ಪಂಜಾಬ್‌ ಪಿಯುಸಿ ವಿದ್ಯಾರ್ಥಿನಿಯರಿಗೆ ವಿತರಿಸಲು ರೆಡಿಯಾಯ್ತು 50,000 ಸ್ಮಾರ್ಟ್‌ಫೋನ್ಸ್‌..!

ಪಂಜಾಬ್: ಆನ್‌ಲೈನ್ ಶಿಕ್ಷಣಕ್ಕೆ ಸಹಾಯಕಾರಿಯಾಗಲೆಂದು 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ವಿತರಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮೊದಲ ಬ್ಯಾಚ್‌ನ 50,000 ಸ್ಮಾರ್ಟ್‌ಫೋನ್‌ಗಳು ವಿದ್ಯಾರ್ಥಿನಿಯರಿಗೆ ವಿತರಿಸಲು ಸಿದ್ಧವಾಗಿದೆ ಎಂದು ಸಿಎಂ ಕ್ಯಾ. ತಿಳಿಸಿದ್ದಾರೆ. ದೇಶದೆಲ್ಲೆಡೆ ವೈರಸ್ ಬಾಧಿಸಿರುವ ಹಿನ್ನೆಲೆ ಈ ವರ್ಷ ಆನ್‌ಲೈನ್ ಕ್ಲಾಸ್‌ಗಳನ್ನು ಮಾಡಲಾಗ್ತಿದ್ದು, ಹೀಗಾಗಿ ಮಕ್ಕಳಿಗೆ ಅನುಕೂಲವಾಗಲಿ ಅನ್ನುವ ದೃ‍ಷ್ಟಿಯಿಂದ ಯಾರ ಬಳಿ ಸ್ಮಾರ್ಟ್‌ ಫೋನ್‌ ಇಲ್ಲವೋ ಅವರಿಗೆ ಫೋನ್ ಕೊಡಿಸಲು ಪಂಜಾಬ್‌ ರಾಜ್ಯ ಸರ್ಕಾರ ಮುಂದಾಗಿದೆ. 2017ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ಕೊಡುವ ಆಶ್ವಾಸನೆಯನ್ನು ಪಂಜಾಬ್ ಕಾಂಗ್ರೆಸ್‌ ನೀಡಿತ್ತು. ಇದೀಗ ಕೊರೊನಾ ಕಾಲದಲ್ಲಿ ಆನ್‌ಲೈನ್‌ ಕ್ಲಾಸ್‌ಗೆ ಅನಿವಾರ್ಯವಾಗಿರುವುದರಿಂದ ಪಂಜಾಬ್ ಸರ್ಕಾರ ಫೋನ್ ಕೊಡಿಸೋಕೆ ಮುಂದಾಗಿದ್ದು, ಅತ್ತ ತಾನು ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯನ್ನೂ ತೀರಿಸಿದಂತಾಗಿದೆ. ಇದೇ ವೇಳೆ ಪಂಜಾಬ್ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಅವರು, 2017ರ ವಿಧಾನಸಭಾ ಚುನಾವಣೆ ವೇಳೆ ನಾವು ನೀಡಿದ್ದ 562 ಆಶ್ವಾಸನೆಗಳ ಪೈಕಿ 435 ಅಂಶಗಳನ್ನು ಜಾರಿ ತಂದಿದ್ದೇವೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3hMuEct

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...