ಲಖನೌ: ಸುಪ್ರೀಂಕೋರ್ಟ್ನಿಂದ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಾಗಿನಿಂದಲೂ ದೇಶಾದ್ಯಂತ ರಾಮಭಕ್ತರು ಮತ್ತು ಇತರ ಧಾರ್ಮಿಕ ಮುಖಂಡರು ಹಲವು ತಿಂಗಳಿನಿಂದಲೂ ಅಯೋಧ್ಯೆಗೆ ರಾಮಲಲ್ಲಾನ ಹೆಸರಿಗೆ ಚಿನ್ನದ ಹಾಗೂ ಬೆಳ್ಳಿಯ ಗಟ್ಟಿಗಳು , ಮಣ್ಣಿನ ಇಟ್ಟಿಗೆಗಳನ್ನು ಕಳಿಸುತ್ತಲೇ ಇದ್ದಾರೆ. ಜತೆಗೆ ಅನೇಕ ಬೆಲೆ ಬಾಳುವ ಇತರ ವಸ್ತುಗಳನ್ನು ಮಂದಿರಕ್ಕೆ ಬಳಸಿಕೊಳ್ಳಲು ಕಳುಹಿಸಿಕೊಡಲಾಗಿದೆ. ಇವುಗಳನ್ನು ಭದ್ರವಾಗಿ ಕಾಯುವುದಕ್ಕಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೊ ಸಂದೇಶದ ಮೂಲಕ ವಿಎಚ್ಪಿ ಹಿರಿಯ ಮುಖಂಡ ಮತ್ತು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮನವಿ ಮಾಡಿ, '' ಸದ್ಯ ಟ್ರಸ್ಟ್ನ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಲಾಗಿದ್ದು ಅದಕ್ಕೆ ಮಾತ್ರ ಭಕ್ತಾದಿಗಳು ನೆರವನ್ನು ತಲುಪಿಸಬೇಕು'', ಎಂದಿದ್ದಾರೆ. ಚಿನ್ನ ಮತ್ತು ಬೆಳ್ಳಿಯನ್ನು ಕಳುಹಿಸುವುದನ್ನು ನಿಲ್ಲಿಸಲು ಕೂಡ ಭಕ್ತರಲ್ಲಿ ಕೋರಲಾಗಿದೆ. ರಾಮನ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಿದ ನಂತರ ಭಾರೀ ಸಂಖ್ಯೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಗಟ್ಟಿಗಳು ಬರುತ್ತಿದೆ. ಕೊರೊನಾ ಕರಿಛಾಯೆ ನೀಡುವವರಿಗೆ ಮೂಡಿಲ್ಲ. ಕೊರೊನಾ ಸಮಯದಲ್ಲೂ ಭಾರೀ ಸಂಖ್ಯೆಯಲ್ಲಿ ದೇಣಿಗೆ ಬರುತ್ತಿದೆ. ಇದನ್ನ ಸುರಕ್ಷಿತವಾಗಿ ಇಡುವ ಕೆಲಸವನ್ನ ಟ್ರಸ್ಟ್ ಮಾಡುತ್ತಿದೆ.
from India & World News in Kannada | VK Polls https://ift.tt/2EvWCL7