ಸಿಎಂ ಪಟ್ಟ ಪಡೆಯಲೋ, ಡಿಸಿಎಂ ಸ್ಥಾನ ಉಳಿಸಿಕೊಳ್ಳಲೋ? ಸವದಿ ದೆಹಲಿ ಭೇಟಿ ನೈಜ ಉದ್ದೇಶವೇನು?

ಬೆಂಗಳೂರು: ಡಿಸಿಎಂ ದೆಹಲಿ ಭೇಟಿ ಹಾಗೂ ವರಿಷ್ಠರ ಜೊತೆಗಿನ ಚರ್ಚೆ ವಿವಿಧ ಆಯಾಮಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಉದ್ದೇಶ ಈ ಭೇಟಿಯ ಹಿಂದೆ ಇದೆ ಎಂದೇ ಚರ್ಚೆ ನಡೆಯುತ್ತಿದೆ. ಆದರೆ ಸವದಿ ಇವೆಲ್ಲಾ ಊಹಾಪೋಹ, ನನ್ನ ದೆಹಲಿ ಭೇಟಿಗೆ ಯಾವುದೇ ಅನ್ಯ ಉದ್ದೇಶವಿಲ್ಲ ಅಂತಿದ್ದಾರೆ. ಲಕ್ಷ್ಮಣ ಸವದಿ ದೆಹಲಿ ಭೇಟಿಯ ಹಿಂದೆ ನಾಯಕತ್ವ ಬದಲಾವಣೆ ಉದ್ದೇಶವಿದೆ ಎಂಬುವುದು ಪ್ರಮುಖವಾಗಿ ಕೇಳಿಬರುತ್ತಿರುವ ವಿಚಾರ. ಬಿಎಸ್‌ವೈ ಸರ್ಕಾರಕ್ಕೆ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಅವರ ವಯಸ್ಸು ಹಾಗೂ ಸದ್ಯದ ಪರಿಸ್ಥಿತಿಯ ಕಾರಣದಿಂದ ನಾಯಕತ್ವ ಬದಲಾವಣೆ ಅಗತ್ಯ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಬಿಎಸ್‌ವೈ ಬದಲು ಮುಂದಿನ ನಾಯಕ ಯಾರು ಎಂಬ ಚರ್ಚೆಯೂ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಲಕ್ಷ್ಮಣ ಸವದಿ ದಿಢೀರ್‌ ದೆಹಲಿ ಭೇಟಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚುನಾವಣೆಯಲ್ಲೂ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಲಕ್ಷ್ಮಣ ಸವದಿ ಸಿಎಂ ಪಟ್ಟಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂಬುವುದು ಒಂದು ಆಯಾಮದ ಚರ್ಚೆ. ಸವದಿಗೆ ಹೈಕಮಾಂಡ್‌ ಬೆಂಬಲವಿದೆ. ಅದರಲ್ಲೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಕೃಪಾಕಟಾಕ್ಷವಿದೆ ಎಂಬುವುದು ಈ ಚರ್ಚೆಗೆ ಮತ್ತಷ್ಟು ಮಹತ್ವ ನೀಡಿದೆ. ಆದರೆ ಇದು ಅಸಾಧ್ಯ ಎಂಬ ಮಾತೂ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಲಕ್ಷ್ಮಣ ಸವದಿ ಡಿಸಿಎಂ ಆಗಿರುವುದಕ್ಕೆ ಪಕ್ಷದಲ್ಲಿ ಒಂದು ಬಣದ ಅಸಮಾಧಾನವಿದೆ. ಈ ನಿಟ್ಟಿನಲ್ಲಿ ಡಿಸಿಎಂ ಸ್ಥಾನಕ್ಕಾಗಿ ಪಕ್ಷದಲ್ಲಿ ಪೈಪೋಟಿ ನಡೆಯಿತ್ತಿದೆ. ಸಚಿವ ಶ್ರೀರಾಮುಲು, ರಮೇಶ್ ಜಾರಕಿಹೊಳಿ ಡಿಸಿಎಂ ಪಟ್ಟಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಇದೀಗ ಸಂಪುಟ ಪುನಾರಚನೆಯ ಮಾತು ಕೂಡಾ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದು ತಮ್ಮ ಡಿಸಿಎಂ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂದು ಹೇಳುತ್ತಿವೆ ಮೂಲಗಳು. ಒಟ್ಟಿನಲ್ಲಿ ಸವದಿ ಸಿಎಂ ಆಗುತ್ತಾರಾ ಅಥವಾ ಡಿಸಿಎಂ ಆಗಿಯೇ ಮುಂದುವರಿಯುತ್ತಾರಾ ಎಂಬುವುದಕ್ಕೆ ಕಾಲವೇ ಉತ್ತರಿಸಲಿದೆ. ಅದೇ ಇದ್ದರೂ ಸವದಿಯ ದಿಢೀರ್ ದೆಹಲಿ ಭೇಟಿ ಹಲವು ಅನುಮಾನ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ.


from India & World News in Kannada | VK Polls https://ift.tt/2Pa3n7r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...