ ಚೀನಾಗೆ ಪಾಠ ಕಲಿಸಲು ಈ ಹಿಂದೆ 59 ಚೀನಿ ಆ್ಯಪ್‌ಗಳನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೆ ಹೊಸದಾಗಿ 47 ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಟ್ಟು 106 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದಂತಾಗಿದೆ. ಇಷ್ಟೇ ಅಲ್ಲದೇ ಇನ್ನೂ 250 ಚೀನಿ ಆ್ಯಪ್‌ಗಳ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಇವುಗಳನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಮೋದಿ ಹೊಡೆತಕ್ಕೆ ಸುಸ್ತಾದ : ಇನ್ನು ಎರಡನೇ ಬಾರಿ ಆ್ಯಪ್ ನಿಷೇಧದ ಹೊಡೆತದಿಂದ ಸುಸ್ತಾಗಿರುವ ಚೀನಾ, ಈ ಆಘಾತದಿಂದ ಹೇಗೆ ಚೇತರಿಸಿಕೊಳ್ಳಲಿದೆ ಕಾದು ನೋಡಬೇಕಿದೆ. ಗಡಿಯಿಂದ ಸೈನ್ಯ ಹಿಂಪಡೆಯಲು ಮೀನಮೇಷ ಎಣಿಸುತ್ತಿರುವ ಚೀನಾವನ್ನು ಸರಿ ದಾರಿಗೆ ತರಲು ಆ್ಯಪ್ ನಿಷೇಧ ಎಂಬ ಅಸ್ತ್ರವನ್ನು ಮೋದಿ ಸರ್ಕಾರ ಎರಡನೇ ಬಾರಿ ಪ್ರಯೋಗಿಸಿರುವುದು ಗಮನಾರ್ಹ. ಒಟ್ಟಿನಲ್ಲಿ ಮತ್ತೆ 47 ಚೀನಿ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಾಗೆ ಆಘಾತ ನೀಡಲಾಗಿದ್ದು, ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ಅನಿವಾರ್ಯತೆಗೆ ಚೀನಾ ಸಿಲುಕಿದೆ ಎಂದು ಹೇಳಬಹದು.


from India & World News in Kannada | VK Polls https://ift.tt/2P0mmBu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...